janadhvani

Kannada Online News Paper

ರಸ್ತೆ ಅಪಘಾತ ಸ್ಥಳದಲ್ಲಿ ಸಾರ್ವಜನಿಕರು ರಕ್ಷಾ ಕಾರ್ಯಾಚರಣೆ ನಡೆಸಬೇಕೆಂದಿಲ್ಲ

ದುಬೈ: ಅಪಘಾತ ಸ್ಥಳದಲ್ಲಿ ಜನಸಮೂಹ ರಕ್ಷಾ ಕಾರ್ಯಾಚರಣೆ ನಡೆಸುವುದು ವಿಪರೀತ ಫಲವನ್ನು ನೀಡುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಇದು ತುರ್ತು ರಕ್ಷಣಾ ವಿಭಾಗ ಮಾಡಬೇಕಾದ ಕಾರ್ಯವಾಗಿದೆ. ಅದಲ್ಲದಿದ್ದರೆ ಜೀವನ ರಕ್ಷಾ ತರಬೇತಿ ಪಡೆದ ವ್ಯಕ್ತಿಯಾಗಿರಬೇಕು ಎಂದು ದುಬೈ ಆ್ಯಂಬುಲೆನ್ಸ್ ಸರ್ವೀಸ್ ಕಾರ್ಪೊರೇಷನ್ ನಿರ್ದೇಶಕ ಖಲೀಫಾ ಬಿನ್ ದಾರಾಯಿ ಗಮನಸೆಳೆದಿದ್ದಾರೆ. ಜಿವನ ಉಳಿಸಿಕೊಳ್ಳುವುದು ಮಾನವ ಸ್ವಭಾವವಾಗಿದೆ. ಆದರೆ ಸದುದ್ದೇಶ ಅಪಘಾತಕ್ಕೀಡಾದ ವ್ಯಕ್ತಿಯ ಜೀವಕ್ಕೆ ಅಪಾಯವಾಗಲೂಬಹುದು. ಕೆಲವೊಮ್ಮೆ ಇದು ಅಂಗವಿಕಲತೆ ಉಂಟುಮಾಡಬಹುದು.

ಘಟನೆ ನಡೆದ ಸ್ಥಳದಲ್ಲಿ ಇರುವವರು ಮಾಡಬಹುದಾದ ಕೆಲಸವೆಂದರೆ 999 ಕರೆ ಮಾಡುವುದಾಗಿದೆ. ಆಂಬ್ಯುಲೆನ್ಸ್ ಎಂಟು ನಿಮಿಷಗಳೊಳಗೆ ತಲುಪಲಿದೆ. ಪ್ರಾಥಮಿಕ ಆರೈಕೆಯಲ್ಲಿ ತರಬೇತಿ ಪಡೆದವರು ಕೂಡ ಕಾರ್ಯಾಚರಣಾ ಕೋಣೆಗೆ ಮಾಹಿತಿಯನ್ನು ಒದಗಿಸಬೇಕು ಎಂಬುದಾಗಿದೆ ಕಾನೂನು. ಗಾಯಗೊಂಡ ಜನರನ್ನು ಅಪಘಾತಕ್ಕೀಡಾದ ವಾಹನದಿಂದ ಹೊರಗೆಳೆಯುವುದರಿಂದ ಮತ್ತಷ್ಟು ಗಾಯಗೊಳ್ಳುವ ಸಾಧ್ಯತೆ ಇದೆ ಎಂದು ಖಲೀಫಾ ಬಿನ್ ದಾರಾಯಿ ಹೇಳಿದರು.

error: Content is protected !! Not allowed copy content from janadhvani.com