janadhvani

Kannada Online News Paper

ಗೂಡಿನಬಳಿ ನಿವಾಸಿ ಮುಹಮ್ಮದ್ ಗೌಸ್ (ಕಿಡಾವು) ರ ಅಂತ್ಯಕ್ರಿಯೆಗೆ ಸಹಕರಿಸಿದ ಕೆ.ಸಿ.ಎಫ್

ಸೌದಿ ಅರೇಬಿಯಾ: ಜುಬೈಲ್ ನಲ್ಲಿ ಮೃತಪಟ್ಟ ಬಂಟ್ವಾಳ ತಾಲ್ಲೂಕಿನ ಗೂಡಿನಬಳಿ ನಿವಾಸಿ ಮುಹಮ್ಮದ್ ಗೌಸ್ (ಕಿಡಾವು) ಎಂಬವರ ಅಂತ್ಯಕ್ರಿಯೆಯು ಆಗಸ್ಟ್ 15 ರ ಸೋಮವಾರದಂದು ಜುಬೈಲ್ ನ ಖಬರ್ ಸ್ಥಾನದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಕೆಸಿಎಫ್ ಸದಸ್ಯರ ಸಮ್ಮುಖದಲ್ಲಿ ದುವಾಮೂಲಕ ನೆರೆವೇರಿಸಲಾಯ್ತು.

ಮೂರು ತಿಂಗಳ ಮುಂಚೆ ಕುಟುಂಬಸ್ಥರನ್ನು ಭೇಟಿಯಾಗಲು ವಿಸಿಟ್ ವೀಸಾ ಮೂಲಕ ಸೌದಿ ಅರೇಬಿಯಾಕ್ಕೆ ಆಗಮಿಸಿದವರು, ಅನಾರೋಗ್ಯದ ಕಾರಣದಿಂದ ಇನ್ನೆರಡು ದಿನಗಳಲ್ಲಿ ಊರಿಗೆ ಹೋಗಲು ಎಲ್ಲಾ ಸಿದ್ಧತೆಯನ್ನು ನಡೆಸಿದ್ದರು. ಆದರೆ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿ ದಿನಾಂಕ 11.08.2022 ರ ಗುರುವಾರದಂದು ತಮ್ಮ ಪುತ್ರನ ಸ್ವಗೃಹದಲ್ಲಿ ಮೃತಪಟ್ಟಿದ್ದರು.
ಮೃತರ ಅಂತ್ಯ ಸಂಸ್ಕಾರಕ್ಕೆ ಬೇಕಾದ ದಾಖಲೆ ಪತ್ರಗಳು, ಭಾರತೀಯ ರಾಯಭಾರಿ ಕಛೇರಿಗೆ ಬೇಕಾದ ಕಡತಗಳು ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ನಾಯಕರ ನೇತೃತ್ವದಲ್ಲಿ ಸರಿಪಡಿಸಿದ್ದರು.

ಈ ಒಂದು ಪುಣ್ಯ ಕಾರ್ಯದಲ್ಲಿ ಕೈಜೋಡಿಸಿ ಸಹಕರಿಸಿದ ಕೆ.ಸಿ.ಎಫ್ ಜುಬೈಲ್ ಝೋನ್ ಸಾಂತ್ವನ ಇಲಾಖೆಯ ನಾಯಕರು, ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಮತ್ತು ಇತರ ಎಲ್ಲಾ ನಾಯಕರುಗಳಿಗೆ ಹಾಗೂ ಹಿತೈಶಿಗಳಿಗೆ ಕೆಸಿಎಫ್ ಜುಬೈಲ್ ಸಮಿತಿಯ ಸಾಂತ್ವಾನ ವಿಭಾಗವು ಎಲ್ಲಾ ವಿಧದ ಕೃತಜ್ಞತೆಗಳನ್ನು ಸಲ್ಲಿಸಿರುವುದಾಗಿ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಸಾಂತ್ವನ ವಿಭಾಗ*
ಕೆ.ಸಿ.ಎಫ್ ಜುಬೈಲ್ ಝೋನ್✍🏻

error: Content is protected !! Not allowed copy content from janadhvani.com