ಶೈಖುನಾ ಚಿತ್ತಾರಿ ಉಸ್ತಾದರ ನಿಧನ -ಕೆ.ಸಿ ಎಫ್ ಸೌದಿ ಅರೇಬಿಯಾ ಸಂತಾಪ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ದೀರ್ಘಕಾಲ ಕಾರ್ಯದರ್ಶಿ, ಪ್ರಸಕ್ತ ಕೋಶಾಧಿಕಾರಿಯೂ ,
ಅಲ್- ಮಖರ್ ವಿಧ್ಯಾ ಸಂಸ್ಥೆಯ ಅಧ್ಯಕ್ಷರೂ , ಅದರ ಪ್ರಾಂಶುಪಾಲರೂ, ಪ್ರಮುಖ ವಿದ್ವಾಂಸರೂ ಸೂಫೀ ವರ್ಯರೂ ಆಗಿರುವ ಶೈಖುನಾ ಕಂಝುಲ್ ಉಲಮಾ ಕೆ.ಪಿ ಹಂಝ ಮುಸ್ಲಿಯಾರ್ (ಚಿತ್ತಾರಿ ಉಸ್ತಾದ್) ರವರ ವಿಯೋಗದಿಂದ ಮುಸ್ಲಿಮ್ ಸಮಾಜ ಪ್ರಮುಖ ಆದರ್ಶ ನೇತಾರರೊಬ್ಬರನ್ನು ಕಳೆದುಕೊಂಡಿದೆ. ಸಮಸ್ತ ಮತ್ತು ಸುನ್ನೀ ಸಂಘಟನೆಗಳ ಅಭಿವೃದ್ಧಿಯಲ್ಲಿ ಹಲವು ದಶಕಗಳ ಕಾಲ ಮುಂಚೂಣಿಯಲ್ಲಿ ಕಾರ್ಯೋನ್ಮುಖರಾಗಿದ್ದ ಅವರು ಎಲ್ಲರಿಗೂ ಆದರ್ಶ ನೇತಾರರಾಗಿದ್ದರು. ಮುಕ್ತ ಮತ್ತು ನಿರ್ಭೀತ ವ್ಯಕ್ತಿಯಾಗಿದ್ದ ಚಿತ್ತಾರಿ ಉಸ್ತಾದರವರ ಬಲವಾದ ನಿಲುವು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ಅವರ ವಿಯೋಗ ಸುನ್ನೀ ಜಗ್ಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅವರ ವಿಯೋಗಕ್ಕೆ ಕೆ.ಸಿ ಎಪ್ ಸೌದಿ ಅರೇಬಿಯಾದ ಅಧ್ಯಕ್ಷರು ಡಿ.ಪಿ ಯೂಸುಫ್ ಸಖಾಫಿ ಬೈತಾರ್ , ಪ್ರಧಾನ ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ ಮತ್ತು ಫೈನಾನ್ಸಿಯಲ್ ಕಂಟ್ರೋಲರ್ ಅಬೂಬಕ್ಕರ್ ಹಾಜಿ ರೈಸ್ಕೋ ಸಂತಾಪ ವ್ಯಕ್ತಪಡಿಸಿದರು ಹಾಗೂ ಕೆ.ಸಿ ಎಫ್ ನ ಸೌದಿಯ ಎಲ್ಲಾ ಘಟಕಗಳಲ್ಲಿ ಖುರ್ ಆನ್ ಪಾರಾಯಣ, ತಹ್ಲೀಲ್ ಸಮರ್ಪಣೆ ಮತ್ತು ಮಯ್ಯಿತ್ ನಮಾಝ್ ಹಾಗೂ ಪ್ರಾರ್ಥನಾ ಮಜ್ಲಿಸ್ ಗಳನ್ನು ಏರ್ಪಡಿಸಲು ಅವರು ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!