ನರಿಂಗಾನ: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ- ನರಿಂಗಾನ ಇದರ ಆಶ್ರಯದಲ್ಲಿ ಈ ಬಾರಿ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಬೀಳ್ಕೊಡುವ ಸಮಾರಂಭ ಮೇ 3 ರಂದು ರಾತ್ರಿ ನಡೆಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಅಲ್ ಮದೀನ ದಅವಾ ಕಾಲೇಜು ಪ್ರಾಂಶುಪಾಲ ಸಯ್ಯಿದ್ ಉವೈಸ್ ಅಸ್ಸಖಾಫ್ ತಂಙಳ್ ದುಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘
ರೌಳಾ ಮದೀನ’ ಆನ್ ಲೈನ್ ಚಾನೆಲ್ ನ ಮುಹಮ್ಮದ್ ಕುಂಞಿ ಅಮ್ಜದಿ ಉದ್ಘಾಟಿಸಿದರು. ಅಲ್ ಮದೀನ ದುಬೈ ಕಮಿಟಿಯ ನಾಯಕ ಹಾಗೂ ಹಜ್ ಯಾತ್ರಿಕರೂ ಆಗಿರುವ ಇಬ್ರಾಹಿಂ ಮದನಿ ಸಾಮಣಿಗೆ ಸಂಸ್ಥೆಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಯತೀಂ ಮಕ್ಕಳಿಂದ ಹಜ್ ಯಾತ್ರಿಕರಿಗೆ ಶುಭಕೋರಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಪುರುಷರೂ ಮಹಿಳೆಯರೂ ಸೇರಿದಂತೆ ಆಸು ಪಾಸು ಪರಿಸರದ ಮೂವತ್ತು ಹಜ್ ಯಾತ್ರಿಕರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಅಲ್ ಮದೀನ ಆಡಳಿತ ಸಮಿತಿ ಸದಸ್ಯರಾದ ಏಷಿಯನ್ ಬಾವ ಹಾಜಿ, ಹಾಜಿ ಎನ್ ಎಸ್ ಕರೀಂ, ಎಸ್ ಕೆ ಖಾದರ್ ಹಾಜಿ ಮುಡಿಪು, ಕೆಸಿಎಫ್ ನಾಯಕ ಹಾಜಿ ನಝೀರ್ ಕೆಮ್ಮಾರ, ಉದ್ಯಮಿ ಸೂಫಿ ಹಾಜಿ ಪೊಟ್ಟೊಳಿಕೆ, ಅಲ್ ಮದೀನಾ ಸೌದಿ ನ್ಯಾಷನಲ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಉರ್ಣಿ, ಅಲ್ ಮದೀನ ಬೆಂಗಳೂರು ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ತಸ್ಲೀಲ್, ಮೊಹಮ್ಮದ್ ದುಲೀಫ್ ಬೆಂಗಳೂರು, ಕುಂಞಿ ಬಾವ ಹಾಜಿ ಕಲ್ಕಟ್ಟ , ನಿವೃತ್ತ ವಕ್ಫ್ ಜಿಲ್ಲಾಧಿಕಾರಿ ಹಾಜಿ ಅಬೂಬಕರ್, ಕೆಎಂಕೆ ಮಂಜನಾಡಿ, ಖಾಸಿಂ ಲತೀಫಿ ಮಂಜನಾಡಿ, ಮುಹಮ್ಮದ್ ನಾಸಿರ್ ಮದನಿ ಬಾಳೆಪುಣಿ, ಎನ್ ಎಂ ಮಜೀದ್ ಮಂಜನಾಡಿ ದುಬೈ, ಅಲ್ ಮದೀನ ಕತಾರ್ ಕಮಿಟಿಯ ಶರೀಫ್ ಎಚ್ ಕಲ್, ಇಲ್ಯಾಸ್ ಪೊಟ್ಟಳಿಕೆ, ಮುಹಮ್ಮದ್ ಹಾಜಿ ಜೀಲಾನಿ, ಖಾಲಿದ್ ಈಶ್ವರಮಂಗಳ, ಮುಹಮ್ಮದ್ ಈಶ್ವರಮಂಗಳ, ಮುಹಮ್ಮದ್ ಸಖಾಫಿ ಪೂಡಲ್, ಮುಹಮ್ಮದ್ ಮದನಿ ಪೂಡಲ್, ಮುಹಮ್ಮದ್ ಮುಡಿಪು, ಅಬ್ಬಾಸ್ ಹಾಜಿ ತೌಡುಗೋಳಿ, ಇಬ್ರಾಹೀಂ ಬಾವಿಚ್ಚ ಕಲ್ಕಟ್ಟ, ರಹೀಂ ದೇರಳಕಟ್ಟೆ (ಫ್ರೂಟ್ಸ್ ಮಾರ್ಕೆಟ್), ಅಲ್ ಮದೀನ ಮುದರ್ರಿಸರಾದ ಅಬ್ದುಲ್ಲ ಅಹ್ಸನಿ, ಅಬ್ದುರ್ರಹ್ಮಾನ್ ಅಹ್ಸನಿ, ಅಬೂಸಾಲಿಹ್ ಅಝಹರಿ ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಮಾಸ್ಟರ್ ನಾವೂರು ಸ್ವಾಗತಿಸಿದರು. ಅಬ್ದುರ್ರಹ್ಮಾನ್ ಮರ್ಝೂಕಿ ಅಹ್ಸನಿ ಧನ್ಯವಾದವಿತ್ತರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ