ಬ್ರಹ್ಮಾವರ :ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಇದರ ಅದೀನದಲ್ಲಿರುವ ಬ್ರಹ್ಮಾವರ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಹಾಗೂ 2018/19 ರ ಸಾಲಿನ ನೂತನ ಸಮಿತಿ ರಚನೆಯು ಇತ್ತೀಚೆಗೆ ಬದ್ರಿಯಾ ಜುಮ್ಮಾ ಮಸೀದಿ, ಭದ್ರಗಿರಿ ಮದ್ರಸ ಹಾಲ್’ನಲ್ಲಿ ನಡೆಸಲಾಯಿತು.
ಸೆಕ್ಟರ್ ಅಧ್ಯಕ್ಷರಾದ ಇಮ್ತಿಯಾಝ್ ಹೊನ್ನಾಳ ಇವರು ಅಧ್ಯಕ್ಷತೆ ವಹಿಸಿದರು, ಭದ್ರಗಿರಿ ಮಸೀದಿ ಖತೀಬರಾದ ಹಾರಿಸ್ ಝುಹ್ರಿ ದುವಾದೊಂದಿಗೆ ಸೆಕ್ಟರ್ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿ, ವರದಿ ಮಂಡಿಸಿದರು. ಸೆಕ್ಟರ್ ಕೋಶಾಧಿಕಾರಿ ಸುಲೈಮಾನ್ ರಂಗನಕೆರೆ ಲೆಕ್ಕಪತ್ರ ಮಂಡಿಸಿದರು.
ರಂಗನಕೆರೆ ಮಸೀದಿ ಖತೀಬರಾದ ಶರ್ವಾನಿ ರಝ್ವಿ ಉದ್ಘಾಟಿಸಿದರು. ಮೇಲ್ಘಟಕದ ವೀಕ್ಷಕರಾಗಿ ಆಗಮಿಸಿದ ಉಡುಪಿ ಡಿವಿಷನ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಸಹದಿ ಸಂಘಟನಾ ಮಾಹಿತಿ ನೀಡಿದರು. ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ನಝೀರ್ ಸಾಸ್ತಾನ ಸಭೆಯ ನೇತ್ರತ್ವ ವಹಿಸಿದರು.
ನಂತರ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ-ಶಂಶುದ್ದೀನ್ ರಂಗನಕೆರೆ, ಪ್ರ.ಕಾರ್ಯದರ್ಶಿಯಾಗಿ-ಫಯಾಝ್ ಗಾಂಧಿನಗರ, ಕೋಶಾಧಿಕಾರಿಯಾಗಿ-ರಶೀದ್ ಬೈಕಾಡಿ, ಉಪಾಧ್ಯಕ್ಷರಾಗಿ-ಶರ್ವಾನಿ ರಝ್ವಿ ರಂಗನಕೆರೆ,
ರಶೀದ್ ಸಾಸ್ತಾನ, ಜೊತೆ ಕಾರ್ಯದರ್ಶಿಯಾಗಿ-ರಾಹಿದ್ ಹೊನ್ನಾಳ, ಅಬ್ದುರ್ರಹ್ಮಾನ್ ರಂಗನಕೆರೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ-ಶಾಹಿಲ್ ಕೆ.ಟಿ ಭದ್ರಗಿರಿ, ಆರೀಪ್ ಸಾಸ್ತಾನ ಇವರನ್ನು ಆರಿಸಲಾಯಿತು.
ಡಿವಿಷನ್ ಕೌನ್ಸಿಲ್ ಸದಸ್ಯರಾಗಿ-ನಾಸೀರ್ ಭದ್ರಗಿರಿ, ಸುಲೈಮಾನ್ ರಂಗನಕೆರೆ, ಇಮ್ತಿಯಾಝ್ ಹೊನ್ನಾಳ, ಇಬ್ರಾಹಿಂ ರಂಗನಕೆರೆ, ನಝೀರ್ ಸಾಸ್ತಾನ, ಶಂಶುದ್ದೀನ್ ರಂಗನಕೆರೆ, ಸಿರಾಜ್ ಗಾಂಧಿನಗರ, ಫಯಾಝ್ ಗಾಂಧಿನಗರ, ಶರ್ವಾನಿ ರಝ್ವಿ, ನಯಾಝ್ ಭದ್ರಗಿರಿ ಇವರನ್ನು ಆರಿಸಲಾಯಿತು. ಸೆಕ್ಟರ್ ನೂತನ ಕಾರ್ಯದರ್ಶಿ ಫಯಾಝ್ ಗಾಂಧಿನಗರ ವಂದಿಸಿದರು.