janadhvani

Kannada Online News Paper

ಜಾರಿಗೆಬೈಲಿನಲ್ಲಿ ‘ಮಹ್ ದಿಯ್ಯ’ಶರೀಅತ್ ಕಾಲೇಜು ದಾಖಲಾತಿ ಫಾರ್ಮ್ ಬಿಡುಗಡೆ

ಈ ವರದಿಯ ಧ್ವನಿಯನ್ನು ಆಲಿಸಿ


ಜಾರಿಗೆಬೈಲು: ಬದ್ರಿಯಾ ಜುಮ್ಮಾ ಮಸ್ಜಿದ್ ಜಾರಿಗೆಬೈಲು-ನಾಳ ಇದರ ಅಧೀನದಲ್ಲಿ ರಮಳಾನ್ ಬಳಿಕ ಆರಂಭಗೊಳ್ಳಲಿರುವ “ಮಹ್ ದಿಯ್ಯ ಶರೀಅತ್ ಕಾಲೇಜಿ”ನ ದಾಖಲಾತಿ ಫಾರ್ಮ್ ಉದ್ಘಾಟನೆ ಹಾಗೂ ‘ಆಧ್ಯಾತ್ಮಿಕತೆಗೆ ಮರಳೋಣ’ಎಂಬ ವಿಷಯದಲ್ಲಿ ‘ಏಕದಿನ ಅಧ್ಯಯನ ತರಗತಿ’ಯು ಮದ್ರಸಾ ಸಭಾಂಗಣದಲ್ಲಿ ನಡೆಯಿತು.

ಮರ್ಕಝ್ ಮಹಿಳಾ ಕಾಲೇಜು ಕುಂಬ್ರ ಪ್ರಿನ್ಸಿಪಾಲ್ ಬಹು ಮುಹಮ್ಮದ್ ಸಅದಿ ವಳವೂರು ತರಗತಿ ನಡೆಸಿ ಕೊಟ್ಟರು.ಮದ್ರಸ ಮುಖ್ಯೋಪಾಧ್ಯಾಯರಾದ ಎನ್.ಎಂ.ಶರೀಫ್ ಸಖಾಫಿ ಸ್ವಾಗತಿಸಿದರು. ಜಮಾಅತ್ ಅಧ್ಯಕ್ಷರಾದ ಅಬ್ಬೋನು ಶಾಫಿ ಪಲ್ಲಾದೆ ಅಧ್ಯಕ್ಷತೆ ವಹಿಸಿದ್ದರು.ಸ್ಥಳೀಯ ಮುದರ್ರಿಸ್ ಅಬ್ದುರ್ರಹ್ಮಾನ್ ಬಾಖವಿ ಸಭೆಯನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಅಶ್ರಫ್ ಸಅದಿ,ಮುಹಮ್ಮದ್ ಅಲೀ ಹಾಜಿ,ಕರೀಂ ಲತೀಫಿ,ಹಾರಿಸ್ ಕುಕ್ಕುಡಿ,ನಾಸಿರ್ ನಡ್ತೊಟ್ಟು,ಮೊದಲಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com