ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಸಮಾಜ ಸೇವಕರು ಪರ್ಕಳ ಹಾಜಿ ಅಬ್ದುಲ್ಲಾ ಸಾಹೇಬ್ ರವರನ್ನು ಕಂಡ್ಲೂರಿನ ಜಾಮಿಯಾ ಝಿಯಾ ಉಲ್ ಊಲೂಮ್ ನಲ್ಲಿ ಜಮಾಅತುಲ್ ಮುಸ್ಲಿಮೀನ್ ಉಡುಪಿ ಜಿಲ್ಲೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಮಾಅತುಲ್ ಮುಸ್ಲಿಮೀನ್ ಉಡುಪಿ ಜಿಲ್ಲಾಧ್ಯಕ್ಷರಾದ ಮೌಲಾನ ಉಬೈದುಲ್ಲಾ ಅಬೂಬಕರ್ ನದ್ವೀ, ಪ್ರಧಾನ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ, ಜೊತೆ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಕರೀಂ ನದ್ವೀ, ಕೋಶಾಧಿಕಾರಿ ಖಾಲಿದ್ ಮಣಿಪುರ, ಉಪಾಧ್ಯಕ್ಷರುಗಳಾದ ಇಬ್ರಾಹಿಮ್ ಸಾಹೇಬ್ ಕೋಟ, ನಕ್ವ ಯಾಹ್ಯ ಸಾಹೇಬ್ ಮಲ್ಪೆ, ಬೆಳ್ವೆ ಜುಮ್ಮಾ ಮಸೀದಿ ಖತೀಬ್ ಮೌಲಾನ ಮೊಹಮ್ಮದ್ ರಫೀಕ್ ಬೆಳ್ವೆ, ಜಮಾಅತುಲ್ ಮುಸ್ಲಿಮೀನ್ ಉಡುಪಿ ಜಿಲ್ಲೆಯ ಸದಸ್ಯರುಗಳಾದ ಅನ್ವರ್ ಅಲಿ ಕಾಪು, ತಾಜುದ್ದೀನ್ ಬೃಹ್ಮಾವರ, ಹನೀಫ್ ಗುಲ್ವಾಡಿ, ಹುಸೇನ್ ಹೈಕಾಡಿ, ಮುನಾಫ್ ಕೋಡಿ, ಮುಹಮ್ಮದ್ ರಫೀಕ್ ವಂಡ್ಸೆ, ಅಬ್ದುಲ್ ಹಮೀದ್ ಬಸ್ರೂರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.