janadhvani

Kannada Online News Paper

ಎನ್.ಎನ್.ಓ ಉಡುಪಿ ಜಿಲಾ ಸಮಿತಿ: ಕಟ್ಟಡ ದಾನಿಗೆ ಸನ್ಮಾನ

ನಮ್ಮ ನಾಡ ಒಕ್ಕೂಟ (ರಿ) ಉಡುಪಿ ಜಿಲ್ಲೆಯ ವತಿಯಿಂದ ಉಡುಪಿ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪದಗ್ರಹಣ ಸಮಾರಂಭದಲ್ಲಿ ರುವ ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಸಮಿತಿಯ ಅಧೀನದಲ್ಲಿ ಕಾರ್ಕಳದಲ್ಲಿ ಕಾರ್ಯಚರಿಸುತ್ತಿರುವ ಎನ್ . ಎಸ್.ಅಕಾಡೆಮಿಗೆ ಭೂಮಿ ಹಾಗೂ ಕಟ್ಟಡವನ್ನು ಉಚಿತವಾಗಿ ನೀಡಿರುವ ದಾನಿ ಕೆ.ಎಸ್,ಶಬ್ಬೀರ್ ಸಾಹೇಬ್ ಮೂಡಬಿದ್ರೆ ಇವರನ್ನು ಸನ್ಮಾನಿಸುವ ಕಾರ್ಯಕ್ರಮ ಇತ್ತೀಚೆಗೆ ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಸಲೀಮ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ವೇದಿಕೆಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಕೆ.ಅನ್ವರ್ ಪಾಷಾ, ಕೆ.ಪಿ.ಸಿ.ಸಿ. ಅಲ್ಪ ಸಂಖ್ಯಾತರ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಸಿರಾಜ್, ಸನ್ಮಾನಿಸಿದರು.

ಉಡುಪಿಯ ಹೋಟೆಲ್ ಮಣಿಪಾಲ್ ಇನ್ ನ ಮಾಲೀಕರಾದ ಮೌಲಾನಾ ಇಬ್ರಾಹಿಂ ಗೋವಾ, ಏನ್.ಏನ್.ಓ ಸೆಂಟ್ರಲ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಹುಸೈನ್ ಕಾರ್ಕಳ, ಏನ್.ಏನ್.ಓ ಟ್ರಸ್ಟೀಗಳದ ಕೆ.ಎಸ್.ಎಂ.ಶಬ್ಬೀರ್ ಸಾಹೇಬ್, ಮೊಹಮ್ಮದ್ ಅಲಿ ಉಚ್ಚಿಲ, ಉಡುಪಿ ಜಿಲ್ಲಾ ಅಧ್ಯಕ್ಷ ಬೆಳ್ವೆ ಮುಸ್ತಾಕ್ ಅಹಮದ್ ಬೆಳ್ವೆ ಎನ್ಎನ್ಓ ಸೆಂಟ್ರಲ್ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಹುಸೈನ್ ಹೈಕಾಡಿ, ಉದ್ಯಾವರದ ಜಿಲ್ಲ ಸಂಯೋಜಕ ಶೈಖ್ ವಾಹಿದ್ ದಾವೂದ್ ಸಾಹೇಬ್, ನಿವೃತ್ತ ಕಮಾಂಡರ್ ಆದ ಪಿ.ಎ. ಮೊಹಿದ್ದೀನ್ ಸಾಹೇಬ್, ಸಮಾಜ ಸೇವಕರಾದ ಉಡುಪಿಯ ಪೀರ್ ಮೊಹಮ್ಮದ್ ಸಾಹೇಬ್, ಸಂಯೋಜಕ ಶೈಖ್ ವಾಹಿದ್ , ನಿಕಟಪೂರ್ವ ಪ್ರದಾನ ಕಾರ್ಯದರ್ಶಿ ಮೌಲಾನ ಜಮೀರ್ ಅಹಮ್ಮದ್ ರಶಾದಿ.
ಮೊಹಸಿನ್ ಅಹ್ಮದ್ ಕಾರ್ಕಳ, ಉಡುಪಿ ಜಿಲ್ಲೆಯ ನೂತನ ಪದಾಧಿಕಾರಿಗಳಾದ ಗಂಗೊಳ್ಳಿ ಮೊಹಮ್ಮದ್ ರಫೀಕ್ – ಜಿಲ್ಲಾ ಗೌರವ ಅಧ್ಯಕ್ಷರು, ಝಹೀರ್ ನಾಖುದಾ ಗಂಗೊಳ್ಳಿ – ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮೊಹಮ್ಮದ್ ಸುಹಾನ್ ಸಾಸ್ತಾನ – ಜಿಲ್ಲಾ ಸಂಘಟನಾ ಕಾರ್ಯದರ್ಶಿ, ನಕ್ವಾ ಯಾಹ್ಯಾ ಮಲ್ಪೆ – ಜಿಲ್ಲಾ ಖಜಾಂಜಿ, ಹಜ್ಮತ್ ಅಬ್ದುಲ್ ರಹಿಮಾನ್ ಹೆಜಮಾಡಿ – ಜಿಲ್ಲಾ ಕಾನೂನು ಸಲಹೆಗಾರರು, ಟಿ.ಎಂ.ಝಫ್ರುಲ್ಲಾಹ್ ಸಾಹೇಬ್ – ಜಿಲ್ಲಾ ಕ್ರೀಡಾ ಸಂಯೋಜಕರು, ಮೊಹಮ್ಮದ್ ಅರ್ಫಾತ್ ಬೆಳ್ವೆ – ಜಿಲ್ಲಾ ಯುವ ಸಂಘಟನೆಯ ಅಧ್ಯಕ್ಷರು, ಅಬ್ದುಲ್ ಖಾದರ್ – ಜಿಲ್ಲಾ ಯುವ ಸಂಯೋಜಕರು, ನಝೀರ್ ಸಾಹೇಬ್ ನೇಜಾರ್ – ಉಡುಪಿ ತಾಲೂಕು ಅಧ್ಯಕ್ಷರು, ಎಸ್. ದಸ್ತಗೀರ್ ಸಾಹೇಬ್ – ಕುಂದಾಪುರ ತಾಲೂಕು ಅಧ್ಯಕ್ಷರು, ಮಾಮ್ಬ್ಡ್ ಇಬ್ರಾಹಿಂ ಶಿರೂರು – ಬೈಂದೂರು ತಾಲೂಕು ಉಪಾಧ್ಯಕ್ಷರು, ಮೊಹಮ್ಮದ್ ಅನ್ಸಾರ್ – ಹೆಬ್ರಿ ತಾಲೂಕು ಉಪಾಧ್ಯಕ್ಷರು, ತಾಜುದ್ದೀನ್ ಇಬ್ರಾಹಿಂ – ಬ್ರಹ್ಮಾವರ ತಾಲೂಕು ಅಧ್ಯಕ್ಷರು, ಅಶ್ರಫ್ – ಕಾಪು ತಾಲೂಕು ಅಧ್ಯಕ್ಷರು ಹಾಗೂ ಶಾಕೀರ್ ಹುಸೈನ್ – ಕಾರ್ಕಳ ತಾಲೂಕು ಅಧ್ಯಕ್ಷರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com