janadhvani

Kannada Online News Paper

ಪರಿಸರ ಸೌಹಾರ್ದತೆಯ ಘೋಷಣೆಯೊಂದಿಗೆ ಮರ್ಕಝ್ ಯುನೈಟೆಡ್ ಯೂತ್ ಸಮ್ಮೇಳನಕ್ಕೆ ಪ್ರೌಢಿಯುತ ಸಮಾಪ್ತಿ.

ಕಲ್ಲಿಕೋಟೆ (ಜನಧ್ವನಿ ವಾರ್ತೆ): ವಿಶ್ವ ಸಂಸ್ಥೆಯ ಅಧೀನದಲ್ಲಿ ಸುಸ್ಥಿರ ಅಭಿವೃಧ್ದಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಯುನೈಟೆಡ್ ಯೂತ್ ಸಕ್ರ್ಯೂಟ್ ಹಾಗೂ ಮರ್ಕಝ್ ಜಂಟಿಯಾಗಿ, ನಡೆಸಿದ ಮರ್ಕಝ್ ಯುನೈಟೆಡ್ ಯೂತ್ ಸಮ್ಮೇಳನವು ಕೊನೆಗೊಂಡಿತು. ಅರಬ್ ರಾಷ್ಟ್ರದ ಪ್ರಮುಖ ಪರಿಸರ ಪ್ರೇಮಿ, ಅಜ್ಮಾನ್ ರಾಜ ಕುಟುಂಬಸ್ಥರಾದ ಡಾ. ಶೈಖ್ ಅಬ್ದುಲ್ ಅಝೀಝ್ ಅಲ್ ನುಐಮಿ ಯವರು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪರಿಸರದೊಂದಿಗಿನ ಸೌಹಾರ್ದತೆ ಹಾಗೂ ಸ್ವದೇಶೀ-ವಿದೇಶಿಯರೊಂದಿಗಿನ ಸ್ನೇಹ ಬಾಂಧವ್ಯವನ್ನು ಯುಎಇ ರಾಷ್ಟ್ರಪಿತ ಶೈಖ್ ಝಾಯಿದ್‍ರವರು ತನ್ನ ಗುರಿಯಾಗಿಸಿದ್ದರು. ನಿಷ್ಕಲಂಕ ಮನಸ್ಸಿನ ಯುವಕರು ದೃಢ ನಿಶ್ಚಯದೊಂದಿಗೆ ಕಾರ್ಯಪ್ರವೃತ್ತರಾದರೆ ವಿಶ್ವದಾದ್ಯಂತ ಉತ್ತಮ ರೀತಿಯ ಒಡನಾಟವನ್ನುಂಟು ಮಾಡಲು ಸಾಧ್ಯ, ಕಿರಿಯರಿಂದ ಹಿಡಿದು ಹಿರಯರವರೆಗೂ ಪರಿಸರ ಸಂರಕ್ಷಣೆಯ ಕುರಿತು ಕಾಳಜಿಯನ್ನುಂಟುಮಾಡಬೇಕೆಂದು ಕರೆ ನೀಡಿದರು.

ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿನ ಹರ್ಬನ್ ಗಾರ್ಡನಿನಲ್ಲಿ ಡಾ. ನುಐಮಿಯವರ ನೇತೃತ್ವದಲ್ಲಿ ಶೈಖ್ ಝಾಯಿದ್‍ರವರ ಸ್ಮರಣಾರ್ಥ ಗಿಡವನ್ನು ನಡಲಾಯಿತು. ಪ್ರಧಾನ ಮಂತ್ರಿಯವರ ಪ್ರಧಾನ ಸಲಹೆಗಾರ ದೀಪಕ್ ವೊಹ್ರಾರವರು ಶೈಖ್ ನುಐಮಿಯವರಿಗೆ ಗ್ರೀನ್ ಅವಾರ್ಡನ್ನು ನೀಡಿದರು. ಕೇರಳ ಉದ್ಯೋಗ ಇಲಾಖಾ ಮಂತ್ರಿ ಟಿ ಪಿ ರಾಮಕೃಷ್ಣನ್ ಸಹಿತ ಹಲವು ಗಣ್ಯರು ಭಾಷಣಗೈದರು. ಮರ್ಕಝ್ ನಾಲೆಡ್ಜ್ ಸಿಟಿ ಡಯರೆಕ್ಟರ್ ಡಾ,. ಅಬ್ದುಲ್ ಹಕೀಂ ಅಝ್‍ಹರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

error: Content is protected !! Not allowed copy content from janadhvani.com