janadhvani

Kannada Online News Paper

ಕೊಡಗು ಜಿಲ್ಲಾ ಉಲಮಾ ಸಮಿತಿಯಿಂದ ಅಲ್ ಮದೀನ ಸಿಲ್ವರ್ ಜುಬಿಲಿ ಪ್ರಚಾರ ಸಂಗಮ

ಹಾಕತ್ತೂರು: ಪೆಬ್ರವರಿ1,2,3ರಂದು ನಡೆಯಲಿರುವ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಸಂಸ್ಥೆಯ ಸಿಲ್ವರ್ ಜುಬಿಲಿ ಕಾರ್ಯಕ್ರಮದ ಪ್ರಚಾರ ಸಂಗಮವು ಕೊಡಗಿನ ಹಾಕತ್ತೂರಿನಲ್ಲಿ ಅಲ್ ಮದೀನ ಸಂಸ್ಥೆಯ ಸಾರಥಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ನೇತೃತ್ವದಲ್ಲಿ ಕೊಡಗು ಜಿಲ್ಲಾ ಸಹಾಯಕ ಖಾಝಿ ಶೈಖುನಾ ಎಡಪ್ಪಾಲ್ ಮಹ್ಮೂದ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು‌.ಕೊಡಗು ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಹಾಫಿಳ್ ಸಅದಿ ಉಧ್ಘಾಟನೆಗೈದರು‌‌. ಅಲ್ ಮದೀನ ಮುದರ್ರಿಸ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ,ಸಂಸ್ಥೆಯ ಇಪ್ಪತೈದು ವರ್ಷಗಳ ಸಾಧನೆ,ಸಾಮಾಜಿಕ ಸೇವೆಗಳನ್ನು ಹೃಸ್ವ ರೂಪದಲ್ಲಿ ಪರಿಚಯಿಸಿದರು. ರಾಜ್ಯ ಸುನ್ನೀ ಸಂಘಟನೆಯ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಗೇರಿ ದಿಕ್ಸೂಚಿ ಭಾಷಣ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಜಂಯ್ಯತುಲ್ ಉಲಮಾ ಉಪಾಧ್ಯಕ್ಷ ಶಾದುಲಿ ಫೈಝಿ ಕೊಂಡಗೇರಿ,ಕೋಶಾಧಿಕಾರಿ ಹುಸೈನ್ ಸಖಾಫಿ ಎರುಮಾಡ್, ಕಬೀರ್ ಝುಹುರಿ, ಮುನೀರ್ ಸಅದಿ ಕೊಳಕೇರಿ, ಶಾದುಲಿ ಹಾಜಿ ಕೊಂಡಗೇರಿ, ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್ ಸುಂಟಿಕೊಪ್ಪ,ಇಕ್ಬಾಲ್ ಮರ್ಝೂಖಿ ಸಖಾಫಿ, ಮೊಹಿದಿನ್ ಕುಟ್ಟಿ ಕೊಳಕೇರಿ, ಹಾಕತ್ತೂರು ಜಮಾಅತ್ ಅಧ್ಯಕ್ಷ ಪಿ.ಎಂ. ಅಬ್ದುಲ್ಲಾ ಹಾಗೂ ಇನ್ನಿತರು ಉಪಸ್ಥಿತರಿದ್ದರು.

ರಾಜ್ಯ ಸುನ್ನೀ ನಾಯಕ ಉಮರ್ ಸಖಾಫಿ ಎಡಪ್ಪಾಲ್ ಸ್ವಾಗತಿಸಿ ನಿರೂಪಿಸಿದರು‌

error: Content is protected !! Not allowed copy content from janadhvani.com