janadhvani

Kannada Online News Paper

ಕೆಸಿಎಫ್ ಒಮಾನ್ ಪ್ರತಿಭೋತ್ಸವ: ಸೊಹಾರ್ ಝೋನ್ ಚಾಂಪಿಯನ್

ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ವತಿಯಿಂದ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವವು ಜಾಬಿರ್ ಫಾರ್ಮ್ ಹೌಸ್ ಬರ್ಕದಲ್ಲಿ ಶುಕ್ರವಾರದಂದು ಬಹಳ ಯಶಸ್ವಿಯಾಗಿ ನಡೆಯಿತು. ಆರು ಝೋನ್ ಗಳನ್ನು (ಮಸ್ಕತ್, ಸೊಹಾರ್, ಸೀಬ್, ನಿಝ್ವ, ಬುರೈಮಿ, ಸಲಾಲ)
ಒಳಗೊಂಡ ಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನವನ್ನು ಕೆಸಿಎಫ್ ಸೊಹಾರ್ ಝೋನ್, ದ್ವಿತೀಯ ಸ್ಥಾನವನ್ನು ಕೆಸಿಎಫ್ ಸೀಬ್ ಝೋನ್ ಹಾಗೂ ತೃತೀಯ ಸ್ಥಾನ ವನ್ನು ಕೆಸಿಎಫ್ ಮಸ್ಕತ್ ಝೋನ್ ಪಡೆದು ಕೊಂಡರು.

ೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಎಸ್ ಪಿ ಹಂಝ ಸಖಾಫಿ ಉಸ್ತಾದ್ ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದ ದಕ್ಷಿಣ ಕನ್ನಡ ಉಡುಪಿ ಸಂಯುಕ್ತ ಖಾಝಿ ಶೈಖುನಾ ತಾಜುಲ್ ಫುಖಹಾ಼ಹ಼್
ಅಲ್ ಹಾಜ್ ಬೇಕಲ ಇಬ್ರಾಹಿಮ್ ಮುಸ್ಲಿಯಾರ್ ಇವರನ್ನು “ತಾಜುಲ್ ಉಲಮಾ ಅವಾರ್ಡ್” ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ ಉಸ್ತಾದ್ ರವರನ್ನು ಗೌರವಿಸಲಾಯಿತು. ಅಸ್ಸುಫ ತರಗತಿಯ ಎರಡನೇ ಹಂತದ ಒಮಾನ್ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದ ಮಹಮ್ಮದ್ ರಫೀಕ್ ಸಸ್ತಾನ, ದ್ವಿತೀಯ ಶ್ರೇಣಿಯನ್ನು ಪಡೆದ ನವಾಝ್ ಮಣಿಪುರ, ತೃತೀಯ ಶ್ರೇಣಿಯನ್ನು ಪಡೆದ ಅಶ್ರಫ್ ಕುತ್ತಾರ್ ಇವರಿಗೆ ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಜನವರಿ 27 ರಂದು ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ಮುಸ್ಲಿಂ ಜಮಾಅತ್ ಘೊಷಣಾ ಸಮಾವೇಶದ ಪೊಸ್ಟರ್ ಬಿಡುಗಡೆಗೊಳಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಪ್ರಕಾಶನ ವಿಭಾಗದ ಅಧ್ಯಕ್ಷ ಅಬ್ದುಲ್ ಹಮೀದ್ ಬಜ್ಪೆ, ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ, ಎಜುಕೇಶನ್ ವಿಭಾಗದ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಎಜುಕೇಶನ್ ವಿಭಾಗ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಇಹ್ಸಾನ್ ವಿಭಾಗದ ಕಾರ್ಯದರ್ಶಿ ರಹೀಮ್ ಸಅದಿ, ಪ್ರಕಾಶನ ವಿಭಾಗದ ಕಾರ್ಯದರ್ಶಿ ಪಿ.ಪಿ.ನಝೀರ್ ಹಾಜಿ ಕಾಶಿಪಟ್ಣ, ಆಡಳಿತ ವಿಭಾಗದ ಅಧ್ಯಕ್ಷ ಉಮರ್ ಸಖಾಫಿ ಮಿತ್ತೂರು, ಆಡಳಿತ ವಿಭಾಗ ಕಾರ್ಯದರ್ಶಿ ಹುಸೈನ್ ಮುಸ್ಲಿಯಾರ್ ಎಮ್ಮೆಮ್ಮಾಡ್, ಸಾಂತ್ವನ ವಿಭಾಗದ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಸದಸ್ಯರಾದ ಅಲಿ ಮುಸ್ಲಿಯಾರ್ ಬಹರೈನ್, ಐಸಿಎಫ್ ನೇತಾರ ಇಸ್ಮಾಯಿಲ್ ಸಖಾಫಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ
ಫ್ಯಾಮಿಲಿ ಮೀಟ್ ಹಾಗೂ ಮಹಿಳೆಯರ ಮತ್ತು ಮಕ್ಕಳ ವಿಭಾಗದ ಸ್ಪರ್ಧಾತ್ಮಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ನಾಯಕರುಗಳಾದ ಕಾಸಿಂ ಹಾಜಿ ನಿಝ್ವ, ಹಂಝ ಹಾಜಿ ಕನ್ನಂಗಾರ್, ಆರಿಫ್ ಕೊಡಿ, ಇಬ್ರಾಹಿಮ್ ಅತ್ರಾಡಿ, ಅಬ್ದುಲ್ ಗಫ್ಫಾರ್ ನಾವುಂದ, ಸಿದ್ದೀಕ್ ಮಾಂಬ್ಲಿ ಸುಳ್ಯ, ಅಕ್ಬರ್ ಉಪ್ಪಳ್ಳಿ, ಸಾದಿಕ್ ಸುಳ್ಯ, ಇಕ್ಬಾಲ್ ಎರ್ಮಾಳ್, ಸಂಶುದ್ದೀನ್ ಪಾಲ್ತಡ್ಕ, ಶಫೀಕ್ ಮಾರ್ನಬೈಲು, ಹಾರಿಸ್ ಕೊಳಕೇರಿ ಹಾಗೂ ಕೆಸಿಎಫ್ ಒಮಾನ್ ಎಕ್ಸ್ ಕ್ಯೂಟಿವ್ ಸದಸ್ಯರು, ಎಲ್ಲಾ ಝೋನ್, ಸೆಕ್ಟರ್ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ ಸ್ವಾಗತಿಸಿ, ಪ್ರತಿಭೋತ್ಸವ ಚಯರ್ಮೆನ್ ಕಲಂದರ್ ಬಾವ ಮತ್ತು ಕನ್ವೀನರ್ ಕಾಸಿಂ ಪೊಯ್ಯತ್ತಬೈಲು ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಕನ್ವೀನರ್ ಅಬ್ಬಾಸ್ ಮರಕಡ ಸುಳ್ಯ ವಂದಿಸಿದರು.

error: Content is protected !! Not allowed copy content from janadhvani.com