janadhvani

Kannada Online News Paper

ಬಜಗೋಳಿ ಯಲ್ಲಿ ಯಶಸ್ವಿಯಾಗಿ ನಡೆದ ELYSIUM ಸ್ಟೂಡೆಂಟ್ ಕ್ಯಾಂಪ್

ಬಜಗೋಳಿ : SJM ಕರ್ನಾಟಕ ರಾಜ್ಯ ಹಮ್ಮಿ ಕೊಂಡ ELYSIUM Student ಕ್ಯಾಂಪ್ ಮದ್ರಸ ಮಟ್ಟದಲ್ಲಿ 24 ಆದಿತ್ಯವಾರ ದಂದು ಬಜಗೋಳಿ ಮದ್ರಸ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.
ಬಜಗೋಳಿ ಜಮಾಅತ್ ಅಧ್ಯಕ್ಷರಾದ ಜನಾಬ್ ಸಿ. ಯಚ್ ಪುತ್ತಾಕ ಧ್ವಜರೋಹಣ ನಡೆಸುದರೊಂದಿಗೆ ಚಾಲನೆ ನೀಡಿದರು.

ನಂತರ ಕಾರ್ಯಕ್ರಮದಲ್ಲಿ SJU ಕಾರ್ಕಳ ಝೋನಲ್ ಅಧ್ಯಕ್ಷರಾದ ಹೊಸ್ಮಾರಿನ ಮಜ್’ಮ’ಉಸ್ಸುನ್ನ ಮಹಿಳಾ ಶರೀಅತ್ ಕಾಲೇಜ್’ನ ಮುದರ್ರಿಸ್ MH..ಸುಲೈಮಾನ್ ಸ’ಅದಿ-ಅಲ್ಅಫ್ಳಲಿ ದುಆ ನೆರವೇರಿಸಿದರು. ಬಜಗೋಳಿ ಖತೀಬ್ ಅಬ್ದುರ್ರಹ್ಮಾನ್ ಹುಮೈದಿ ಉದ್ಘಾಟಿಸಿದರು. ಬಜಗೋಳಿ ಜಮಾಅತ್ ಗೌರವಾಧ್ಯಕ್ಷ ಅಬ್ದುರ್ರಹ್ಮಾನ್ ಮುಸ್ಲಿಯಾರ್, SMA ಕಾರ್ಕಳ ರೀಜಿನಲ್ ಅಧ್ಯಕ್ಷರು ಹಾಜಿ H ಸುಲೈಮಾನ್ ಬಜಗೋಳಿ ಪ್ರಾಸ್ತವಿಕ ಭಾಷಣ ಮಾಡಿದರು.

ವೇದಿಕೆ ಯಲ್ಲಿ ಜಮಾಅತ್ ಅಧ್ಯಕ್ಷ ಪುತ್ತಾಕ, ಉಪಾಧ್ಯಕ್ಷ ಮಯ್ಯದಿ, ಸದಸ್ಯ ರಹೀಮ್ RK ನಗರ, K ಮೊಹಮ್ಮದ್ RK ನಗರ, ಸಯ್ಯದ್ ಭಾವಕ, M ಹನೀಫ್ ಗುರ್ಗಲಗುಡ್ಡೆ, KCF ಕತಾರ್ ಘುವೈಲಿನ ಯೂನಿಟ್ ಸದಸ್ಯ ಶಂಸುದ್ದೀನ್ ಬಜಗೋಳಿ ಉಪಸ್ಥಿತರಿದ್ದರು.
ನಂತರ ನಡೆದ ಮದ್ರಸ ವಿದ್ಯಾರ್ಥಿಗಳಿಗೆ ಕ್ಯಾಂಪ್ ತರಬೇತಿಯನ್ನು ಅಬ್ದುಲ್ ಖಾದರ್ ಮದನಿ ಬಂಗ್ಲಗುಡ್ಡೆ , ತಯ್ಯುಬ್ ಸಖಾಫಿ ಜರಿಗುಡ್ಡೆ , ಫಾರೂಕ್ ಸಖಾಫಿ ಜರಿಗುಡ್ಡೆ , ಅಬ್ದುಲ್ ಮದನಿ ಕಾಬೆಟ್ಟು ರವರು ನೇತೃತ್ವ ನೀಡಿದರು.
ವಿದ್ಯಾರ್ಥಿಗಳಿಂದ ಸೈನ್ಸ್ ಮೋಡೆಲ್ಸ್, ಚಿತ್ರಕಲೆ , ಮೆಹಂದಿ ಡಿಸೈನ್, ಕ್ರಾಫ್ಟ್, ಕಾಲಿಗ್ರಾಫಿ, ಎಕ್ಸಬೌ, ಗಳು ನಡೆಯಿತು.

ಕಾರ್ಯಕ್ರಮದ ನಂತರ ಮಖ್ಬರ ಝಿಯಾರತ್ ಮಾಡಿ. ಸಾಲು ಮರದ ತಿಮ್ಮಕ್ಕ ಪಾರ್ಕ್ ಗೆ ಭೇಟಿ ನೀಡಲಾಯಿತು. ಸಮಾರಂಭದಲ್ಲಿ ಆಹಾರ, ಹಣ್ಣುಹಂಪಲು, ತಂಪು ಪಾನೀಯ ಹಾಗೂ ಮಕ್ಕಳಿಗೆ ಬಹುಮಾನ ವನ್ನು ಜಮಾಅತ್ ವತಿಯಿಂದ ನೀಡಲಾಯಿತು.

error: Content is protected !! Not allowed copy content from janadhvani.com