janadhvani

Kannada Online News Paper

ರೂಪಾಯಿ ಮೌಲ್ಯವು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ

ದುಬೈ:ಭಾರತೀಯ ರೂಪಾಯಿ ಮೌಲ್ಯವು ಮತ್ತಷ್ಟು ಇಳಿಕೆಯಾಗುವ ಸಂಭವವಿದೆ. ಜಾಗತಿಕ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಇದಕ್ಕೆ ಕಾರಣ ಎನ್ನಲಾಗಿದೆ.

ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದು, ದೊಡ್ಡ ದೇಶಗಳ ನಡುವೆ ಘರ್ಷಣೆ ಮುಂದುವರೆಯುತ್ತಿದೆ. ಇದಕ್ಕೆ ಸಧ್ಯ ಯಾವುದೇ ಪರಿಹಾರ ಕಾಣಲಾಗುವುದಿಲ್ಲ.ಅದರೊಂದಿಗೆ ಏಷ್ಯನ್ ಕರೆನ್ಸಿಗಳು ಒತ್ತಡದಲ್ಲಿ ಮುಂದುವರಿಯಲಿದೆ. ಆರ್ಥಿಕ ಪರಿಣತರ ಪ್ರಕಾರ ಡಾಲರ್ ಪಾವತಿಸಿದರೆ, 70 ರೂಪಾಯಿಗಳು ಸಿಗುವ ಪರಿಸ್ಥಿತಿ ನಿರ್ಮಾನವಾಗಲಿದೆ ಎನ್ನಲಾಗಿದೆ.

ನಿನ್ನೆ, ಡಾಲರ್‌ಗೆ 69 ರೂಪಾಯಿ ಮತ್ತು ದಿರ್ಹಂಗೆ 18.73 ರೂಪಾಯಿಗಳಾಗಿದೆ. ನವೆಂಬರ್ 2016 ರಲ್ಲಿ ಡಾಲರ್‌ಗೆ 68.86 ಆಗಿತ್ತು. ಈ ದಾಖಲೆ ಈಗ ಮುರಿದುಹೋಗಿದೆ.ತೈಲ ಉತ್ಪಾದನೆಯ ಮೇಲಿನ OPEC ನ ಪ್ರಕಟಣೆಯು ತೈಲ ಬೆಲೆಗಳನ್ನು ನಿಯಂತ್ರಿಸಲು ಪರ್ಯಾಪ್ತವಾಗಿಲ್ಲ.ಇದಕ್ಕೆ ಅಮೇರಿಕನ್ ರಾಜಕೀಯ ನೀತಿಯು ಕಾರಣವಾಗಿದೆ. ಯುರೊಪಿಯನ್ ಯೂನಿಯನ್, ಚೀನಾ ಮತ್ತು ಇರಾನ್ ಸೇರಿದಂತೆ ಹಲವು ದೇಶಗಳೊಂದಿಗೆ ಯುಎಸ್ ಸಂಘರ್ಷದಲ್ಲಿದೆ. ಅಮೆರಿಕಾದ ಅಪಸಾಮಾನ್ಯ ಕ್ರಿಯೆ ಡಾಲರ್‌ಗೆ ಬಲ ನೀಡುತ್ತಿದೆ. ತೈಲ ಬೆಲೆಗಳು ಒಂದು ಬ್ಯಾರೆಲ್ ‌ಗೆ 78.07 ಡಾಲರ್ ಗಳಿಗೆ ಏರಿದೆ. ಇದು ತೈಲ-ಆಮದು ರಾಷ್ಟ್ರವಾದ ಭಾರತಕ್ಕೆ ಹೊರೆಯಾಗಿ ಪರಿಣಮಿಸಿದೆ. ವಿದೇಶಗಳಲ್ಲಿ ಭಾರತೀಯ ಉತ್ಪನ್ನಗಳ ಬೆಲೆ ಏರಿಕೆಯಾಗದು ಎಂಬುದು ಮಾತ್ರ ಅನುಕೂಲಕರ ಸಂಗತಿಯಾಗಿದೆ.

ತಿಂಗಳ ಅಂತ್ಯದಲ್ಲಿ ರೂಪಾಯಿ ಮೌಲ್ಯ ಕುಸಿದಿದ್ದವು. ಇದು ದೇಶಕ್ಕೆ ಹಣವನ್ನು ಕಳುಹಿಸುವವರಿಗೆ ಸ್ವಲ್ಪ ನೆಮ್ಮದಿಯನ್ನು ನೀಡುತ್ತದೆ. ವಿದೇಶಿ ಕರೆನ್ಸಿ ನೀಡಿದರೆ, ರೂಪಾಯಿ ಹೆಚ್ಚು ಲಭಿಸುತ್ತದೆ. ಆದರೆ ದೇಶದಲ್ಲಿ ಬೆಲೆ ಏರಿಕೆಯಾಗಿರುತ್ತದೆ,ಅಂತಿಮ ಲೆಕ್ಕಾಚಾರವನ್ನು ಪರಿಗಣಿಸಿದರೆ ಹೆಚ್ಚಿನ ಹಣವನ್ನು ಊರಿಗೆ ಕಳುಹಿಸ ಬೇಕಾಗುತ್ತದೆ.

error: Content is protected !! Not allowed copy content from janadhvani.com