ಕಿನ್ಯಾ :ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS) ಕಿನ್ಯ ಸರ್ಕಲ್ ವ್ಯಾಪ್ತಿಯ ಬದ್ರಿಯಾ ನಗರ ಯುನಿಟ್ ನ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಬಷೀರ್ ಹನೀಫಿ, ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್, ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಸಮದ್ ಆಯ್ಕೆಯಾಗಿದ್ದಾರೆ.
ಮುಸ್ಲಿಂ ಜಮಾಅತ್ ಬದ್ರಿಯಾ ನಗರ ಯುನಿಟ್ ಅಧ್ಯಕ್ಷ ಯೂಸುಫ್ ರವರ ಅಧ್ಯಕ್ಷತೆಯಲ್ಲಿ SჄS ಬದ್ರಿಯಾ ನಗರದ ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಸಅದಿ ಸಭೆಯನ್ನು ಉದ್ಘಾಟಿಸಿದರು.
ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಉಮರುಲ್ ಫಾರೂಖ್ ಸಖಾಫಿ ಮೀಂಪ್ರಿ ರವರು ಆಯ್ಕೆ ಪ್ರಕ್ರಿಯೆಗೆ ನೇತೃತ್ವ ವಹಿಸಿದ್ದರು.
ಇತರ ಪದಾಧಿಕಾರಿಗಳಾಗಿ ಮುಹಮ್ಮದ್ ಕೌಸರ್ ಅಲಿ (ಉಪಾಧ್ಯಕ್ಷರು) ಆರಿಫ್ ಮೊಯಿದಿನ್ (ದಅ್‌ವಾ ಕಾರ್ಯದರ್ಶಿ)ಆಸಿಫ್ U,K (ಸಾಂತ್ವನ & ಇಸಾಬ ಕಾರ್ಯದರ್ಶಿ)
ಉಳಿದಂತೆ ಮಹ್ಬೂಬ್ ಸಖಾಫಿ ಕಿನ್ಯ,ಅಶ್ರಫ್ ಸಅದಿ,ಆರಿಫ್,ಇಕ್ಬಾಲ್ ಅಝೀಝ್,ಸಿರಾಜುದ್ದೀನ್,ಸ್ವಾದಿಖ್,ಮನ್ಸೂರ್,ಅಬ್ದುಸ್ಸಲಾಂ,ಇಕ್ಬಾಲ್ ಕೋಟ್ರಸ್, ಬಷೀರ್ H.A,ಉಮರ್ ಝುಹ್ರಿ ರವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.
ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಹಾಜಿ ಸಾಗ್, ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ, ಬುಖಾರಿ ಜುಮುಅ ಮಸ್ಜಿದ್ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಅಬ್ಬಾಸ್ ಹಾಜಿ ನಾಟೆಕಲ್, SჄS ಕಿನ್ಯ ಸರ್ಕಲ್ ಸಾಂತ್ವನ ಕಾರ್ಯದರ್ಶಿ ಅಯ್ಯೂಬ್ ಬೆಳರಿಂಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಬುಖಾರಿ ಜುಮುಅ ಮಸ್ಜಿದ್ ಖತೀಬ್ ಅಬ್ದುಸ್ಸಲಾಂ ಸಅದಿ ರವರು ದುಆಗೆ ನೇತೃತ್ವ ನೀಡಿದರು,ಕೊನೆಯಲ್ಲಿ ನೂತನ ಕಾರ್ಯದರ್ಶಿ ಆಸಿಫ್ ಧನ್ಯವಾದ ಸಲ್ಲಿಸಿದರು.