janadhvani

Kannada Online News Paper

ಉಮ್ರಾ ಯಾತ್ರಿಕರಿಗೆ ಏಪ್ರಿಲ್ 29 ರವರೆಗೆ ಮಾತ್ರ ಸೌದಿಯಲ್ಲಿ ಇರಲು ಅವಕಾಶ

ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾವನ್ನು ಪ್ರವೇಶಿಸಲು ಏಪ್ರಿಲ್ 13 ಕೊನೆಯ ದಿನಾಂಕವಾಗಿದೆ.

ಜಿದ್ದಾ: ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಆಗಮಿಸುವವರು ಏಪ್ರಿಲ್ 29 ರ ಮೊದಲು ಸ್ವದೇಶಕ್ಕೆ ಮರಳಬೇಕು, ಅದನ್ನು ಮೂರು ತಿಂಗಳ (90-ದಿನ) ಅವಧಿ ಎಂದು ಪರಿಗಣಿಸುಲಾಗುವುದಿಲ್ಲ.

ಹಜ್ ಸಿದ್ಧತೆಯ ಭಾಗವಾಗಿ ಪ್ರತಿ ವರ್ಷವೂ ಇದೇ ರೀತಿಯ ನಿರ್ಬಂಧವನ್ನು ವಿಧಿಸಲಾಗುತ್ತದೆ. ಪ್ರಸ್ತುತ ನೀಡಲಾಗುತ್ತಿರುವ ಉಮ್ರಾ ವೀಸಾಗಳಲ್ಲಿ, ಉಮ್ರಾ ವೀಸಾ ಹೊಂದಿರುವವರಿಗೆ ಏಪ್ರಿಲ್ 29 ರವರೆಗೆ ಮಾತ್ರ ಸೌದಿ ಅರೇಬಿಯಾದಲ್ಲಿ ಉಳಿಯಲು ಅವಕಾಶವಿದೆ ಎಂದು ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ, ಉಮ್ರಾ ವೀಸಾವು 90 ದಿನಗಳ ಕಾಲಾವಧಿ ಹೊಂದಿರುತ್ತದೆ, ಆದರೆ ಹೊಸ ಪರಿಸ್ಥಿತಿಯಲ್ಲಿ, 90 ದಿನಗಳ ಅವಧಿಯನ್ನು ಪೂರ್ಣಗೊಳಿಸಲು ದಿನಗಳು ಬಾಕಿ ಇದ್ದರೂ ಏಪ್ರಿಲ್ 29 ರ ನಂತರ ಸೌದಿಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದರ್ಥ, ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾವನ್ನು ಪ್ರವೇಶಿಸಲು ಏಪ್ರಿಲ್ 13 ಕೊನೆಯ ದಿನಾಂಕವಾಗಿದೆ.

ಈ ಬಗ್ಗೆ ಸೌದಿ ಅರೇಬಿಯಾ ಹಜ್ ಮತ್ತು ಉಮ್ರಾ ಸಚಿವಾಲಯದಿಂದ ಅಧಿಕೃತವಾಗಿ ಸೂಚನೆಗಳು ಇನ್ನಷ್ಟೇ ಬರಬೇಕಾಗಿದೆ.

error: Content is protected !! Not allowed copy content from janadhvani.com