janadhvani

Kannada Online News Paper

ಬಂಟ್ವಾಳ,ಜ.8: ಬಿಸಿರೋಡ್ ಮಿತ್ತಬೈಲ್ ಎಂಬಲ್ಲಿ ಸುದೀರ್ಘ ಕಾಲ ಧಾರ್ಮಿಕ ಬೋಧನೆಯಲ್ಲಿ ನಿರತರಾಗಿದ್ದ ಹಿರಿಯ ಧಾರ್ಮಿಕ ವಿದ್ವಾಂಸ, ಸಮಸ್ತ ಉಪಾಧ್ಯಕ್ಷರಾಗಿರುವ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದರು ಇಂದು ವಫಾತ್ ಆದರು.

ನಿಧನ ವಾರ್ತೆ ಕೇಳಿ ಮಿತ್ತಬೈಲ್ ಮಸೀದಿ ಪರಿಸರದಲ್ಲಿ ನೆರೆದ ಜನಸ್ತೋಮ

ಶೈಖುನಾ ಮಿತ್ತಬೈಲು ಉಸ್ತಾದ್! ಜ್ಞಾನದ ಮೇರು ಪರ್ವತ,ಕಿಂಚಿತ್ತೂ ಅಹಂಬಾವ ಸೋಂಕದ ಮಹಾವ್ಯಕ್ತಿ, ಅದ್ಯಾತ್ಮಿಕತೆಯಲ್ಲಿ ಮಿಂದು ಸರ್ವವನ್ನು ಗಳಿಸಿದ ಸೂಫೀವರ್ಯ, ಮುಸಲ್ಮಾನರ ಕಣ್ಮಣಿ….ಅಂತಹ ಮಹಾನು ಭಾವರೆ ಉಸ್ತಾದುಲ್ ಅಸಾತಿದೀನ್ ಶೈಖುನಾ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್.

ಮಿತ್ತಬೈಲಿನ ಕೀರ್ತಿ ಎಲ್ಲೆಡೆ ಹರಡಲು ಕಾರಣರಾದ ಮಹಾನರಾಗಿದ್ದಾರೆ ಶೈಖುನಾ.ದ್ವೀಪ ಪ್ರದೇಶವಾದ ಕಿಲ್ತಾನ್ ಎಂಬಲ್ಲಿ ವಿದ್ವಾಂಸ ಕುಟುಂಬದಲ್ಲಿ ಜನಿಸಿದ ಉಸ್ತಾದರು ಕೇರಳದ ಹಲವು ಸ್ಥಳಗಳಲ್ಲಿ ವಿದ್ಯಾರ್ಜನೆಗೈದು ವಿಶ್ವವಿಖ್ಯಾತ ಸ್ಥಳಗಳಲ್ಲಿ ಪದವಿಗಳನ್ನು ಪಡೆದಿದ್ದಾರೆ. ಮಿತ್ತಬೈಲನ್ನು ತನ್ನ ಸೇವಾಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡರು.

ಶೈಖುನಾರ ಸರಳತೆ ಅತ್ಯಧ್ಬುತ….!!!! ಅಹಂಕಾರದ ಒಂದು ಬಿಂದು ಕೂಡ ಜೀವನದಲ್ಲಿಲಿಲ್ಲದ ಉಸ್ತಾದರು ಸರ್ವ ಉಲಮಾಗಳಿಗೂ ಮಾದರಿಯಾಗಿದ್ದರು. ಜ್ಞಾನ ಸಾಗರವಾಗರುವ ಉಸ್ತಾದರು ತಮ್ಮ ಬಳಿ ಬರುವವರಿಗೆ ಆಶಾಕಿರಣವಾಗಿದ್ದರು.

ಸಮಸ್ತದ ಉಪಾಧ್ಯಕ್ಷರಾಗಿರುವ ಉಸ್ತಾದರು, ಕಾರ್ಯಕರ್ತರು ಸಂಚರಿಸಬೇಕಾದ ಮಾರ್ಗಸೂಚಿಗಳನ್ನು ಸಮಯಾನುಸಾರವಾಗಿ ನೀಡುತ್ತಿದ್ದರು. ಹಲವಾರು ಮೊಹಲ್ಲಾಗಳ ಖಾಝಿಯಾಗಿದ್ದ ಆ ಧನ್ಯ ನಾಯಕತ್ವವು ಜಿಲ್ಲೆಯ ಮುಸಲ್ಮಾನರ ಪಾಲಿಗೆ ಬಹುದೂಡ್ಡ ಆಸ್ತಿಯಾಗಿತ್ತು.ಅವರ ಅಗಲಿಕೆಯು ತುಂಬಲಾರದ ನಷ್ಟವಾಗಿದೆ.

ಅಲ್ಲಾಹನು ಆ ಮಹಾನುಭಾವರ ದರಜವನ್ನು ಉನ್ನತಿಗೇರಿಸಲಿ ಆಮೀನ್.

error: Content is protected !! Not allowed copy content from janadhvani.com