janadhvani

Kannada Online News Paper

ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ

<p>ವಿಟ್ಲ / ಸೂರಿಕುಮೇರು: ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ (AIA) ಕುದುಂಬ್ಲಾಡಿ ಸಂಸ್ಥೆಯ ಉಪಾಧ್ಯಕ್ಷರೂ, ಮುರ್ಶಿದು ದಅ್‌ವಾ ಅಲ್-ಇಸ್ಲಾಮಿಯ್ಯಾ (MDI) ಸೂರಿಕುಮೇರು…</p>

ವಿಟ್ಲ / ಸೂರಿಕುಮೇರು: ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ (AIA) ಕುದುಂಬ್ಲಾಡಿ ಸಂಸ್ಥೆಯ ಉಪಾಧ್ಯಕ್ಷರೂ, ಮುರ್ಶಿದು ದಅ್‌ವಾ ಅಲ್-ಇಸ್ಲಾಮಿಯ್ಯಾ (MDI) ಸೂರಿಕುಮೇರು ಇದರ ಅಧ್ಯಕ್ಷರೂ ಆಗಿರುವ ಎನ್.ಎಂ. ಅಬ್ದುರ್ರಝ್ಝಾಖ್ ಮದನಿ ನಿಟ್ಟೆ ಅವರು ಪವಿತ್ರ ಉಮ್ರಾ ನಿರ್ವಹಣೆಗಾಗಿ ಆಗಸ್ಟ್ 5, 2026ರಂದು ಹೊರಟಿದ್ದಾರೆ.

ಶೈಖುನಾ ಎಂ.ಇ. ಅಬ್ದುರ್ರಝ್ಝಾಖ್ ಮದನಿ, ಕಾಮಿಲ್ ಸಖಾಫಿ ಸೂರಿಕುಮೇರು ಉಸ್ತಾದರ ಪೂರ್ವ ವಿದ್ಯಾರ್ಥಿ ಸಂಘಟನೆಯಾಗಿರುವ ‘MDI’ ಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಇವರ ಈ ಪವಿತ್ರ ಯಾತ್ರೆಯಲ್ಲಿ ಅಲ್ಲಾಹು ಬರಕತ್ ಮತ್ತು ಸಮೃದ್ಧಿಯನ್ನು ಕರುಣಿಸಲಿ. ಅವರ ಉಮ್ರಾ ಹಾಗೂ ಪ್ರವಾದಿ ಚರ್ಯೆಯ ದರ್ಶನ (ಝಿಯಾರತ್) ಸ್ವೀಕೃತಗೊಳ್ಳಲಿ (ಮಖ್‌ಬೂಲ್) ಎಂದು ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಪ್ರಾರ್ಥಿಸಿ ಬೀಳ್ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ (AIA) ಕುದುಂಬ್ಲಾಡಿ ಹಾಗೂ ಮುರ್ಶಿದು ದಅ್‌ವಾ ಅಲ್-ಇಸ್ಲಾಮಿಯ್ಯಾ (MDI) ಸೂರಿಕುಮೇರು ಸಂಸ್ಥೆಗಳ ಪ್ರಮುಖರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿರಿ...