ಉಡುಪಿ : ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಇದರ ಅದೀನದಲ್ಲಿರುವ ಮಣಿಪಾಲ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಹಾಗೂ 2019/20 ರ ಸಾಲಿನ ನೂತನ ಸಮಿತಿ ರಚನೆಯು ಇತ್ತೀಚೆಗೆ ದಾರುಸ್ಸಲಾಂ ಮದ್ರಸ ಹೂಡೆ ಇಲ್ಲಿ ನಡೆಸಲಾಯಿತು.
ಸೆಕ್ಟರ್ ಅಧ್ಯಕ್ಷರಾದ ಸೈಯದ್ ಯೂಸುಪ್ ತಂಙಳ್ ಹೊಡೆ ಇವರ ಅಧ್ಯಕ್ಷತೆಯಲ್ಲಿ ಮೇಲ್ಘಟಕದ ವೀಕ್ಷಕರಾಗಿ ಆಗಮಿಸಿದ ರಝಾಕ್ ಉಸ್ತಾದ್ ದುವಾ ಮಾಡಿ ಉದ್ಘಾಟಿಸಿದರು.ಸೆಕ್ಟರ್ ಕಾರ್ಯದರ್ಶಿ ಇಮ್ತಿಯಾಝ್ ಸಂತೋಷ್ ನಗರ ಸ್ವಾಗತಿಸಿ, ವರದಿ ಹಾಗು ಲೆಕ್ಕಪತ್ರ ಮಂಡಿಸಿದರು. ಮೇಲ್ಘಟಕದ ಚುನಾವಣಾಧಿಕಾರಿಯಾದ ನಾಸೀರ್ ಭದ್ರಗಿರಿ ಸಂಘಟನಾ ಮಾಹಿತಿ ನೀಡಿದರು. ಡಿವಿಷನ್ ಕಾರ್ಯದರ್ಶಿ ನಝೀರ್ ಸಾಸ್ತಾನ ಸಭೆಯ ನೇತ್ರತ್ವ ವಹಿಸಿದರು.

ನಂತರ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ- ಶಾಹುಲ್ ದೊಡ್ಡಣಗುಡ್ಡೆ, ಪ್ರ.ಕಾರ್ಯದರ್ಶಿಯಾಗಿ-ಅನ್ಸಾರ್ ಸಂತೋಷ್ ನಗರ, ಕೋಶಾಧಿಕಾರಿಯಾಗಿ-ಫಾಯಿಝ್ ಹೊಡೆ, ಉಪಾಧ್ಯಕ್ಷರಾಗಿ-ಬಿಲಾಲ್ ಮಲ್ಪೆ, ಜೊತೆ ಕಾರ್ಯದರ್ಶಿಯಾಗಿ- ಇಮ್ತಿಯಾಝ್ ಸಂತೋಷ್ ನಗರ, ಕ್ಯಾಂಪಸ್ ಕಾರ್ಯದರ್ಶಿಯಾಗಿ-ಸಿಹಾನ್ ಹೂಡೆ ಇವರನ್ನು ಆರಿಸಲಾಯಿತು.
ಡಿವಿಷನ್ ಕೌನ್ಸಿಲ್ ಸದಸ್ಯರಾಗಿ-ಸಯ್ಯಿದ್ ಯೂಸುಫ್ ಹೂಡೆ, ಫಯಾಝ್ ಹೂಡೆ, ಇಮ್ತಿಯಾಝ್, ಅನ್ಸಾರ್, ಸಿದ್ದೀಕ್ ಸಂತೋಷ್ ನಗರ, ಶಾಹುಲ್, ಅಬ್ದುರ್ರಹ್ಮಾನ್ ಸಅದಿ, ಪಾರೂಕ್ ಪಿ.ಕೆ, ದೊಡ್ಡಣಗುಡ್ಡೆ, ಬಿಲಾಲ್ ಮಲ್ಪೆ, ನವಾಝ್ ಉಡುಪಿ, ಸಮೀರ್ ಮಿಸ್ಬಾಹಿ ನೇಜಾರು, ಇವರನ್ನು ಆರಿಸಲಾಯಿತು. ಸೆಕ್ಟರ್ ನೂತನ ಕಾರ್ಯದರ್ಶಿ ಅನ್ಸಾರ್ ಸಂತೋಷ್ ನಗರ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ