ವಿಟ್ಲ:ಪಡ್ನೂರು ಗ್ರಾಮದ ಸಾಲೆತ್ತೂರು ಸಮೀಪದ ಮದಕದಲ್ಲಿ ವರ್ಷಂಪ್ರತಿ ಅಸ್ಸಯ್ಯಿದ್ ಮದಕ ತಂಙಳ್ ನೇತೃತ್ವದಲ್ಲಿ ನಡೆಯುವ ಜಲಾಲಿಯ್ಯ ರಾತೀಬಿನ 6 ನೇ ವಾರ್ಷಿಕ ಡಿಸೆಂಬರ್ 28(ಇಂದು)ರಾತ್ರಿ ಮಗ್ರಿಬ್ ನಮಾಝ್ ಬಳಿಕ ಮದಕದಲ್ಲಿ ಶೈಖುನಾ ವಾಲೆಮುಂಡವು ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಅಸ್ಸಯ್ಯಿದ್ ಅಬ್ದುಲ್ ಹಮೀದ್ ತಂಙಳ್ ಉದ್ಯಾವರ ದುಆ ನೇತೃತ್ವ ನೀಡಲಿದ್ದಾರೆ.ಕರ್ನಾಟಕ ಜಂಇಯ್ಯತುಲ್ ಉಲಮಾ ಇದರ ಕಾರ್ಯದರ್ಶಿ ಮುಹಿಯುದ್ದೀನ್ ಕಾಮಿಲ್ ಸಖಾಫಿ,ತೋಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಸ್ಸಯ್ಯಿದ್ ಮದಕ ತಂಙಳ್,ಅಸ್ಸಯ್ಯಿದ್ ಅಲವಿ ತಂಙಳ್ ಕರ್ಕಿ,ಆರೀಫ್ ಸಅದಿ ಬಟ್ಕಳ ಜಲಾಲಿಯ್ಯ ರಾತೀಬ್ ನೇತೃತ್ವ ನೀಡಲಿದ್ದಾರೆ ಹಾಗೂ ಸಾದಾತ್ ಉಲಮಾ ಉಮಾರಾ ನಾಯಕರುಗಳು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸುಲೈಮಾನ್ ಹಾಜಿ ಮದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.