ಉಡುಪಿ,ಡಿ.31: ಇಲ್ಲಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ಕಾರಣ ಅವರನ್ನು ತರಗತಿಯಿಂದ ಹೊರ ಹಾಕಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವೀಡಿಯೋ)

ಭಾರತೀಯ ಸಂವಿಧಾನದ 25ನೇ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಮೂಲಭೂತ ಹಕ್ಕುಗಳಾಗಿ ಸೇರಿಸಿದೆ. ಇದರ ಪ್ರಕಾರ ಎಲ್ಲಾ ವ್ಯಕ್ತಿಗಳು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ, ಪ್ರಚಾರ ಮಾಡುವ ಹಕ್ಕನ್ನು ಹೊಂದಿದ್ದಾರೆ. ಇದಲ್ಲದೆ ಎಲ್ಲಾ ಪಂಗಡಗಳು ತಮ್ಮದೇ ಆದ ಧಾರ್ಮಿಕ ನಿರ್ವಹಣೆಯನ್ನು ಮಾಡಬಹುದಾಗಿದೆ ಎಂದು ಸಂವಿಧಾನದ 26 ನೇ ವಿಧಿಯು ಹೇಳುತ್ತದೆ.
ಒಂದು ಮುಸ್ಲಿಂ ಮಹಿಳೆಗೆ ಹಿಜಾಬ್ ಧರಿಸುವುದು ಅವರ ಧಾರ್ಮಿಕ ನಂಬಿಕೆಗಳಲ್ಲಿ ಒಂದಾಗಿದೆ. ಆದರೆ ಈ ಹಕ್ಕನ್ನು ಅವರಿಂದ ಕಸಿದುಕೊಳ್ಳಲಾಗುತ್ತಿದೆ. ಕಾಲೇಜಿನಲ್ಲಿ ಮುಸ್ಲಿಂ ಧರ್ಮವನ್ನು ಅಭ್ಯಸಿಸುವಾಗ ಅದನ್ನು ತಡೆಯಲಾಗತ್ತದೆ. ಆದರೆ ಸಹೋದರ ಧರ್ಮದ ಪೂಜೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ತಡೆ ಇಲ್ಲದೆ ಅದನ್ನು ಶಿಕ್ಷಕರ ನೇತೃತ್ವದಲ್ಲಿ ಮಾಡಲಾಗುತ್ತದೆ.
ಇಂತಹ ಧಾರ್ಮಿಕ ತಾರತಮ್ಯವು ನಡೆಯುತ್ತಿರುವುದಾಗಿ ಆಕ್ಷೇಪ ಕೇಳಿ ಬಂದಿದೆ. ಬಹುಮುಖ್ಯವಾಗಿ ವಿದ್ಯಾರ್ಥಿನಿಯರು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದರು. ಆದರೆ ಇದೀಗ ಶಿಕ್ಷಕ ವೃಂದದ ಕೆಲವೊಬ್ಬರು ಹಿಜಾಬ್ ಧರಿಸಿವುದನ್ನು ತಡೆಯುತ್ತಿದ್ದಾರೆ ಹಾಗೂ ತರಗತಿಗೆ ಪ್ರವೇಶಿಸಲು ನಿರಾಕರಿಸುತ್ತಿದ್ದಾರೆ. ಆ ವಿದ್ಯಾರ್ಥಿನಿಯರ ಪೋಷಕರು ಇದರ ಕುರಿತು ಮಾತನಾಡಲು ಹೋದಾಗ ಅಲ್ಲಿಯ ಪ್ರಾಂಶುಪಾಲರು ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ.
ಕ್ಯಾಂಪಸ್ ಫ್ರಂಟ್ ನ ನಾಯಕರು ತೆರಳಿದಾಗಲೂ ಅಲ್ಲಿಯ ಪ್ರಾಂಶುಪಾಲರು ಲೆಕ್ಕಿಸಲಿಲ್ಲ. ನಿನ್ನೆ ಇದರ ಕುರಿತು ddp ಗೆ ಪತ್ರವನ್ನು ನೀಡಲಾಗಿತ್ತು, ಅಲ್ಲಿ ಅವರು ಈ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂದು ಭರವಸೆ ನೀಡಿದ್ದರು.ಆದರೆ ಇವತ್ತು ಪುನಃ ಆ ವಿದ್ಯಾರ್ಥಿನಿಯರನ್ನು ಇದೇ ಕಾರಣಕ್ಕೆ ತರಗತಿಯಿಂದ ಹೊರ ಹಾಕಿದ್ದಾರೆ.
ಈ ತಾರತಮ್ಯ ನೀತಿಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತಿದೆ. ಅಲ್ಲದೇ, ಅಲ್ಲಿಯ ಪ್ರಾಂಶುಪಾಲರನ್ನು ಅಮಾನತುಗೊಳಿಸಬೇಕು ಹಾಗೂ ಆ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.

















ಇನ್ನಷ್ಟು ಸುದ್ದಿಗಳು
ಸುನ್ನೀ ಕೋ-ಓಡಿನೇಶನ್ ವತಿಯಿಂದ ಎಮ್ ಎ ಗಫೂರ್ ರವರಿಗೆ ಸನ್ಮಾನ
ಉಡುಪಿಯಲ್ಲಿ : ಎಸ್ ವೈ ಎಸ್ ‘ಸೌಹಾರ್ದ ಸಂಚಾರ’
ನಮ್ಮ ನಾಡ ಒಕ್ಕೂಟ: ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸಹಾಯಧನ ವಿತರಣೆ
ಎನ್.ಎನ್.ಓ ಉಡುಪಿ ಜಿಲಾ ಸಮಿತಿ: ಕಟ್ಟಡ ದಾನಿಗೆ ಸನ್ಮಾನ
ಉಡುಪಿ: ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಸಹಾಯಧನ ಹಸ್ತಾಂತರ
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಪದಗ್ರಹಣ ಹಾಗೂ ಸನ್ಮಾನ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪರ್ಕಳ ಹಾಜಿ ಅಬ್ದುಲ್ಲಾ ಸಾಹೇಬರಿಗೆ ಸನ್ಮಾನ
ಖಿದ್ಮಾ ಫೌಂಡೇಶನ್ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿದ ಎನ್.ಎನ್. ಓ ಉಡುಪಿ ಜಿಲ್ಲಾ ನಿಯೋಗ
ನಮ್ಮ ನಾಡ ಒಕ್ಕೂಟ, ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್- ಸಹಾಯಧನ ಹಸ್ತಾಂತರ