ಬೆಂಗಳೂರು: ನಮ್ಮ ನಾಡ ಒಕ್ಕೂಟ(ಎನ್.ಎನ್. ಓ ) ಉಡುಪಿ ಜಿಲ್ಲಾ ಘಟಕದ ನಿಯೋಗವು ಡಿ. 27 ರಂದು ಹಜ್ ಮತ್ತು ಪೌರಾಡಳಿತ ಕರ್ನಾಟಕ ಸರ್ಕಾರದ ಸಚಿವರಾದ ರಹೀಮ್ ಖಾನ್ ರವರನ್ನು ಭೇಟಿಯಾಗಿ ಮಂಗಳೂರು ಏರ್ಪೋರ್ಟ್ ನಿಂದ ನೇರ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಲಾಯಿತು.
ಕರ್ನಾಟಕ ಸರಕಾರದ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಬಿ .ಝೆಡ್. ಝಮೀರ್ ಅಹ್ಮದ್ ಖಾನ್ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಇವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಉಡುಪಿ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಿ ,ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದ ನಿಯೋಗವು, ಉಡುಪಿ ಜಿಲ್ಲೆಗೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಲಾಯಿತು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಅನ್ವರ್ ಬಾಷಾ ರವರನ್ನು ಭೇಟಿಯಾಗಿ ಉಡುಪಿ ಜಿಲ್ಲೆಯ ವಿವಿಧ ಮಸೀದಿ ,ಮದ್ರಸಗಳಿಗೆ ಬಿಡುಗಡೆಯಾಗ ಬೇಕಾದ ಅನುದಾನಗಳನ್ನು ತ್ವರಿತವಾಗಿ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಲಾಯಿತು.
ಈ ನಿಯೋಗದ ನೇತೃತ್ವವನ್ನು ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ. ಟ್ರಸ್ಟ್ ಸದಸ್ಯರಾದ ಪೀರು ಸಾಹೇಬ್ ಉಡುಪಿ,ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಹೀರ್ ನಕೂದಾ ಗಂಗೊಳ್ಳಿ ,ಜಿಲ್ಲಾ ಖಜಾಂಚಿ ನಕ್ವ ಯಾಹ್ಯ ಉಡುಪಿ ಉಪಸ್ಥಿತರಿದ್ದರು.