janadhvani

Kannada Online News Paper

ಟಿವಿ ನಿರೂಪಕನಿಂದ ಪ್ರವಾದಿ ನಿಂದನೆ: ಲತ್ವೀಫೀಸ್ ಅಸೋಸಿಯೇಶನ್ ಖಂಡನೆ

ಮಂಗಳೂರು : ಇತ್ತೀಚೆಗೆ ಟಿವಿ ನ್ಯೂಸ್ ಚಾನೆಲ್ ನ ನಿರೂಪಕರೊಬ್ಬರು ಪ್ರವಾದಿ ಮುಹಮ್ಮದ್ (ಸ) ರವರ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿರುವುದನ್ನು ಬೆಳ್ತಂಗಡಿ ತಾಲೂಕು ಲತ್ವೀಫೀಸ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸುತ್ತದೆ.

ನಿರೂಪಕರು ಫ್ರೊಫಸರ್ ಭಗವಾನ್ ರವರ ಹೇಳಿಕೆಯನ್ನು ವಿಶ್ಲೇಷಿಸುವ ಮಧ್ಯೆ ಅನಗತ್ಯವಾಗಿ ಪ್ರವಾದಿ ಯವರ ಹೆಸರನ್ನು ಎಳೆದು ತಂದು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದ್ದಾರೆ.

ಮಾಧ್ಯಮಗಳು ಸರ್ವ ಧರ್ಮಗಳ ಮಧ್ಯೆ ಸ್ನೇಹ, ಸೌಹಾರ್ದತೆ ಸೃಷ್ಟಿಸುವ ಮಾಧ್ಯಮಗಳಾಗಬೇಕೇ ಹೊರತು ಕಂದಕ ಸೃಷ್ಟಿಸಬಾರದು. ಮಾಧ್ಯಮ ಧರ್ಮ ವನ್ನು ಪಾಲಿಸುವ ಜೊತೆಗೆ ಸರ್ವ ಧರ್ಮ ವನ್ನೂ ಗೌರವಿಸುವ ಸಾಮಾನ್ಯ ಜ್ಞಾನ ವಾದರೂ ನಿರೂಪಕನಿಗೆ ಇರಬೇಕು.

ಇಂತಹ ಅಪಾಯಕಾರಿ ನಿರೂಪಕನ ವಿರುದ್ಧ ಪೋಲಿಸ್ ಇಲಾಖೆ ಹಾಗೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕು ಲತ್ವೀಫೀಸ್ ಅಸೋಸಿಯೇಷನ್ ಅಧ್ಯಕ್ಷ ದಾವೂದ್ ಲತ್ವೀಫಿ ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

error: Content is protected !! Not allowed copy content from janadhvani.com