ಬೆಳ್ತಂಗಡಿಸ: ದಕ್ಷಿಣ ಕನ್ನಡ ಜಿಲ್ಲಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಕಾರ್ಯಕ್ರಮ ಪೂಂಜಲಕಟ್ಟೆ ಜಂಕ್ಶನ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಇಮಾಮ್ಸ್ ಕೌನ್ಸಿಲ್ ಕರಾವಳಿ ಪ್ರಾಂತ್ಯ ಅಧ್ಯಕ್ಷ ಜಾಪರ್ ಸಾಧಿಕ್ ಫೈಝೀ, ಈ ಅಮೃತಮಹೋತ್ಸವದ ಸಂಭ್ರಮ ಕೆಲವರಿಗೆ ಮಾತ್ರ ಸೀಮಿತ ಆಗಿದೆ. ಪ್ರಭುತ್ವಕ್ಕೆ ಅಮೃತವಾದರೆ, ಬ್ರಷ್ಟರಿಗೆ , ಕೊಲೆಗಡುಕರಿಗೆ, ಗೂಂಡಾಗಳಿಗೆ , ಅಶಾಂತಿ ಹರಡುವವರಿಗೆ ಉತ್ಸವ ಆಗಿದೆ.
ದೇಶದ ಅಲ್ಪಸಂಖ್ಯಾತರಿಗೆ , ದಲಿತರಿಗೆ , ರೈತರಿಗೆ , ಕಾರ್ಮಿಕರಿಗೆ , ವಿಧ್ಯಾವಂತರಿಗೆ ಭವಿಷ್ಯದ ಬದುಕಿನ ಬಗ್ಗೆ ದೊಡ್ಡ ಆತಂಕ ಆಗಿದೆ.
ಜಾತ್ಯತೀತ ಪ್ರಜಾಪ್ರಭುತ್ವ ಸಂವಿಧಾನದ ಮೌಲ್ಯಗಳೊಂದಿಗೆ ಸ್ವಾಭಿಮಾನ ದಿಂದ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಭೀತಿಯ ವಾತಾವರಣ ದೇಶಾದ್ಯಂತ ಕಂಡುಬರುತ್ತಿದೆ.
ಭಾರತ ದೇಶದ ಈಗಿರುವ ಸಂವಿಧಾನವನ್ನು ಬುಡಮೇಳು ಗೊಳಿಸಿ ಮನುವಾದಿ ಬ್ರಾಹ್ಮಣ್ಯ ಹಿಂದುತ್ವದ ಸಂವಿಧಾನವನ್ನು ಜಾರಿಗೊಳಿಸುವ ಪ್ರಯತ್ನ ಬಹಿರಂಗವಾಗಿ ಸಕ್ರಿಯವಾಗಿ ನಡೆಯುತ್ತಿದೆ. ಅದಕ್ಕಾಗಿ ಸಂವಿಧಾನಿಕ ಸಂಸ್ಥೆಗಳನ್ನು ಸೌಕರ್ಯ ಗಳನ್ನು ಆಡಳಿತ ಸರಕಾರ ದುರ್ಬಳಕೆ ಮಾಡುತ್ತಿದೆ.
ಅನ್ಯಾಯದ ವಿರುದ್ದ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಆಡಳಿತ ಸರಕಾರ ಧಮನಿಸುತ್ತಿದೆ. ಇದು ದೇಶದ ಭವಿಷ್ಯಕ್ಕೆ ಬಹುದೊಡ್ಡ ಬೆದರಿಕೆ ಸವಾಲು ಆಗಿದೆ.
ದೇಶದ ಸಂವಿಧಾನದ ಮೌಲ್ಯಗಳ ಸಂರಕ್ಷಣೆಗಾಗಿ ಪ್ರತಿಯೊಬ್ಬ ಪ್ರಜೆಯು ಹಿಂದುತ್ವ ರಾಷ್ಟ್ರ ಸ್ಥಾಪಿಸುವ ಕೋಮುವಾದಿ ಸಂಘಪರಿವಾರ ಶಕ್ತಿಗಳ ವಿರುದ್ದ ಒಟ್ಟಾಗಿ ಹೋರಾಟ ಮಾಡುವ ಪ್ರತಿಜ್ಞೆಯನ್ನು ಮಾಡಬೇಕು.
ಸ್ವಾತಂತ್ರ್ಯ ಹೋರಾಟದ ಮಂಚೂಣಿಯಲ್ಲಿ ನಿಂತು ಧೀರೋದಾತ್ತ ಹೋರಾಟ ಮಾಡಿ ಹುತಾತ್ಮರಾದ ಸಹಸ್ರಾರು ಉಲೆಮಾಗಳ ಇತಿಹಾಸ ನಮಗೂ ಮಾದರಿ ಆಗಿದೆ. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಈ ಸಂದೇಶವನ್ನು ದೇಶಾದ್ಯಂತ ನೀಡುತ್ತಾ ಜನರಲ್ಲಿ ರಾಷ್ಟ್ರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಉಸ್ತಾದ್ ಉಸ್ಮಾನ್ ಸಅದಿ ಧ್ವಜಾರೋಹಣ ನಿರ್ವಹಿಸಿದರು .ಉಸ್ತಾದ್ ಅಬ್ದುಲ್ಲಾ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪನಕಜೆ ಜುಮ್ಮಾ ಮಸೀದಿಯ ಅಧ್ಯಕ್ಷ ಡಾಕ್ಟರ್ ನಿಯಾಝ್ ,ಪಾಂಡವರಕಲ್ಲು ಮಸೀದಿಯ ಅಧ್ಯಕ್ಷ ಅಥಾವುಲ್ಲಾ, ಮಾಲಾಡಿಪಲಿಕ್ಕೆ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ , ಪಾಪ್ಯೂಲರ್ ಫ್ರಂಟ್ ಮಡಂತ್ಯಾರು ವಲಯ ಅಧ್ಯಕ್ಷ ಬಿ ಎಮ್ ಅಬ್ದುಲ್ ರಝ್ಝಾಖ್ , ಮಡಂತ್ಯಾರು ಪಂಚಾಯಿತಿಯ ಸದಸ್ಯ ಮುಹಮ್ಮದ್ ಹನೀಫ್ ಮತ್ತು ಅಬ್ದುಲ್ ಖಾಲಿಕ್ ಮುಸ್ಲಿಯಾರ್ ಶುಭ ಹಾರೈಸಿದರು.
ಇಮಾಮ್ಸ್ ಕೌನ್ಸಿಲ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹಾರಿಸ್ ಹನೀಫೀ ಸ್ವಾಗತಿಸಿದರು.
















ಇನ್ನಷ್ಟು ಸುದ್ದಿಗಳು
ವಿದ್ಯಾರ್ಥಿನಿಯರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ನಿರಾಕರಣೆ- ಕ್ರಮ ಕೈಗೊಳ್ಳಲು ಆಗ್ರಹ
ಬೆಳ್ತಂಗಡಿ : ಸಿಎಎ ವಿರುದ್ಧ ಎಸ್ಡಿಪಿಐ ಪ್ರತಿಭಟನೆ
SჄS 30 ನೇ ವಾರ್ಷಿಕ ಸಮ್ಮೇಳನ ದ ಪ್ರಚಾರ: SჄS ಬೆಳ್ತಂಗಡಿ ಝೋನ್ ‘ENARGIZE-2K24’ ಯಶಸ್ವಿ
ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕು- ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಗುರುವಾಯನಕೆರೆ: “ಗಣರಾಜ್ಯ ರಕ್ಷಿಸಿ” ಅಭಿಯಾನದ ಆಝಾದಿ ಎಕ್ಸ್’ಪೋ ಯಶಸ್ವಿ
ಗುರುವಾಯನಕೆರೆ: ಅಜಾದಿ ಎಕ್ಸ್’ ಪೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್: ಕ್ಯಾಂಪಸ್ ಅಸ್ಸೆಂಬ್ಲಿ ಸ್ಲೋಗನ್ ಸ್ಟಡಿ ಕ್ಲಾಸ್
ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ- ನೂತನ ಪದಾಧಿಕಾರಿಗಳು
ಬೆಳ್ತಂಗಡಿ: ಮುಸ್ಲಿಂ ಮುಖಂಡ ಹೈದರ್ ನೀರ್ಸಾಲ್ ನಿಧನ
ಪಿಎಫ್ಐ ಬ್ಯಾಂಕ್ ಖಾತೆ ಮುಟ್ಟುಗೋಲು: ಬೆಳ್ತಂಗಡಿಯಲ್ಲಿ ಕಾರ್ಯಕರ್ತರಿಂದ ಪ್ರತಿಭಟನೆ