janadhvani

Kannada Online News Paper

ಮಡಂತ್ಯಾರ್ ಮಸೀದಿಗೆ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಭೇಟಿ

ಮಡಂತ್ಯಾರು:ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ರವರು ಗುರವಾರದಂದು ಮಡಂತ್ಯಾರು ನೂರುಲ್ ಹುದಾ ಜುಮಾ ಮಸೀದಿಗೆ ಭೇಟಿ ನೀಡಿ ದುಆ ಆಶೀರ್ವಚನ ನೀಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ನೂರುಲ್ ಹುದಾ ಮಸೀದಿಯ ಆಡಳಿತ ಸಮಿತಿಯ ವತಿಯಿಂದ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರನ್ನು ಸ್ಮರಣಿಕೆ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನಾಬ್ ಅಬ್ಬಾಸ್ ಹಾಜಿ ಉಳ್ಳಾಲ,ಜನಾಬ್ ಶಾಕಿರ್ ಹಾಜಿ ಹೈಸಂ ಕಣ್ಣೂರು,ಜನಾಬ್ ಮಮ್ತಾಜ್ ಆಲಿಯವರನ್ನು ಶೈಖುನಾ ಸುಲ್ತಾನುಲ್ ಉಲಮಾ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ವಾದಿ ಇರ್ಫಾನ್ ಚೆಯರ್ ಮ್ಯಾನ್ ಸಯ್ಯಿದ್ ಫಝಲ್ ಜಮಾಲುಲ್ಲೈಲಿ ತಂಙಳ್,ಸಯ್ಯಿದ್ ಅಬ್ದುಸ್ಸಲಾಂ ತಂಙಳ್ ಪೂಂಜಾಲಕಟ್ಟೆ, ಜಮಾಅತ್ ಅಧ್ಯಕ್ಷ ಜನಾಬ್ ನಝೀರ್ ಹಾಜಿ,ನಿರ್ದೇಶಕರಾದ ಜನಾಬ್ ಹೈದರ್ ಬಿ., ಉಪಾಧ್ಯಕ್ಷ ಜನಾಬ್ ಹಾಜಿ ಮುಹಮ್ಮದ್ ಶರೀಫ್,ಕೋಶಾದಿಕಾರಿ ಜನಾಬ್ ಇಸ್ಮಾಯಿಲ್ ಪಿ.ಎಮ್, ಗೌರವಾಧ್ಯಕ್ಷರಾದ ಜನಾಬ್ ಮಹಮ್ಮದ್ ಮಡಂತ್ಯಾರು, KCF ದೋಹ ಖತಾರ್ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಬ್ದುರ್ರಹ್ಮಾನ್ ಪುಂಜಾಲಕಟ್ಟೆ,,ಎಸ್ ಎಸ್ ಎಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಅಯ್ಯೂಬ್ ಮಹ್ಲರಿ,ಕೋಶಾಧಿಕಾರಿ ನಝೀರ್ ಮದನಿ ಸಹಿತ ಹಲವಾರು ಗಣ್ಯರು ಉಪಸ್ತಿತರಿದ್ದರು.

ನೂರುಲ್ ಹುದಾ ಜುಮಾ ಮಸೀದಿಯ ಖತೀಬರಾದ ಅಲ್ ಹಾಜಿ ಎಮ್.ಎ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com