janadhvani

Kannada Online News Paper

ಕೆಸಿಎಫ್ ಬಹರೈನ್ ವತಿಯಿಂದ ಆಝಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮ

ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ 76 ನೇ ಸ್ವಾತಂತ್ರ್ಯದ ಪ್ರಯುಕ್ತ ಆಝಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮವು ಆಗಸ್ಟ್ 19 ರಂದು ರಾತ್ರಿ 8 ಗಂಟೆಗೆ ಅಲ್ ಹಿಲಾಲ್ ಆಡಿಟೋರಿಯಂ ಸಲ್ಮಾಬಾದ್ ಬಹರೈನ್ ನಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ನೇತಾರಾದ ಬಹು| ಅಲಿ ಮುಸ್ಲಿಯಾರ್ ಕೊಡಗು ಇವರ ದುಆದೊಂದಿಗೆ ಆರಂಭಗೊಂಡಿತು.

ಕೆಸಿಎಫ್ ಬಹರೈನ್ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್| ಜಮಾಲುದ್ದೀನ್ ವಿಟ್ಲರವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ವೈ ಎಸ್ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ವಲಯದ ಅಧ್ಯಕ್ಷರಾದ ಸಿ ಎಚ್ ಮುಹಮ್ಮದ್ ಅಲಿ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಂಘ ಬಹರೈನ್ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಸೇಕ್ರೆಡ್ ಹಾರ್ಟ್ ಕ್ಯಾಥೋಲಿಕ್ ಚರ್ಚ್ ಮನಾಮ ಇದರ ಪ್ರಭಾರಿ ಸಹಾಯಕ ಅರ್ಚಕರಾದ ಫಾ|ಡೇರಲ್ ಫೆರ್ನಾಂಡಿಸ್ ಕಪುಚಿನ್, ಅಂತರ್ ರಾಷ್ಟ್ರೀಯ ಟೋಸ್ಟ್ ಮಾಸ್ಟರ್ ಬಹರೈನ್ ಐ ವಿಭಾಗದ ನಿರ್ದೇಶಕರಾದ DTM ರೋಷನ್ ಲೆವಿಸ್ ಹಾಗೂ ಕೆಸಿಎಫ್ ಬಹರೈನ್ ಉರ್ದು ವಿಂಗ್ ನೇತಾರರಾದ ಗಯಾಝುದ್ದೀನ್ ಮೈಸೂರು, ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಅಧ್ಯಕ್ಷರಾದ ಕಲಂದರ್ ಮುಸ್ಲಿಯಾರ್ ಕಕ್ಕೆಪದವು ಕಾರ್ಯಕ್ರಮದಲ್ಲಿ ಆಶಂಸಾ ಭಾಷಣ ಮಾಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ
ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಸ್ವತಂತ್ರ ಭಾರತದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಬಹರೈನ್ ರಾಷ್ಟ್ರೀಯ ನಾಯಕರು, ಝೋನ್, ಸೆಕ್ಟರ್ ಗಳ ನಾಯಕರು ಮತ್ತು ಸದಸ್ಯರು ಭಾಗವಹಿಸಿದರು.

ಕೆಸಿಎಫ್ ಬಹರೈನ್ ಪಬ್ಲಿಕೇಶನ್ ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ ಸ್ವಾಗತಿಸಿ, ಪಬ್ಲಿಕೇಶನ್ ಅಧ್ಯಕ್ಷರಾದ ಲತೀಫ್ ಪೇರೋಲಿ ಕಾರ್ಯಕ್ರಮ ನಿರೂಪಿಸಿದರು.

ಸಾಂತ್ವನ ಇಲಾಖೆ ಅಧ್ಯಕ್ಷರಾದ ಇರ್ಫಾನ್ ಮೇಲ್ಕಾರ್ ವಂದಿಸಿ. ಇಹ್ಸಾನ್ ಇಲಾಖೆಯ ಅಧ್ಯಕ್ಷರಾದ ಸಮದ್ ಉಜಿರೆಬೆಟ್ಟು ರವರ ರಾಷ್ಟ್ರಗೀತೆ ಆಲಾಪನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

error: Content is protected !! Not allowed copy content from janadhvani.com