ಪುತ್ತಿಗೆ: ಆಗಸ್ಟ್ 3: ಪಾರಂಪರಿಕ ಇಸ್ಲಾಮಿಕ್ ಚಿಂತನೆಗಳನ್ನೂ ಉಲಮಾಗಳನ್ನೂ ನಿರಂತರವಾಗಿ ಸಮಾಜದ ಮುಂದೆ ಕಳಂಕಿತಗೊಳಿಸುವ ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಹಿಮಮಿ ಸಂಗಮ ಅಭಿಪ್ರಾಯಪಟ್ಟಿತು. ಇಂತಹ ನಕಲಿ ತ್ವರೀಖತ್ಗಳಿಗೆ ಬೆಂಬಲ ನೀಡುವ ನವೀನವಾದಿಗಳನ್ನೂ ಹೊಸ ಪ್ರಸ್ಥಾನವಾದಿಗಳನ್ನೂ ಪ್ರಬುದ್ಧ ಕೇರಳವು ಬಹಳ ಹಿಂದೆಯೇ ತಿರಸ್ಕರಿಸಿದೆ ಎಂದು ಸಂಗಮ ತಿಳಿಸಿತು.
ಇಸ್ಲಾಮಿನ ಸೌಂದರ್ಯವನ್ನು ಸಮಾಜಕ್ಕೆ ಪರಿಚಯಿಸುವ ನಿಸ್ವಾರ್ಥ ಉಲಮಾಗಳನ್ನು ಅಪಹಾಸ್ಯಕ್ಕೆ ಗುರಿಪಡಿಸಬಹುದು ಎಂಬ ಭಾವನೆಗೆ ಯಾವುದೇ ಬೆಲೆ ಇಲ್ಲ ಎಂದು ಸಂಗಮವು ಸ್ಪಷ್ಟಪಡಿಸಿತು. ಹೊಸ ಕಾಲದ ಪ್ರಬೋಧನಾ ಸಾಧ್ಯತೆಗಳು ಹಾಗೂ ನೂತನ ವಿಚಾರಗಳ ಕುರಿತು ವಿವಿಧ ಸೆಶನ್ ಗಳಲ್ಲಿ ಚರ್ಚೆ ನಡೆಯಿತು.
ಮುಹಿಮ್ಮಾತ್ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮಕ್ಕೆ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಜನರಲ್ ಸೆಕ್ರೆಟರಿ ಬಿ.ಎಸ್. ಅಬ್ದುಲ್ಲ ಕುಂಜಿ ಫೈಝಿ ಉದ್ಘಾಟಿಸಿದರು. ಝಿಯಾರತ್, ಮೌಲಿದ್ ಜಲ್ಸಾ, ವಿವಿಧ ವಿಷಯಗಳಲ್ಲಿ ಅಧ್ಯಯನ ತರಗತಿಗಳು ಹಾಗೂ ಶೈಖುನಾ ಆಲಂಪಾಡಿ ಉಸ್ತಾದ್ ಅನುಸ್ಮರಣಾ ಮಜ್ಲಿಸ್ ಸಂಗಮದ ಅಂಗವಾಗಿ ನಡೆದವು. ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಝಿಯಾರತ್ಗೆ ನೇತೃತ್ವ ವಹಿಸಿದರೆ, ಅಬ್ದುರ್ರಹ್ಮಾನ್ ಅಹ್ಸನಿ ಮತ್ತು ಅಬ್ದುಸ್ಸಲಾಂ ಅಹ್ಸನಿ ಕಾಮಿಲ್ ಸಖಾಫಿ ಅಧ್ಯಯನ ತರಗತಿಗಳನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಹಿಮಮೀಸ್ ಅಸೋಸಿಯೇಷನ್ನ 2026–28ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಹಿಮಮಿ ಗೋಸಾಡ, ಪ್ರಧಾನ ಕಾರ್ಯದರ್ಶಿಯಾಗಿ ಮುಬೀನ್ ಹಿಮಮಿ ಸಖಾಫಿ ಬೈದಲ ಹಾಗೂ ಫಿನಾನ್ಸ್ ಕಾರ್ಯದರ್ಶಿಯಾಗಿ ಉಮರ್ ಹಿಮಮಿ ಸಖಾಫಿ ಕೊಳಿಯೂರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಅಬೂಬಕ್ಕರ್ ಹಿಮಮಿ ಕುಪ್ಪೆಟ್ಟಿ, ರಾಶಿದ್ ಹಿಮಮಿ ಸಖಾಫಿ ಪಳ್ಳತ್ತೂರು ಮತ್ತು ಎಮ್ಮೆಸ್ಸೆಂ ಜುನೈದ್ ಹಿಮಮಿ ಕಕ್ಕಿಂಜೆ, ಕಾರ್ಯದರ್ಶಿಗಳಾಗಿ ಸ್ವಫ್ವಾನ್ ಹಿಮಮಿ ಸಖಾಫಿ ಆದೂರು, ಹಾಫಿಳ್ ಜಮಾಲ್ ಹಿಮಮಿ ಹಾಗೂ ಖಲೀಲ್ ಹಿಮಮಿ ಪಚ್ಚಂಬಳ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ಮೂಸಾ ಸಖಾಫಿ ಕಳತ್ತೂರು ನಿರ್ವಹಿಸಿದರು.
ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಸಯ್ಯಿದ್ ಇಬ್ರಾಹಿಂ ಖಲೀಲ್ ಅಹ್ದಲ್ ತಂಙಳ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕೊಡಗು, ಅಬ್ದುರ್ರಹ್ಮಾನ್ ಅಹ್ಸನಿ, ಮೂಸಿ ಸಖಾಫಿ ಕಳತ್ತೂರು, ಅಬೂಬಕ್ಕರ್ ಕಾಮಿಲ್ ಸಖಾಫಿ, ಉಮರ್ ಸಖಾಫಿ ಕರ್ನೂರು, ಅಬ್ದುಸ್ಸಲಾಂ ಅಹ್ಸನಿ ಪಝಮಳ್ಳೂರು, ಮುಸ್ತಫಾ ಸಖಾಫಿ ಪಟ್ಟಾಂಬಿ, ಜಮಾಲ್ ಸಖಾಫಿ ಪೆರ್ವಾಡ್, ಅಬ್ದುಲ್ಲಾ ಅಹ್ಸನಿ, ಮುಸ್ತಫಾ ಹಿಮಮಿ ಮೊಂಟುಗೋಳಿ, ಹಸನ್ ಹಿಮಮಿ, ಸುಹೈಲ್ ಸುರೈಜಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಶ್ರಫ್ ಹಿಮಮಿ ಸಖಾಫಿ ಉಳುವಾರ್ ಸ್ವಾಗತಿಸಿದರು. ಮುಬೀನ್ ಹಿಮಮಿ ಕಾಮಿಲ್ ಸಖಾಫಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ