ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಮ್ ಝೋನ್ ಅಧೀನದ ಡಿಕೆಯಸ್ಸಿ ಅಲ್ ಖೋಬರ್ ಘಟಕದ 30 ನೇ ವಾರ್ಷಿಕ ಮಹಾಸಭೆ ದಿನಾಂಕ 31, ಜನವರಿ 2025 ಶುಕ್ರವಾರ ಅಸ್ತ ಶನಿವಾರ ರಾತ್ರಿ 10.30 ಗಂಟೆಗೆ ಸರಿಯಾಗಿ ಅಲ್ ಖೋಬರ್ ಅಡಿಟೋರಿಯಂ ನಲ್ಲಿ ಜರಗಿತು.
ಅಲ್ ಖೋಬರ್ ಘಟಕದ ಅಧ್ಯಕ್ಷರಾದ ಅಶ್ರಫ್ ಚಿಕ್ಕಮಗಳೂರು ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮುಹಮ್ಮದ್ ಕೋಯ ಮುಸ್ಲಿಯಾರ್ ಲಕ್ಷದ್ವೀಪ ದುಆ ನೆರವೇರಿಸಿದರು. ಡಿಕೆಯಸ್ಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಸೂರಾ ಹಶ್ರ್ ನ ಲವ್ ಅಂಝಲ್ ನಾ ಪಾರಾಯಣ ಗೈದರು.
ಜನಾಬ್ ಮುಹಮ್ಮದ್ ಅಶ್ರಫ್ ನಾವುಂದ ಸಭೆಗೆ ಆಗಮಿಸಿದ ದಮ್ಮಾಮ್, ಅಲ್ ಖೋಬರ್, ತುಖ್ಬಾ ಹಾಗೂ ಜುಬೈಲ್ ನ ಡಿಕೆಯಸ್ಸಿ ಯ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಅಲ್ಲಾಹನ ಪವಿತ್ರ ನಾಮದೊಂದಿಗೆ ಸಮಾರಂಭವನ್ನು ಉದ್ಘಾಟಿಸಿದರು.
ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳ ವಾರ್ಷಿಕ ವರದಿ ಹಾಗೂ ಪ್ರಧಾನ ಕಾರ್ಯದರ್ಶಿ ಶಾಫಿ ಶುಐಬ್ ಮಂಗಳೂರು ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.
ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ಚಿಕ್ಕಮಗಳೂರು ಮಾತನಾಡುತ್ತಾ ನಮ್ಮ ಅಧಿಕಾರವಧಿಯಲ್ಲಿ ಡಿಕೆಯಸ್ಸಿ ಗಾಗಿ ನಮ್ಮೊಂದಿಗೆ ಸಹಕರಿಸಿ ಯಶಸ್ವಿಗೊಳಿಸಿದ ಸರ್ವರಿಗೂ ತಕ್ಕುದಾದ ಪ್ರತಿಫಲ ಅಲ್ಲಾಹು ದ್ವಿಲೋಕದಲ್ಲೂ ಅನುಗ್ರಹಿಸಲಿ ಆಮೀನ್ ಎಂದು ಪ್ರಾರ್ಥಿಸಿದರು.
ಮ್ಯಾನ್ ಆಫ಼್ ದಿ ಇಯರ್ ಎವಾರ್ಡ್ 2024 ಅಬ್ದುಲ್ ಹಮೀದ್ ಸುಳ್ಯ ರವರಿಗೆ ನೀಡಿ ಗೌರವಿಸಲಾಯಿತು.
ಡಿಕೆಯಸ್ಸಿಯ 30 ವರ್ಷದ ಸವಿ ನೆನಪಿಗಾಗಿ ಸದಸ್ಯರಾದ ಉಮರ್ ಫಾರೂಖ್ ಸುರತ್ಕಲ್ ಮತ್ತು ಎನ್. ಎಸ್. ಅಬ್ದುಲ್ಲಾ: ಮಂಜನಾಡಿಯವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಡಿಕೆಯಸ್ಸಿಯ ಅಭಿವ್ರದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಗೌರವಾಧ್ಯಕ್ಷ ಜನಾಬ್ ಮುಹಮ್ಮದ್ ಶರೀಫ್ ಬಜ್ಪೆ ಯವರನ್ನು ಆದರಣೀಯವಾಗಿ ಗೌರವಿಸಲಾಯಿತು ಹಾಗೂ ಕರ್ನಾಟಕ ಕಲ್ಚರಲ್ ಫ಼ೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ನ್ಯಾಶನಲ್ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಉಸ್ತಾದ್ ಅಬ್ದುರ್ರಶೀದ್ ಸಖಾಫಿಯವರನ್ನು ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಸ್ಥಾನ ವಹಿಸಿ ಅಮೋಘ ಸೇವೆ ಸಲ್ಲಿಸಿದ ಶಾಫಿ ಶುಐಬ್ ಮಂಗಳೂರು ರವರಿಗೆ ಸೆಕ್ರೆಟೇರಿಯಲ್ ಅವಾರ್ಡ್ 2024 ನೀಡಿ ಆದರಿಸಲಾಯಿತು.ಡಿಕೆಯಸ್ಸಿ ಕೇಂದ್ರ ಸಮಿತಿ ಅಧೀನದ ಸದಸ್ಯತನ ಅಭಿಯಾನದಲ್ಲಿ ಅಲ್ ಖೊಬರ್ ಘಟಕ ತ್ರತೀಯ ಸ್ಥಾನ ಪಡೆದಿದ್ದು ಅದರ ಮೊಮೆಂಟೊ ವಿತರಿಸಲಾಯಿತು ಹಾಗೂ ನೂತನ ಸದಸ್ಯರನ್ನು ಡಿಕೆಯಸ್ಸಿ ಗೆ ಸೇರಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಜನಾಬ್ ಉಸ್ಮಾನ್ ಹೊಸಂಗಡಿ ಯವರಿಗೆ ಬೆಸ್ಟ್ ಅವಾರ್ಡನ್ನು ನೀಡಿ ಅಭಿನಂದಿಸಲಾಯಿತು.
ಮುಲಾಖಾತ್ ನ ಯಶಸ್ವಿಗೆ ಕಾರಣಕರ್ತರಾದ ಅಲ್ ಖೋಬರ್ ಘಟಕದ ಸದಸ್ಯರಾದ ಮುಹಮ್ಮದ್ ಮಲೆಬೆಟ್ಟು ಮತ್ತು ಮುಹಮ್ಮದ್ ಹನೀಫ್ ದೇರಳಕಟ್ಟೆ ಯವರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. 2025 ನೇ ಸಾಲಿಗೆ ನೂತನ ಸಮಿತಿಯನ್ನು ಡಿಕೆಯಸ್ಸಿ ಕೇಂದ್ರ ಸಮಿತಿ ಹಣಕಾಸು ಕಾರ್ಯದರ್ಶಿ ದಾವೂದ್ ಕಜೆಮಾರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಅಧ್ಯಕ್ಷರಾಗಿ ಇರ್ಶಾದ್ ಅಬ್ದುರ್ರಹ್ಮಾನ್ ಪುತ್ತೂರು , ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಶುಐಬ್ ಮಂಗಳೂರು , ಹಣಕಾಸು ಕಾರ್ಯದರ್ಶಿಯಾಗಿ ಸರ್ಫ್ರಾಝ್ ಬಜ್ಪೆ, ಜಂಟಿ ಕಾರ್ಯದರ್ಶಿಯಾಗಿ ಇಫ್ತಿಖಾರ್ ಸುಲ್ತಾನ್ ಸುರತ್ಕಲ್, ಸಂವಹನ ಕಾರ್ಯದರ್ಶಿಯಾಗಿ ಸುಲೈಮಾನ್ ಕನ್ನಂಗಾರ್ ಹಾಗೂ ಡೆವಲಪ್ಮೆಂಟ್ ಚೆಯರ್ಮ್ಯಾನ್ ಆಗಿ ಮುಹಮ್ಮದ್ ಶರೀಫ್ ಬಜ್ಪೆ ಆಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಅಶ್ರಫ್ ನಾವುಂದ, ಮುಹಮ್ಮದ್ ಹನೀಫ್ ದೇರಳಕಟ್ಟೆ ಹಾಗೂ ಮುಹಮ್ಮದ್ ಮಲೆಬೆಟ್ಟು. ಕಾರ್ಯದರ್ಶಿಗಳಾಗಿ ರಫೀಖ್ ವಿಟ್ಲ, ಅಬ್ದುಲ್ ಜಬ್ಬಾರ್ ಪುತ್ತೂರು ಮತ್ತು ಶಬೀರ್ ಬೆಳ್ಳಾರೆ ರವರನ್ನು ನೇಮಿಸಲಾಯಿತು.
ಮುಖ್ಯ ಸಲಹೆಗಾರರಾಗಿ ಉಸ್ಮಾನ್ ಹೊಸಂಗಡಿ, ಲೆಕ್ಕ ಪರಿಶೋಧಕರಾಗಿ ಇಸ್ಮಾಯೀಲ್ ಹೊಸಂಗಡಿ ರವರನ್ನು ಆರಿಸಲಾಯಿತು.
ಮುಹಮ್ಮದ್ ರೋಯಲ್ ಮುಕ್ವೆ, ಮುಹಮ್ಮದ್ ಅಶ್ರಫ್ ಚಿಕ್ಕಮಗಳೂರು, ಅಬ್ದುಲ್ ಗಫೂರ್ ಸಜಿಪ,ಅಬ್ದುರ್ರಶೀದ್ ಬೆಳ್ಳಾರೆ, ಅಬ್ದುಲ್ ಹಮೀದ್ ಸುಳ್ಯ, ಹಸನ್ ಮುಕ್ವೆ, ಅಬ್ದುರ್ರ ಝ್ಝಾಖ್ ಕಂಬಳಬೆಟ್ಟು, ಅಬ್ಬುಚ್ಚ ಮುಕ್ವೆ, ಹಬೀಬ್ ನೇರಳಕಟ್ಟೆ ಮತ್ತು ಮುಹಮ್ಮದ್ ಅಶ್ರಫ್ ಉಚ್ಚಿಲರವರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ದಮ್ಮಾಮ್ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾಪು, ಡಿಕೆಯಸ್ಸಿ ವಿಶನ್ 30 ಚೆಯರ್ಮ್ಯಾನ್ ಹಾತಿಂ ಕೂಳೂರು, ಫ್ಯಾಮಿಲಿ ಮುಲಾಖಾತ್ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಮೂಳೂರು ರವರು ಆಗಮಿಸಿದ್ದರು.
ಡಿಕೆಯಸ್ಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಬರ್ವ, ದಮ್ಮಾಂ ವಲಯ ಕೋಶಾಧಿಕಾರಿ ಅಬ್ದುಲ್ ಕರೀಂ ಪಾಣೆಮಂಗಳೂರು, ದಮ್ಮಾಂ ಘಟಕದ ಕೋಶಾಧಿಕಾರಿ ಅಬೂಬಕ್ಕರ್ ಅಜಿಲಮೊಗರು ಹಾಗೂ ತುಖ್ಬಾ ಘಟಕದ ಸಲಹೆಗಾರ ಮುಹಮ್ಮದ್ ಹನೀಫ್ ಜೆಪ್ಪು ಹಾಜರಿದ್ದರು.
ಶುಭಾಶoಸೆಗೈದವರು:
ಡಿಕೆಯಸ್ಸಿ ದಮ್ಮಾಂ ವಲಯದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ, ಅಲ್ ಖೋಬರ್ ಘಟಕದ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಇರ್ಶಾದ್ ಅಬ್ದುರ್ರಹ್ಮಾನ್ ಪುತ್ತೂರು ಮಾತನಾಡುತ್ತಾ ತಾವುಗಳೆಲ್ಲರೂ ಡಿಕೆಯಸ್ಸಿ ಗಾಗಿ ಹೆಚ್ಚಿನ ಮುತುವರ್ಜಿಯಿಂದ ಪ್ರವರ್ತನೆಗೈದು ಡಿಕೆಯಸ್ಸಿಯ ಅಭಿವೃದ್ಧಿಗೆ ನಮ್ಮೊಂದಿಗೆ ಕೈ ಜೋಡಿಸಬೇಕೆoದು ವಿನಂತಿಸಿದರು.
ಸಭೆಯ ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿಶಾಫಿ ಶುಐಬ್ ಮಂಗಳೂರು ಧನ್ಯವಾದ ಗೈದರು.
ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳಕಾರ್ಯಕ್ರಮ ನಿರೂಪಿಸಿದರು.