ಆತೂರು : ಕುಟುಂಬ ಸಬಲೀಕರಣದ ಉದ್ದೇಶದಿಂದ ಸ್ಥಾಪಿತವಾದ ಮರ್ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಷನ್ ಆತೂರು (ಹಫ್ವಾ) ಇದರ ಅಧ್ಯಕ್ಷರಾಗಿ ಸತತ ಮೂರನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಪುನರಾಯ್ಕೆಯಾಗಿದ್ದಾರೆ.
ಮರ್ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಷನ್ ಇದರ ಮಹಾಸಭೆ ಇಂದು ಆದಿತ್ಯವಾರ ಹಫ್ವಾ ಕಚೇರಿಯಲ್ಲಿ ನಡೆಯಿತು.
ಹಾಜಿ ಅಬೂಬಕ್ಕರ್ ರವರ ಮಕ್ಬರ ಝಿಯಾರತ್ ನೊಂದಿಗೆ ಮಹಾಸಭೆಗೆ ಚಾಲನೆ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಜಿಎಂ ಕುಂಞಿ ವಹಿಸಿದ್ದರು. ಝಕರಿಯಾ ಮುಸ್ಲಿಯಾರ್ ಆತೂರು ಸಭೆಯನ್ನು ಉದ್ಘಾಟನೆಗೖದರು.
ಸಭೆಯಲ್ಲಿ 2024 25 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ತದನಂತರ ಈ ಬಗ್ಗೆ ವಿಸ್ತೃತ ಚರ್ಚೆ ನಡೆದು ವರದಿ ಹಾಗೂ ಲೆಕ್ಕಪತ್ರಗಳನ್ನು ಅನುಮೋದಿಸಲಾಯಿತು.
ನಂತರ ಕಮಿಟಿ ರಚನೆಯ ಬಗ್ಗೆ ಚರ್ಚೆ ನಡೆದು ಹಾಲಿ ಇರುವ ಸಮಿತಿಯನ್ನೇ ಮುಂದುವರಿಸುವುದೆಂದು ನಿರ್ಣಯಿಸಲಾಯಿತು.
ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ರಹಮಾನ್ ಬಡ್ಡಮೆ ಅವರ ವಫಾತಿನ ಹಿನ್ನೆಲೆಯಲ್ಲಿ ಗೌರವಾಧ್ಯಕ್ಷರಾಗಿ ಕುಟುಂಬ ಹಿರಿಯರಾದ ಎ. ಎಂ. ಅಬೂಬಕ್ಕರ್ ಹಾಜಿ ಅವರನ್ನು ನೇಮಿಸಲಾಯಿತು. ಗೌರವ ಸಲಹೆಗಾರರಾದ ಎ ಎಸ್ ರಫೀಕ್ ಹಾಗೂ ಇಬ್ರಾಹಿಂ ಜೋಗಿಬೊಟ್ಟುರವರ ವಫಾತಿನ ಹಿನ್ನೆಲೆಯಲ್ಲಿ ಆದಮ್ ಹಾಜಿ ಕುಂಡಾಜೆ ಹಾಗೂ ಪುತ್ತುಮೋನು ಬಾವಾರವರನ್ನು ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು. ಹಾಲಿ ಇರುವ ಸಮಿತಿಯನ್ನು ಬರ್ಕಾಸ್ತುಗೊಳಿಸದೇ ಸಮಿತಿಯನ್ನು ಸ್ವಲ್ಪಮಟ್ಟಿನ ತಿದ್ದುಪಡಿಯನ್ನು ಮಾಡುವುದೆಂದು ತೀರ್ಮಾನಿಸಿ, ಕಾರ್ಯದರ್ಶಿಗಳಾಗಿ ವೈ ಇಬ್ರಾಹಿಂ ಎಲ್ಯಂಗ ಹಾಗೂ ಜೊತೆ ಕಾರ್ಯದರ್ಶಿಯಾಗಿ ಹಕೀಂ ಕೆಮ್ಮಾರ ರವರನ್ನು ಆರಿಸಲಾಯಿತು.
ಹಾಲಿ ಸಮಿತಿಗೆ ಹೊಸದಾಗಿ ಅಬೂಬಕ್ಕರ್ ಸಿದ್ದೀಕ್ ಬೀಜತ್ತಳಿ, ಝಕರಿಯ ಮುಸ್ಲಿಯಾರ್ ಅತೂರು ಹಾಗೂ ಹುಸೖನ್ ಸಿರಾಜ್ ರವರನ್ನು ಸೇರ್ಪಡೆಗೊಳಿಸಲಾಯಿತು. ಸಭೆಯಲ್ಲಿ ಹಫ್ವಾ ಕುಟುಂಬದ ಸಬಲೀಕರಣ, ಕುಟುಂಬದ ಬಡವರಿಗೆ ನೆರವು ನೀಡಲು ಫಂಡ್ ಸಂಗ್ರಹ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಹೊಸದಾಗಿ ಸಮಿತಿಗೆ ಸೇರ್ಪಡೆಗೊಂಡ ಹುಸೖನ್ ಸಿರಾಜ್ ಪ್ರಾಸ್ತಾವಿಕ ಮಾತನ್ನಾಡಿದರು.
ಕಾರ್ಯಧರ್ಶಿ ಹಕೀಂ ಕೆಮ್ಮಾರ ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆಗೈದರು. ಝಕರಿಯಾ ಮುಸ್ಲಿಯಾರ್ ದುಆ ನೆರವೇರಿಸಿದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.