ಬೆಳ್ತಂಗಡಿ (ಮಾ.16): ಕರ್ನಾಟಕ ಅಮೀರ್ ಎ ಶರೀಯತ್ ಮುಖ್ಯಸ್ಥರಾದ ಮೌಲಾನ ಸಗೀರ್ ಅಹಮ್ಮದ್‌ರವರು, ಇತ್ತೀಚೆಗಿನ ಕರ್ನಾಟಕ ಉಚ್ಛ ನ್ಯಾಯಾಲಯದ ಹಿಜಾಬ್ ಕುರಿತ ತೀರ್ಪುವಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ, ಮತ್ತು ಹಿಜಾಬ್ ಇಸ್ಲಾಮಿನಲ್ಲಿ ಹಿಜಾಬ್ ಅವಿಭಾಜ್ಯ ಅಂಗ ವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆಯನ್ನು ವಿಮರ್ಶಿಸಿ ಕರ್ನಾಟಕ ದ್ಯಂತ ಮಾರ್ಚ್ 17 ರಂದು ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಕರೆ ನೀಡಿದ್ದು, ಈ ಕರೆಗೆ ಬೆಳ್ತಂಗಡಿ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸಿದೆ.
ತೀರ್ಪು ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಹಕ್ಕುಗಳನ್ನು ಕಸಿದು ಕೊಳ್ಳುವ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸ್ವಯಂ ಪ್ರೇರಿತ ಶಾಂತಿಯುತ ವ್ಯವಹಾರ ಸ್ಥಗಿತ ಮಾಡಬೇಕಾಗಿ ವಿನಂತಿ ಮತ್ತು ಈ ಸ್ಥಗಿತ ಶಾಂತಿಯುತ ವಾಗಿರುತ್ತದೆ.ಕಾನೂನು, ಶಾಂತಿ ಸುವ್ಯವಸ್ಥೆ ಪಾಲನೆಗೆ ಪೂರಕ ವಾಗಿರಲಿ ಎಂದು ಕರೆ ನೀಡಲಾಗಿದೆ ಎಂದು ಬೆಳ್ತಂಗಡಿ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಬಿ.ಎ. ನಝೀರ್ ಬೆಳ್ತಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ವಿದ್ಯಾರ್ಥಿನಿಯರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ನಿರಾಕರಣೆ- ಕ್ರಮ ಕೈಗೊಳ್ಳಲು ಆಗ್ರಹ
ಬೆಳ್ತಂಗಡಿ : ಸಿಎಎ ವಿರುದ್ಧ ಎಸ್ಡಿಪಿಐ ಪ್ರತಿಭಟನೆ
SჄS 30 ನೇ ವಾರ್ಷಿಕ ಸಮ್ಮೇಳನ ದ ಪ್ರಚಾರ: SჄS ಬೆಳ್ತಂಗಡಿ ಝೋನ್ ‘ENARGIZE-2K24’ ಯಶಸ್ವಿ
ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕು- ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ ಕ ಜಿಲ್ಲೆ: 75ನೇ ಸ್ವಾತಂತ್ರ್ಯ ಮಹೋತ್ಸವ ಆಚರಣೆ
ಗುರುವಾಯನಕೆರೆ: “ಗಣರಾಜ್ಯ ರಕ್ಷಿಸಿ” ಅಭಿಯಾನದ ಆಝಾದಿ ಎಕ್ಸ್’ಪೋ ಯಶಸ್ವಿ
ಗುರುವಾಯನಕೆರೆ: ಅಜಾದಿ ಎಕ್ಸ್’ ಪೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್: ಕ್ಯಾಂಪಸ್ ಅಸ್ಸೆಂಬ್ಲಿ ಸ್ಲೋಗನ್ ಸ್ಟಡಿ ಕ್ಲಾಸ್
ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ- ನೂತನ ಪದಾಧಿಕಾರಿಗಳು
ಬೆಳ್ತಂಗಡಿ: ಮುಸ್ಲಿಂ ಮುಖಂಡ ಹೈದರ್ ನೀರ್ಸಾಲ್ ನಿಧನ