janadhvani

Kannada Online News Paper

ಫೆ.21(ನಾಳೆ)ರಿಂದ ಇತಿಹಾಸ ಪ್ರಸಿದ್ಧ ಕೊಡಗು ಎಮ್ನೆಮ್ಮಾಡು ಮಖಾಂ ಉರೂಸ್ ಆರಂಭ

2025 ಫೆಬ್ರವರಿ 21 ರಿಂದ 28 ರ ತನಕ ಈ ವರ್ಷದ ಉರೂಸ್ ಕಾರ್ಯಕ್ರಮ ನಡೆಸುವುದಾಗಿ ಸಮಿತಿಯು ತಿಳಿಸಿದೆ.

ಮಡಿಕೇರಿ: ಇತಿಹಾಸ ಪ್ರಸಿದ್ಧ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕು ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಹಝ್ರತ್ ಸೂಫಿ ಶಹೀದ್ ವಲಿಯುಲ್ಲಾಹಿ ಖ ಸಿ ಮತ್ತು ಹಝ್ರತ್ ಸಯ್ಯಿದ್ ಹಸನ್ ಸಖಾಫ್ ಹಾಗೂ ಇನ್ನಿತರ ಪ್ರಮುಖ ಮಹಾತ್ಮರುಗಳ ಹೆಸರಿನಲ್ಲಿ ವರ್ಷಂಪ್ರತಿ ನಡೆಸಲ್ಪಡುವ ಉರೂಸ್ ಕಾರ್ಯಕ್ರಮವನ್ನು ಈ ವರ್ಷವು ಅತಿ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. 2025 ಫೆಬ್ರವರಿ 21 ರಿಂದ 28 ರ ತನಕ ಈ ವರ್ಷದ ಉರೂಸ್ ಕಾರ್ಯಕ್ರಮ ನಡೆಸುವುದಾಗಿ ಸಮಿತಿಯು ತಿಳಿಸಿದೆ.

ಫೆಬ್ರುವರಿ 21 ರಂದು ಮಖಾಂ ಝಿಯಾರತ್, ಸಾಮೂಹಿಕ ವಿವಾಹ ಕಾರ್ಯಕ್ರಮವು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಪ್ರಾರಂಭಗೊಳ್ಳಲಿದೆ. ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವ ವಹಿಸುವರು.ಹಾಫಿಝ್ ಅಬ್ದುಲ್ ರಾಝಿಕ್ ಫೈಝಿ ಮುಖ್ಯ ಪ್ರಭಾಷಣ ನಡೆಸುವರು.

ಫೆ.22 ಕ್ಕೆ ದ್ಸಿಕ್ರ್ ಹಲ್ಕ ಹಾಗೂ ಮತ ಪ್ರವಚನ ನೇತೃತ್ವ ಸಯ್ಯಿದ್ ಝೈನುದ್ದೀನ್ ಅಲ್ ಬುಖಾರಿ ಲಕ್ಷದ್ವೀಪ. ಮುಖ್ಯ ಪ್ರಭಾಷಣ ಉಸ್ಮಾನ್ ಜೌಹರಿ ನೆಲ್ಯಾಡಿ. 23 ಕ್ಕೆ ಖತಂ ದುಆ. ನೇತೃತ್ವ : ಸಯ್ಯಿದ್ ಸಲೀಂ ಅಲ್ ಬುಖಾರಿ ತಂಙಳ್. ಮುಖ್ಯ ಪ್ರಭಾಷಣ ಸಯ್ಯಿದ್ ವಿ ಪಿ ಅಬ್ದುಲ್ ರಹಿಮಾನ್ ದಾರಿಮಿ ಆಟೀರಿ ತಂಙಳ್ 24 ಕ್ಕೆ ಸಾರ್ವಜನಿಕ ಸಮ್ಮೇಳನ ನೇತೃತ್ವ ಸಯ್ಯಿದ್ ಮುಈನ್ ಅಲಿ ಶಿಹಾಬ್ ತಂಙಳ್ .ಉದ್ಘಾಟನೆ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರು ತಂಙಳ್ ಮುಖ್ಯ ಪ್ರಭಾಷಣ ಡಾ ಎ ಪಿ ಅಬ್ದುಲ್ ಹಕೀಂ ಅಝ್ಹರಿ ಬಾಷಣ ಮೌಲಾನ ಶಾಫಿ ಸಅದಿ ಬೆಂಗಳೂರು ಮತ್ತು ಮತ ಪ್ರವಚನ ನೇತೃತ್ವ ; ಸಯ್ಯಿದ್ ಇಸ್ಹಾಕ್ ಲತೀಫ್ ಅಲ್ ಹೈದ್ರೋಸಿ ಮುಖ್ಯ ಭಾಷಣ ಶಫೀಕ್ ಬದ್ರಿ ಕಡಕ್ಕಲ್. ಗಣ್ಯ ಅತಿಥಿಗಳಾಗಿ ಯು ಟಿ ಖಾದರ್ ,ಬಿಝೆಡ್ ಝಮೀರ್ ಅಹ್ಮದ್ ,ಎನ್ ಎಸ್ ಬೋಸರಾಜ್, ಎ ಎಅ್ ಪೊನ್ನಣ್ಣ ,ಮಂತರ್ ಗೌಡ ,ಪ್ರಿಯಾಂಕ್ ಖರ್ಗೆ ,ಎಸ್ ಆರ್ ಮೆಹರೋಝ್ ಖಾನ್.

ಫೆ.25 ಕ್ಕೆ ಮತಪ್ರವಚಣ ನೇತೃತ್ವ ಸಯ್ಯಿದ್ ಕಾತಿಂ ಸಖಾಫಿ ಅಲ್ ಹೈದ್ರೋಸಿ ಎಮ್ಮೆಮ್ಮಾಡ್ ಮುಖ್ಯ ಬಾಷಣ ನೌಫಲ್ ಸಖಾಫಿ ಕಳಸ 26 ಕ್ಕೆ ದುಆ ಮಜ್ಲಿಸ್ ಮತ್ತು ಮತಪ್ರವಚಣ ನೇತೃತ್ವ ಅಸ್ಸೆಯ್ಯಿದ್ ಅಬ್ದುರ್ರಹ್ಮಾನ್ ಮಸ್ ಹೂದ್ ತಂಙಳ್ ಕೂರತ್ , ದುಆ ಸಯ್ಯಿದುದ್ದೀನ್ ಶರಪುದ್ದೀನ್ ಹಿಮಮಿ ಅಲ್ ಹೈದ್ರೋಸಿ ‌ಎಮ್ಮೆಮ್ಮಾಡ್ ಮುಖ್ಯ ಪ್ರಭಾಷಣ ಮಸ್ ಹೂದ್ ಸಖಾಫಿ ಗೂಡಲ್ಲೂರು. 27ಕ್ಕೆ ನೇತೃತ್ವ ಹಸನ್ ಸಖಾಫಿ ಮಲಪ್ಪುರಂ ದುಆ ಸಯ್ಯಿದ್ ಸಮೀಹ್ ಅನ್ವರಿ ಅಲ್ ಅಹ್ಸನಿ ಎಮ್ಮೆಮ್ಮಾಡ್ ಮುಖ್ಯ ಬಾಷಣ ಮುನೀರ್ ಹುದವಿ ವಿಳಯಿಲ್.

ಫೆ. 28 ಸಮಾರೋಪ ಸಮಾರಂಭ ಉದ್ಘಾಟನೆ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ‌ಎಮ್ಮೆಮ್ಮಾಡ್ ಮುಖ್ಯ ಬಾಷಣ ಹುಸೈನ್ ಸಅದಿ ಕೆ ಸಿ ರೋಡ್ ಸಮಾರೋಪ ದುಆ ನೂರುಸ್ಸಾದಾತ್ ಸಯ್ಯಿದ್ ‌ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ಬಾಯಾರ್ ತಂಙಳ್ ನೆರವೇರಿಸುವರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಇನ್ನಿತರ ಧಾರ್ಮಿಕ ರಾಜಕೀಯ, ಸಾಂಸ್ಕೃತಿಕ ನೇತಾರರು ಭಾಗವಹಿಸುವರು ಅದೇ ದಿನ ಭಕ್ತಾಧಿಗಳಿಗೆ ಅನ್ನದಾನವಿರುತ್ತದೆ ಎಂದು ದರ್ಗಾ‌ ಸಮಿತಿ‌ ನಾಯಕರಾದ ಉಸ್ಮಾನ್ ಅಬ್ದುಲ್ಲಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ ಉಪಾಧ್ಯಕ್ಷ ರಾದ ಅಶ್ರಫ್ ಕಿನಾರ ತಿಳಿಸಿದರು.