janadhvani

Kannada Online News Paper

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಅಶಾಂತಿ ಉಂಟು ಮಾಡುವವರಿಗೆ ಕಠಿಣ ಶಿಕ್ಷೆಯಾಗಲಿ: ಎಸ್ಸೆಸ್ಸೆಫ್ ಕೊಡಗು

ಖುರ್‌ಆನನ್ನು ಅರ್ಥ ಮಾಡಿಕೊಂಡ ಯಾವೊಬ್ಬ ನೈಜ ಮುಸಲ್ಮಾನನು ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಲಾರ

ಸಾಮಾಜಿಕ ಜಾಲತಾಣದಲ್ಲಿ ಕೊಡವರ ಆರಾಧ್ಯ ದೈವ ಕಾವೇರಮ್ಮರನ್ನು ಅವಮಾನಿಸಿ ಕೊಡಗನ್ನೇ ತಲ್ಲಣಗೊಳಿದ್ದ ವಿವಾದವೊಂದು ಜಿಲ್ಲೆಯ ಪೋಲೀಸ್ ಅಧಿಕಾರಿಗಳ ಪ್ರಬುದ್ಧತೆಯ ಕಾರ್ಯಾಚರಣೆಯಿಂದ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿಯವರು, ಕೊಡವ ನಾಯಕರು ಮತ್ತು ಸಂಘಟನೆಗಳು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದು ಇದು ಶ್ಲಾಘನೀಯ,ಆದರೂ ಕೆಲವು ಪೂರ್ವಾಗ್ರಹ ಪೀಡಿತರು ಒಂದು ಸಮುದಾಯವನ್ನು ಗುರಿಯಾಗಿಸಿ ಟೀಕೆ ನಡೆಸಿರುವುದು ಹಾಗೂ ಓರ್ವ ಅಮಾಯಕ ಯುವಕನ ಮೇಲೆ ಮಿಥ್ಯಾರೋಪ ನಡೆಸಿ ಮಾನಹಾನಿ ಮಾಡಿರುವುದನ್ನು ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಅವರ ಮೇಲೂ ಪ್ರಕರಣ ದಾಖಲಾಗಬೇಕೆಂದು ಒತ್ತಾಯಿಸಿದೆ.

ಇತರ ಯಾವುದೇ ಧರ್ಮದ ಆರಾಧ್ಯ ದೈವಗಳನ್ನು ಅಪಹಾಸ್ಯ ಮಾಡಕೂಡದೆಂದು ಖುರ್‌ಆನ್ ಸ್ಪಷ್ಟವಾಗಿ ಹೇಳಿದೆ. ಹೀಗಿರುವಾಗ ಖುರ್‌ಆನನ್ನು ಅರ್ಥ ಮಾಡಿಕೊಂಡ ಯಾವೊಬ್ಬ ನೈಜ ಮುಸಲ್ಮಾನನು ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಲಾರ.
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಭಾವನೆ ಕೆರಳಿಸುವ ಒಂದು ದೊಡ್ಡ ತಂಡವೇ ನಕಲಿ ಖಾತೆಗಳ ಮೂಲಕ ಸಕ್ರಿಯವಾಗಿದೆ ಅದನ್ನೂ ಕೂಡ ಪೊಲೀಸ್ ಇಲಾಖೆ ಬೇಧಿಸಬೇಕು,
ಆರೋಪಿಗಳಿಗೆ ಯಾರೆಲ್ಲ ಕುಮ್ಮಕ್ಕು ನೀಡಿದ್ದಾರೆ ಎಂಬುದನ್ನು ಜನತೆಗೆ ತಿಳಿಸಬೇಕಿದೆ ಎಂದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಸಮುದಾಯದವರಾದರು ಅಪರಾಧಿಯ ಧರ್ಮ ನೋಡದೆ ಕ್ರಮ ಕೈಗೊಳ್ಳಬೇಕು, ಪ್ರಸ್ತುತ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್ ಇಲಾಖೆಯ ಕಾರ್ಯವೈಖರಿ ಅಭಿನಂದನಾರ್ಹ ಮತ್ತು ಇಲಾಖೆಯ ಮೇಲಿನ ಭರವಸೆಯನ್ನು ಹೆಚ್ಚಿಸಿದೆ ಎಂದು ಶಾಫಿ ಸಅದಿ ಹೇಳಿದರು.

error: Content is protected !! Not allowed copy content from janadhvani.com