ದಿನಾಂಕ:ಅಕ್ಷಯ ಬ್ಲಡ್ ಡೋನರ್ಸ್ ಇದರ 38 ನೇ ರಕ್ತದಾನ ಶಿಬಿರವು 02-02-2025 ರಂದು ಝಕರಿಯಾ ನಾರ್ಶ ಅಧ್ಯಕ್ಷತೆಯಲ್ಲಿ K G N ಕ್ಯಾಂಪಸ್ ನಲ್ಲಿ ನಡೆಸಲಾಯಿತು.
ರಕ್ತದಾನ ಶಿಬಿರದಲ್ಲಿ 64 ಮಂದಿ ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ. ಶೈಖುನಾ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಃಅ ನೆರವೇರಿಸಿದರು. ಹುಸೈನ್ ಮುಈನಿ ಉದ್ಘಾಟಿಸಿದರು.
ಅತಿಥಿಗಳಾಗಿ ಸದಕತುಲ್ಲಾ ನದ್ವಿ, ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಸಿದ್ದೀಕ್ ಮೋಂಟುಗೋಳಿ, ಮಹರೂಫ್ ಸುಲ್ತಾನಿ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್, ಹಾಗೂ ಇನ್ನಿತರ ಉಲಮಾ ಉಮರಾಗಳು ಭಾಗವಹಿಸಿದರು.
ಸಿದ್ದೀಕ್ ಗೂನಡ್ಕ ಸ್ವಾಗತಿಸಿ ವಂದಿಸಿದರು.