ಬೆಳ್ತಂಗಡಿ : ಜೂನ್ 7 ರಂದು ರಿಫಾಯಿಯ್ಯ ಜುಮಾ ಮಸ್ಜಿದ್ ಬೆದ್ರಬೆಟ್ಟು ವಿನಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಸೌಹಾರ್ದ ಸಂದೇಶ ಭಾಷಣದೊಂದಿಗೆ ಬಕ್ರೀದ್ ಹಬ್ಬ ಆಚರಣೆ ಮಾಡಲಾಯಿತು.
ಸಂದೇಶ ಭಾಷಣ ಮಾಡಿದ ಖತೀಬ್ ಉಸ್ತಾದ್ ಅಬೂ ರಬೀಹ್ ಶರೀಫ್ ಸಖಾಫಿ ಉಜಿರ್ಬೆಟ್ಟು ಸರ್ವ ಧರ್ಮೀಯರಲ್ಲಿ ಸ್ನೇಹ ಸಹಬಾಳ್ವೆಯ ಜೀವನದ ನಡೆಸುವುದು ಕಾಲದ ಬೇಡಿಕೆ.ಪವಿತ್ರ ಇಸ್ಲಾಂ ಧರ್ಮ ಯಾವತ್ತೂ ಸೌಹಾರ್ದತೆ , ಸ್ನೇಹ , ಐಕ್ಯತೆಗೆ ಪ್ರಾಧಾನ್ಯತೆ ನೀಡಿದೆ.ಇತರ ಯಾವುದೇ ಧರ್ಮೀಯರ ಮನಸ್ಸು ನೋಯಿಸುವ ಯಾವುದೇ ರೀತಿಯ ತಪ್ಪು ಸಂದೇಶದಿಂದ ಯುವಕರು ದೂರವಿರಬೇಕು ಎಂದು ನುಡಿದರು.
ಬೆದ್ರಬೆಟ್ಟು ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರು ಬಿ.ಸಲೀಂ , ಗೌರವಾಧ್ಯಕ್ಷರು ಹಸನಬ್ಬ , ಪ್ರಧಾನ ಕಾರ್ಯದರ್ಶಿ ಮುಸ್ತಫಾ ಮಾಸ್ಟರ್, ಕೋಶಾಧಿಕಾರಿ ಅಬ್ದುಲ್ ಮಜೀದ್, ಜೊತೆ ಕಾರ್ಯದರ್ಶಿ ಸಿರಾಜುದ್ದೀನ್ , ಸಮಿತಿ ಸದಸ್ಯರು , ಊರಿನ ಉಲಮಾ ಉಮರಾ ನಾಯಕರು, ಹಿರಿಯರು, ಯುವಕರು, ಕಿರಿಯರು ಭಾಗಿಯಾದರು.ಸುನ್ನೀ ಬಾಲ ಸಂಘ SBS ವಿದ್ಯಾರ್ಥಿಗಳು ಈದ್ ಶುಭಾಷಯ ಕಾರ್ಡನ್ನು ಚೋಕ್ ಲೇಟ್ ನೊಂದಿಗೆ ಎಲ್ಲರಿಗೂ ಹಂಚಿ ವಿಶೇಷ ರೀತಿಯ ಬಕ್ರೀದ್ ಹಬ್ಬ ಆಚರಣೆಯಲ್ಲಿ ಭಾಗಿಯಾದರು.