janadhvani

Kannada Online News Paper

ಸೌದಿ ಮಿತ್ರ ರಾಷ್ಟ್ರಗಳು ಮತ್ತು ಖತರ್ ನಡುವಿನ ಬಿಕ್ಕಟ್ಟು ಮತ್ತಷ್ಟು ಜಟಿಲವಾಗುತ್ತಿದೆ

ಅಬುಧಾಬಿ: ಸೌದಿ ಮಿತ್ರ ರಾಷ್ಟ್ರಗಳು ಮತ್ತು ಖತರ್ ನಡುವೆ ನೆಲೆನಿಂತಿರುವ ಕಾರ್ಯತಂತ್ರ ತರ್ಕವು ತಾರಕಕ್ಕೇರುತ್ತಿವೆ.
ಸೌದಿ ಅರೇಬಿಯಾ ಮತ್ತು ಯುಎಇಯು, ಖತರ್ ವಾಯುಯಾನ ಗಡಿ ಉಲ್ಲಂಘಿಸಿದೆ ಎಂದು ಆರೋಪಿಸಿ ಇಂಟರ್ ನ್ಯಾಷನಲ್ ಟ್ರಿಬ್ಯೂನಲ್ (ಐಸಿಜೆ) ಸಮೀಪಿಸಲು ತಯಾರಿ ನಡೆಸುತ್ತಿದೆ. ಇದರ ಜೊತೆಗೆ, ಬಹ್ರೈನ್ ಮತ್ತು ಈಜಿಪ್ಟ್ ಕೂಡ ನ್ಯಾಯಾಲಯವನ್ನು ಸಮೀಪಿಸಲು ನಿರ್ಧರಿಸಿದೆ.

ಅಂತರಾಷ್ಟ್ರೀಯ ವಾಯುಯಾನ ಸಂಸ್ಥೆಯಿಂದ (ಐಸಿಎಒ) ವಿವಾದವನ್ನು ಬಗೆಹರಿಸಲಾಗಲಿಲ್ಲ ಆ ಕಾರಣಕ್ಕಾಗಿ ಈ ನಡೆ ಎಂದು ಸೌದಿ ಮತ್ತು ಯುಎಇಯ ಅಧಿಕೃತ ಮಾಧ್ಯಮಗಳು ವರದಿ ಮಾಡಿದೆ.

ಖತರ್ ನ ವಾಯುಯಾನ ಗಡಿ ಉಲ್ಲಂಘನೆಯು ವಿಮಾನಯಾನ ವಲಯಕ್ಕೆ ಬೆದರಿಕೆಯಾಗಿದೆ ಎಂದು ICAOಗೆ ಈಗಾಗಲೇ ಯುಎಇ ಎರಡು ದೂರುಗಳನ್ನು ನೀಡಿದ್ದವು. ಖತರ್ ಯುದ್ದ ವಿಮಾನಗಳನ್ನು ಉಪಯೋಗಿಸಿ ನಾಗರೀಕ ವಿಮಾನಗಳನ್ನು ಮತ್ತು ಹೆಲಿಕಾಪ್ಟರ್‌ನ್ನು ತಡೆದಿದೆ ಎಂದು ಯುಎಇ ಆರೋಪಿದ್ದು, ಇದನ್ನು ಈಗಾಗಲೇ ಕತರ್ ನಿರಾಕರಿಸಿದೆ.

ಈ ಮಧ್ಯೆ, ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ, ಯುಎಇ ವಿರುದ್ಧ ಐಎಜೆಗೆ ಕತರ್ ಅಪರಾಧ ಪ್ರಕರಣ ದಾಖಲಿಸಿದ್ದು,ಇದರನ್ವಯ ಮೂರು ದಿನಗಳ ಚರ್ಚೆ ಆರಂಭಗೊಂಡಿದೆ. ತ್ವರಿತವಾಗಿ ವಾದವನ್ನು ಆಲಿಸಬೇಕೆಂಬ ಖತರ್‌ನ ಕೋರಿಕೆಯಂತೆ ಈ ನಡೆ ಎನ್ನಲಾಗಿದೆ.

ಕಳೆದ ವರ್ಷ ಜೂನ್ 5 ರಂದು, ಸೌದಿ ಮಿತ್ರರಾಷ್ಟ್ರಗಳು ಕತರ್ ವಿರುದ್ದ ಅದು ಇರಾನ್ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂಬ ನೆಪವೊಡ್ಡಿ ಸಂಬಂಧವನ್ನು ಕಡಿದು ಕೊಂಡಿತ್ತು. ಆದರೆ, ಆ ಆರೋಪವನ್ನು ಕತರ್ ಅಂದು ನಿರಾಕರಿಸಿತ್ತು.

error: Content is protected !! Not allowed copy content from janadhvani.com