janadhvani

Kannada Online News Paper

ಪಬ್ಲಿಕ್ ಪರೀಕ್ಷಾ ಫಲಿತಾಂಶ:ಸಹೋದರಿಯರ ಸಾಧನೆಯಿಂದ ಪೆರುವಾಯಿ ಗ್ರಾಮದ ಕೀರ್ತಿ ಬಾನೆತ್ತರಕ್ಕೆ…!

ವಿಟ್ಲ : ದೇಶದ ಅತಿ ದೊಡ್ಡ ಶಿಕ್ಷಣ ಸಮುಚ್ಛಯವಾದ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ 2018 ಮೇ 28 ಮತ್ತು 29 ದಿನಗಳಲ್ಲಿ ದೇಶ-ವಿದೇಶಗಳಲ್ಲಿ ನಡೆಸಿದ ಪಬ್ಲಿಕ್ ಪರೀಕ್ಷೆಯ ಫಲಿತಾಂಶವು ಹೊರ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕುಗೊಳಪಟ್ಟ ವಿಟ್ಲ ರೇಂಜ್ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸಿರಾಜುಲ್ ಹುದಾ ಸೆಕೆಂಡರಿ ಮದ್ರಸ, ಮುಚ್ಚಿರಪದವು ಹಯಾತುಲ್ ಇಸ್ಲಾಂ ಸುನ್ನೀ ಸೆಕೆಂಡರಿ ಮದ್ರಸ ಹಾಗೂ ಓಣಿಬಾಗಿಲು ಮದ್ರಸತ್ತುನ್ನೂರ್ ಮದರಸಗಳಲ್ಲಿ 5,7 ಮತ್ತು 10 ತರಗತಿಗಳಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ ನೂರು ಶೇಕಡ ಫಲಿತಾಂಶವು ಲಭಿಸಿದೆ.
ಮುಚ್ಚಿರಪದವು ಮದ್ರಸದ ಹತ್ತನೇ ತರಗತಿಯ ವಿದ್ಯಾರ್ಥಿನಿಯಾದ ಆಯಿಷಾ ಫರ್ಝಾನ (d/o ಮುಹಮ್ಮದ್ ಶರೀಫ್) ಮತ್ತು ಏಳನೇ ತರಗತಿ ವಿದ್ಯಾರ್ಥಿನಿಯಾದ ಫಾತಿಮತ್ ಇರ್ಫಾನ (d/o ಮುಹಮ್ಮದ್ ಶರೀಫ್) A+ ಗ್ರೇಡ್ ಪಡೆದು ಪೆರುವಾಯಿ ಗ್ರಾಮದ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ.
ಇದೇ ಮದ್ರಸದ 5ನೇ ತರಗತಿ ವಿದ್ಯಾರ್ಥಿಯಾದ ಮುಹಮ್ಮದ್ ಸ್ವಾಲಿಹ್ (s/o ಇಬ್ರಾಹೀಂ ಪಿಎಂ) ಕೂಡಾ A ಗ್ರೇಡ್ ಪಡೆದು ತರಗತಿಗೆ ಮೊದಲನೇ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ.
ಪ್ರಸ್ತುತ ವಿದ್ಯಾರ್ಥಿಗಳನ್ನು ಹಾಗೂ ಮದ್ರಸಾ ಮುಖ್ಯೋಪಾಧ್ಯಾಯರಾದ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿಯವರನ್ನು ಜಮಾಅತ್ ಸಮಿತಿ ಮತ್ತು ಮದರಸಾ ಸಮಿತಿ ನಾಯಕರು ಹಾಗೂ ಊರಿನ SYS,SSF ಸಂಘಟನೆಗಳ ನೇತಾರರು ಅಭಿನಂದಿಸಿದ್ದಾರೆ.
✍🏻ಜಿಎಂ ಝೈನುಲ್ ಆಬಿದ್ ಪೆರುವಾಯಿ
ಅಧ್ಯಕ್ಷರು SSF ಪೆರುವಾಯಿ ಯೂನಿಟ್

error: Content is protected !! Not allowed copy content from janadhvani.com