janadhvani

Kannada Online News Paper

ಗುರುವಾಯನಕೆರೆ: “ಗಣರಾಜ್ಯ ರಕ್ಷಿಸಿ” ಅಭಿಯಾನದ ಆಝಾದಿ ಎಕ್ಸ್’ಪೋ ಯಶಸ್ವಿ

ಈ ವರದಿಯ ಧ್ವನಿಯನ್ನು ಆಲಿಸಿ

ಬೆಳ್ತಂಗಡಿ: 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಝ್ರತ್ ಶೈಖ್‌ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಗುರುವಾಯನಕೆರೆ ವತಿಯಿಂದ “ಗಣರಾಜ್ಯ ರಕ್ಷಿಸಿ” ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಅಬ್ದುಲ್ ಲತೀಫ್ ಇಂಜಿನಿಯರ್ ಸ್ವಾಗತದ ಮೂಲಕ ಪ್ರಾರಂಭಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯಿದ್ ಅಬ್ದುರಹ್ಮಾನ್ ಸಾದಾತ್ ತಂಙಳ್ ನೆರೆವೇರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಬಹು ಆದಂ ಅಹ್ಸನಿ ಉಸ್ತಾದ್, ಜನಾಬ್ ಉಸ್ಮಾನ್ ಶಾಫಿ ಅಧ್ಯಕ್ಷರು ಹಝ್ರತ್ ಅವುಲಿಯಾ ದರ್ಗಾ ಷರೀಫ್ ಮತ್ತು ಜುಮಾ ಮಸೀದಿ ಗುರುವಾಯನಕೆರೆ, ಬಹು ಅಬ್ದುಲ್ ನಾಸಿರ್ ಸಅದಿ ಉಸ್ತಾದ್, ಬಹು ಅಬ್ದುಲ್ ರಹ್ಮಾನ್ ಹಿಮಮಿ, ಸಖಾಫಿ ಉಸ್ತಾದರುಗಳು ಮಾತನಾಡಿದರು. ಕೊನೆಯದಾಗಿ ರೌಫ್ ಪುಂಜಾಲಕಟ್ಟೆ ಧನ್ಯವಾದಗೈದರು.

ಅದರೊಂದಿಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತೆರೆ ಮರೆಯ ಸ್ವಾತಂತ್ರ್ಯ ಹೋರಾಟಗಾರರ ಕಿರು ಪರಿಚಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಮಕ್ಕಳ ಹಲವು ಸ್ಪರ್ಧೆಗಳು ನಡೆಯಿತು.

error: Content is protected !! Not allowed copy content from janadhvani.com