janadhvani

Kannada Online News Paper

“ವಿಜಯದೆಡೆಗೆ ಒಂದು ಹೆಜ್ಜೆ” ತರ್ತೀಲ್ ಖುರ್’ಆನ್ ಅಕಾಡಮಿ, ಕಂಕನಾಡಿ ಮಂಗಳೂರು

ಯಶಸ್ವೀ ಎರಡನೇ ವರ್ಷದತ್ತ ಮುನ್ನಡೆಯುತ್ತಿರುವ ಮಂಗಳೂರಿನ ಕಂಕನಾಡಿಯಲ್ಲಿರುವ ತರ್ತೀಲ್ ಕುರ್’ಆನ್ ಅಕಾಡಮಿಯಲ್ಲಿ ಈ ಕೆಳಗಿನ ವಿವಿಧ ಕೋರ್ಸ್’ಗಳು ಆರಂಭಗೊಡಿದ್ದು ಹಾಗೂ ದಾಖಲಾತಿ ಮುಂದುವರಿಯುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ರಾದ ಹಾಫಿಝ್ ಮೊಹಮ್ಮದ್ ತೌಸೀಫ್ ಅಲ್-ಹಿಮಮಿ ಅಲ್-ಸಅದಿ (ಎಂ.ಬಿ.ಎ) ತಿಳಿಸಿದ್ದಾರೆ.

1) ತರ್ತೀಲ್ ಹಿಫ್ಝ್ ಸ್ಕೂಲ್:ಹೆಣ್ಣು ಮತ್ತು ಗಂಡು ಮಕ್ಕಳಿಗೆ 4:30pm-6:30pm & 5pm-8pm-ಅನುಕೂಲ ಸಮಯವನ್ನು ಆಯ್ಕೆ ಮಾಡಬಹುದು

ತರ್ತೀಲ್ ಕುರ್’ಆನ್ ಅಕಾಡಮಿ, ಹಿಫ್’ಝ್ ಕೋರ್ಸಿಗೆ ದಾಖಲಾತಿ ಆರಂಭಗೊಂಡಿದೆ.’

ಅನುಭವೀ ಮತ್ತು ನುರಿತ ಹಾಫಿಝ್’ಗಳಾದ ಅಧ್ಯಾಪಕರ ನೆರವಿನಿಂದ ಸಂಪೂರ್ಣ ಕುರ್’ಆನ್ ಕಂಠಪಾಠ ಮಾಡುವ ಅಪೂರ್ವ ಅವಕಾಶ ಇದೆ.

ಆಧುನಿಕ ‌ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿ ವಿಧ್ಯಾರ್ಥಿಯನ್ನು ಆಧ್ಯಾತ್ಮಿಕ, ಶಾರೀರಿಕ ಮತ್ತು ಬೌದ್ಧಿಕವಾಗಿ ಸಮರ್ಥರಾಗಿ ಬೆಳಸುವಂತಹ ಯೋಜನೆಗಳ ಜೊತೆಗೆ ಪ್ರತಿ ವಿಧ್ಯಾರ್ಥಿಯಲ್ಲೂ ಧಾರ್ಮಿಕ, ಕೌಟುಂಬಿಕ, ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳನ್ನು ಸ್ಥಾಪಿಸಲು ಶ್ರಮಿಸಲಾಗುವುದು.

ಸಂಜೆ 5ಗಂಟೆಯಿಂದ ರಾತ್ರಿ 8 ಗಂಟೆಯವರೆಗಿನ ಅವಧಿಯಲ್ಲಿ ನಡೆಯುವ ತರಗತಿಗಳಲ್ಲಿ, ಇಷ್ಟ ಬಂದ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಲೇ , ಅನುಕೂಲಕರವಾದ ಸಮಯದಲ್ಲಿ ಸುಲಭ ಮತ್ತು ಆಕರ್ಷಣೀಯವಾಗಿ ಹಿಫ್ಲ್ ಪೂರ್ತಿಗೊಳಿಸಬಹುದು ಎಂಬುದು ಈ ಕೋರ್ಸಿನ ವಿಶೇಷತೆ .

8 ವರ್ಷ ಪ್ರಾಯದ ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ ಹೊಸ ಬ್ಯಾಚ್ ಮೇ 14 ರಿಂದ ಆರಂಭವಾಗಿದೆ.ದಾಖಲಾತಿ ಮುಂದುವರಿಯುತ್ತಿದೆ.

2) 14 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ‘ಡಿಪ್ಲೊಮಾ ಇನ್ ಇಸ್ಲಾಮಿಕ್ ಸಯನ್ಸ್’

( ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 4:30pm-6:30pm)

3) ದೀನ್ ಫಾರ್ ಟೀನ್ಸ್:ಹದಿಹರೆಯದ ಬಾಲಕರಿಗೆ ‘ದುರೂಸ್-ಎ-ಉಲೂಂ'(ಸಂಜೆ 5:30pm-6:30pm(ಮೊದಲ ಬ್ಯಾಚ್) ಮತ್ತು 7:30pm-8:30pm(ಎರಡನೇ ಬ್ಯಾಚ್)

4) ಮಹಿಳೆಯರಿಗೆ ವಾರಾಂತ್ಯ ‘ಝಹ್’ರಾ ಅಲ್-ಬಿದಾಯ ಕೋರ್ಸ್’ (ಎಲ್ಲ ಶನಿವಾರ 3pm-5pm)

5) ಪುರುಷರಿಗೆ ವಾರಾಂತ್ಯ ತಜ್ವೀದ್ ಕ್ಲಾಸ್ (ಎಲ್ಲ ಶನಿವಾರ ಸಂಜೆ 7pm-8pm)

ನುರಿತ ಮಹಿಳಾ/ಪುರುಷ ಸಿಬ್ಬಂದಿಗಳಿಂದ ತರಗತಿ ನಡೆಯಲಿದೆ, ವಾಹನ ವ್ಯವಸ್ಥೆಯೂ ಇದೆ

ಸ್ಥಳ:ತರ್ತೀಲ್ ಕುರ್’ಆನ್ ಅಕಾಡಮಿ , ಕಂಕನಾಡಿ ಮಸೀದಿ ಹತ್ತಿರ, ಮಂಗಳೂರು.

ಹೆಚ್ಚಿನ ವಿವರಗಳಿಗೆ :+918550822478, +917259891545, +919916831730
+966540608429.

error: Content is protected !! Not allowed copy content from janadhvani.com