ಬಂಟ್ವಾಳ: ಕೆದಿಲ ಗ್ರಾಮದ ಕುದುಂಬ್ಲಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯಲ್ಲಿ ಜಲಾಲಿಯ್ಯಾ ಆಧ್ಯಾತ್ಮಿಕ ಮಜ್ಲಿಸ್, ಮರ್ಹಬಾ ಯಾ ರಬೀಅ್, ಅಗಲಿದ ಮಹಾತ್ಮರ ಅನುಸ್ಮರಣೆ ಕಾರ್ಯಕ್ರಮಗಳು ಆಗಸ್ಟ್-6ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.
ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಕ್ಯಾಂಪಸ್ನಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಿಗೆ ಸಯ್ಯಿದ್ ಹಂಝ ತಙ್ಙಳ್ ಅಲ್ ಹಾದಿ ಪಾಟ್ರಕೋಡಿ,
ಸಯ್ಯಿದ್ ಯು.ಪಿ.ತಙ್ಙಳ್ ಸಾಲೆತ್ತೂರು,
ಸಂಸ್ಥೆಯ ಸಾರಥಿ ಶೈಖುನಾ ಎಂ.ಇ ಅಬ್ದುರ್ರಝ್ಝಾಖ್ ಮದನಿ, ಕಾಮಿಲ್ ಸಖಾಫಿ ಸೂರಿಕುಮೇರು, ಅಕ್ಬರ್ ಅಲಿ ಸಅದಿ ಹಂಡೇಲು, ಸಾಬಿತ್ ಸಅದಿ ಅಳಕ್ಕೆ ಸೇರಿದಂತೆ ಅನೇಕ ಉಲಮಾ ಸಾದಾತ್ಗಳು ನೇತೃತ್ವ ನೀಡಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಮೋಗ್ರಾಲ್ ಮೈಮೂನ್ ನಗರದಲ್ಲಿ ಮುದರ್ರಿಸರಾಗಿರುವ
ಇರ್ಫಾನ್ ಸಖಾಫಿ ಕಿನ್ಯಾರವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಯೂಸುಫ್ ಹಾಜಿ ಸೂರಿಕುಮೇರು,
ನಿಝಾಮುದ್ದೀನ್ ಸಅದಿ ಸೂರಿಕುಮೇರು, ಜಲೀಲ್ ಹಾಜಿ ಸೂರಿಂಜೆ, ಶಫೀಕ್ ಸೂರಿಂಜೆ, ಕಾಸಿಂ ಹಾಜಿ ಮಿತ್ತೂರು, ಅಬೂಬಕ್ಕರ್ ಹಾಜಿ ಕೊಳಚಪ್ಪು,ಅಶ್ರಫ್ ಪೆರ್ನೆ ಸೇರಿದಂತೆ ಅನೇಕ ಉಲಮಾ-ಉಮರಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಹಿಳೆಯರಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಐ.ಕೆ ಇಕ್ಬಾಲ್ ಮದನಿ, ಕುಕ್ಕೋಟ್ಟು ಪ್ರಕಟನೆಗೆ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ
ಸಾದು ಹಾಜಿ: ಸಾಗ್ ಕುಟುಂಬದ ಪರಂಪರೆಯ ದಾರಿದೀಪ
ಗುರುವಾಯನಕೆರೆಯಲ್ಲಿ ನಾಳೆ ‘ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್’ ಹಾಗೂ ಬೃಹತ್ ‘ಸಮಸ್ತ ಸೆಂಟಿನರಿ ಜಾಥಾ’
ಸಾಗ್ ಕುಟುಂಬದ ‘ಗ್ರ್ಯಾಂಡ್ ಫ್ಯಾಮಿಲಿ ಮೀಟ್-2026: ಮೀಲಾದುನ್ನಬಿ ﷺ ಸಮಾವೇಶ ಹಾಗೂ ದುಆ ಮಜ್ಲಿಸ್