janadhvani

Kannada Online News Paper

ಡಾ|ಸಿ.ಕೆ.ಮೌಲಾ ಶರೀಫ್ ರಿಗೆ ಭೀಮ ರತ್ನ ಪ್ರಶಸ್ತಿ

ಡಾ. ಸಿ. ಕೆ ಮೌಲಾ ಶರೀಫ್ ಬೆಂಗಳೂರಿನ ನಿವಾಸಿಯಾಗಿದ್ದು, ಖ್ಯಾತ ನ್ಯಾಯವಾದಿಯಾಗಿ ಸಂಘಟಕರಾಗಿ , ಕಾರುಣ್ಯ ಸೇವಕರಾಗಿ, ಬಹುಭಾಷಾ ಭಾಷಣಗಾರರಾಗಿ ಗುರುತಿಸಿಕೊಂಡಿದ್ದಾರೆ.

ಬೆಂಗಳೂರು: ಕರ್ನಾಟಕ ರಕ್ಷಣಾ ಸಮಿತಿ ಕೊಡಮಾಡುವ ಭೀಮ ರತ್ನ ಪ್ರಶಸ್ತಿಗೆ ಡಾ ಸಿ ಕೆ ಮೌಲಾ ಶರೀಫ್ ಆಯ್ಕೆಯಾಗಿದ್ದಾರೆ.
ಅವರು ಇಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಡಾ. ಸಿ. ಕೆ ಮೌಲಾ ಶರೀಫ್ ಬೆಂಗಳೂರಿನ ನಿವಾಸಿಯಾಗಿದ್ದು, ಖ್ಯಾತ ನ್ಯಾಯವಾದಿಯಾಗಿ ಸಂಘಟಕರಾಗಿ , ಕಾರುಣ್ಯ ಸೇವಕರಾಗಿ, ಬಹುಭಾಷಾ ಭಾಷಣಗಾರರಾಗಿ ಗುರುತಿಸಿಕೊಂಡಿದ್ದಾರೆ. ಹಿಂದೂಸ್ಥಾನ್ ಗೋಲ್ಡ್ ಕಂಪನಿ ಸ್ಥಾಪಿಸಿ ಹಲವಾರು ಸಮಾಜ ಮುಖಿ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಇವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಕ್ಷಣಾ ಸಮಿತಿ ಭೀಮ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

error: Content is protected !! Not allowed copy content from janadhvani.com