janadhvani

Kannada Online News Paper

ಮುಸ್ಲಿಂ ಸಮುದಾಯಕ್ಕೆ ಹೊಸ ಭರವಸೆಯಾಗಿದೆ ಕರ್ನಾಟಕ ಮುಸ್ಲಿಂ ಜಮಾಅತ್!

ಈ ವರದಿಯ ಧ್ವನಿಯನ್ನು ಆಲಿಸಿ


ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದಾಗಲೆಲ್ಲಾ ಇಲ್ಲಿನ ರಾಜಕೀಯ ನಾಯಕರ ಮುಂದೆ ನ್ಯಾಯಕ್ಕಾಗಿ ಅಂಗಲಾಚುವಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದರೂ, ನ್ಯಾಯ ಎನ್ನುವುದು ಮಾತ್ರ ಮರೀಚಿಕೆಯಾಗುತ್ತಲೇ ಬರುತ್ತಿದ್ದವು.
ಮುಸ್ಲಿಂ ಸಮುದಾಯದ ಸಹನೆಯು ದೌರ್ಬಲ್ಯವಾಗಿ ಕಾಣುವ ಪರಿಪಾಠ ಗಳಿಗೆ ಅಂತ್ಯ ಹಾಕಿಸುವ ಕಾಲ ಸನ್ನಿಹಿತವಾಗುತ್ತಿದೆ.
ಕನ್ನಡ ಮಣ್ಣಿನಲ್ಲಿ ಒಂದು ಕೋಟಿಯಷ್ಟು ಮುಸ್ಲಿಂ ಜನಸಂಖ್ಯೆಯಿದ್ದರೂ ಇಂದಿಗೂ ಮುಸ್ಲಿಮರನ್ನು ಕೇವಲ ಓಂಟ್ ಬ್ಯಾಂಕ್ ಗೆ ಮಾತ್ರ ಬಳಸಲ್ಪಡುತ್ತಿದ್ದಾರೆ.
ರಾಜಕೀಯವಾಗಿ ಮುಂದುವರಿಯದಿದ್ದರೂ ತಮ್ಮ ಲಾಭಕ್ಕಾಗಿ ಮುಸ್ಲಿಮರನ್ನು ಬಳಸುತ್ತಿರುವ ರಾಜಕೀಯ ಪಕ್ಷಗಳನ್ನು, ನಾಯಕರನ್ನು ನಿಯಂತ್ರಿಸುವ ಶಕ್ತಿಯೊಂದರ ಉದಯ ಇನ್ಶಾ ಅಲ್ಲಾಹ್ *ಕರ್ನಾಟಕ ಮುಸ್ಲಿಂ ಜಮಾಅತ್* ನ ಮೂಲಕ ಇದೇ ಬರುವ ಜನವರಿ 27 ರಂದು ಬೆಂಗಳೂರಿನಲ್ಲಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಮೂಲಕ ಘೋಷಣೆಯಾಗಲಿದೆ.
ಸಹಸ್ರಾರು ಮಂದಿ ಭಾಗವಹಿಸಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನೇತ್ರ ಸಾಕ್ಷಿಯಾಗಲು ನೀವೂ ರೆಡಿಯಾಗಿರಿ. ನಿಮ್ಮವರನ್ನೂ ಕರೆದುಕೊಂಡು ಬರುವುದರೊಂದಿಗೆ ಇನ್ನಷ್ಟು ಪ್ರಚಾರಗೊಳಿಸುವುದರ ಜೊತೆಗೆ, ವಿಜಯಗೊಳಿಸಿರಿ.

ಸ್ನೇಹಜೀವಿ ಅಡ್ಕ

error: Content is protected !! Not allowed copy content from janadhvani.com