ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಸೋಮವಾರ ಮಧ್ಯಾಹ್ನ 12.54 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಸುಂಟಿಕೊಪ್ಪ, ಸೋಮವಾರಪೇಟೆ, ಶಾಂತಳ್ಳಿ, ಬೆಟ್ಟದಳ್ಳಿ, ಮಕ್ಕಂದೂರು ಭಾಗದಲ್ಲಿ ಜೋರು ಶಬ್ದದ ಬಳಿಕ ಭೂಮಿ ಅಲುಗಾಡಿದಂತಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.ಮಡಿಕೇರಿಯ ಗಣಪತಿ ಬೀದಿ, ಮಹದೇವಪೇಟೆಯ ನಿವಾಸಿಗಳು ಶಬ್ದ ಕೇಳಿ ಮನೆಯಿಂದ ಹೊರಗೆ ಓಡಿ ಬಂದಿದ್ದರು.
ಸುಂಟಿಕೊಪ್ಪ, ಹರದೂರು, ಕೆದಕಲ್, ಮಾದಾಪುರದ ಕೆಲವು ಮನೆಗಳಲ್ಲಿ ಪಾತ್ರೆ, ಕುರ್ಚಿ, ಮಂಚಗಳು ಅಲುಗಾಡಿವೆ. ಬಂಡೆಯೊಂದು ಮನೆಗೆ ಅಪ್ಪಳಿಸಿದ ಅನುಭವ ಉಂಟಾದ ಕೂಡಲೇ ಆಚೆಗೆ ಓಡಿಬಂದೆವು ಎಂದು ಹರದೂರು ಗ್ರಾಮದ ಮೀನಾ ಮಾಹಿತಿ ನೀಡಿದರು. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಭೂಮಿ ಸಡಿಲಗೊಂಡಿದೆ. ಅದೇ ಕಾರಣಕ್ಕೆ ಕಂಪಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
‘ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಸಮೀಪವಿರುವ ಮಾಪನ ಕೇಂದ್ರದಲ್ಲಿ ಕಂಪನದ ತೀವ್ರತೆ ದಾಖಲಾಗಿಲ್ಲ. 1 ರಿಕ್ಟರ್ಗಿಂತ ಹೆಚ್ಚು ತೀವ್ರತೆಯಿದ್ದರೆ ಮಾತ್ರ ದಾಖಲಾಗುತ್ತದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಪರಿಶೀಲಿಸಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಬಿ.ರೇಷ್ಮಾ ತಿಳಿಸಿದರು.
ಇನ್ನಷ್ಟು ಸುದ್ದಿಗಳು
ಸೌದಿ: ವಲಸಿಗರಿಗೆ ಶಾಕ್ – ರೆಸ್ಟೋರೆಂಟ್, ಸೂಪರ್ಮಾರ್ಕೆಟ್ಗಳಲ್ಲೂ ದೇಶೀಕರಣ
ಆತೂರು ಸಅದ್ ಮುಸ್ಲಿಯಾರ್ ವಿಯೋಗ: ಸಮುದಾಯಕ್ಕೆ ತೀರಾ ನಷ್ಟ -ಎಸ್.ವೈ.ಎಸ್
ಕೋವಿಡ್ ಟೆಸ್ಟ್ ಹೆಸರಲ್ಲಿ ವಲಸಿಗರಿಂದ ಲೂಟಿ- ಹೊಸ ಕಾನೂನು ವಿರುದ್ಧ ವ್ಯಾಪಕ ಆಕ್ರೋಶ
ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ LuLu
ಹಾರುತ್ತಿದ್ದ ವಿಮಾನದಲ್ಲಿ ಬೆಂಕಿ: ಸುರಕ್ಷಿತ ಲ್ಯಾಂಡಿಂಗ್ ವೀಡಿಯೊ ವೈರಲ್
ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮನುಷ್ಯರಲ್ಲಿ ಹಕ್ಕಿ ಜ್ವರ- ರಷ್ಯಾ ಎಚ್ಚರಿಕೆ