ಕೊಡಗು: ಮರ್ಕಝ್ ಕೊಟ್ಟಮುಡಿಯ ದ್ವಿತೀಯ ಪಿಯುಸಿಯು ಎಂದಿನಂತೆ ಈ ವರ್ಷವು ಶೇ100 ಫಲಿತಾಂಶದೊಂದಿಗೆ ಉಜ್ವಲ ವಿಜಯವನ್ನು ಸಾಧಿಸಿದೆ. ಎಲ್ಲಾ 68 ವಿದ್ಯಾರ್ಥಿಗಳು ತೀರ್ಗಡೆಯಾಗುವುದರೊಂದಿಂಗೆ 21 ಡಿಸ್ಟಿಂಕ್ಷನ್, 46 ಫಸ್ಟ್ ಕ್ಲಾಸ್,1 ದ್ವಿತೀಯ ಕ್ಲಾಸ್ ನೊಂದಿಗೆ ಸಂಸ್ಥೆಗೆ ಅಭಿಮಾನ ತಂದಿದ್ದಾರೆ.
ಅದಲ್ಲದೇ, ಮರ್ಕಝ್ ಕೊಟ್ಟಮುಡಿಯ ವಿದ್ಯಾರ್ಥಿನಿ ಜುವೈರಿಯಾ ಎಂಬವರು ಕೊಡಗು ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಪಡಕೊಂಡು ಮರ್ಕಝ್ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ.
ನುರಿತ ಶಿಕ್ಷಕರ ನಿರಂತರ ಶ್ರಮ, ವಿದ್ಯಾರ್ಥಿನಿಯರ ಕಠಿಣ ಪರಿಶ್ರಮಕ್ಕೆ ಈ ವಿಜಯವು ಬಂದಿದೆ. ವಿದ್ಯಾರ್ಥಿನಿಯರ ಸಾಧನೆಗೆ ಬೋಧಕ ವೃಂದ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯು ಪ್ರಶಂಸೆ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.
ಈ ಸಂಸ್ಥೆಯಲ್ಲಿ ಸರ್ಕಾರಿ ಅಂಗೀಕೃತ ಸೈನ್ಸ್, ಕಾಮರ್ಸ್, ಆರ್ಟ್ಸ್ ನೊಂದಿಗೆ ಶರೀಅತ್ ಹಾದಿಯಾ ಕೋರ್ಸ್ ನ್ನೂ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಉತ್ತಮ ಹಾಸ್ಟೆಲ್ ವ್ಯವಸ್ಥೆ ಕೂಡ ಲಭ್ಯವಿದೆ.
ವಿ.ಸೂ: ಈಗಾಗಲೇ SSLC ಪೂರ್ಣಗೊಳಿಸಿರುವ ವಿದ್ಯಾರ್ಥಿಯರ ಪೋಷಕರು ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ.
7760738386
9611478725