ಬೆಳ್ತಂಗಡಿ:- ವಿಶ್ವ ಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ವತಿಯಿಂದ ನಗರದಲ್ಲಿ ನಡೆದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಎಂಬಾಕೆ ಅಝಾನ್ ನ ಅರ್ಥವನ್ನು ದುರ್ವ್ಯಾಖಾನ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿ ಹಿಂದು-ಮುಸ್ಲಿಮರ ನಡುವೆ ಭಿನ್ನತೆಯನ್ನು ಸೃಷ್ಟಿಸಲು ಯತ್ನಿಸಿದರ ವಿರುದ್ಧವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿ FIR ದಾಖಲು ಮಾಡಲಾಗಿದೆ.
ಡಿಸೆಂಬರ್ 13 ರಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಮಂಡಳಿ, ದುರ್ಗಾ ವಾಹಿನಿ ಬೆಳ್ತಂಗಡಿಯಲ್ಲಿ ಆಯೋಜಿಸಿದ್ದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಎಂಬಾಕೆ ಭಾಷಣ ಮಾಡುತ್ತಾ ಅಝಾನ್ ನ ಬಗ್ಗೆ ದುರ್ವಾಖ್ಯಾನ ಮಾಡಿ ಅಝಾನ್ ನಲ್ಲಿ ಕಾಫಿರ್ ಗಳನ್ನು ಅಥವಾ ಮುಸ್ಲಿಮೇತರನ್ನು ಕೊಲ್ಲಿ ಎಂದು ಕರೆ ನೀಡಲಾಗುತ್ತದೆ ಎಂದು ಪ್ರಚೋದನಕಾರಿ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಳು.
ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಹಲವಾರು ಮುಸ್ಲಿಂ ಸಂಘಟನೆಗಳ ಮುಖಂಡರು, ಹಲವು ಮಸೀದಿಗಳ ಸಮಿತಿ ಸದಸ್ಯರು ಪೋಲಿಸ್ ದೂರು ನೀಡಿದ್ದರು, ಈ ದೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯ ಶಬೀರ್ ಎಂಬವರು ನೀಡಿದ ದೂರಿನ ಮೇಲೆ ಬೆಳ್ತಂಗಡಿ ಪೋಲಿಸರು FIR ದಾಖಲಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ವಿದ್ಯಾರ್ಥಿನಿಯರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ನಿರಾಕರಣೆ- ಕ್ರಮ ಕೈಗೊಳ್ಳಲು ಆಗ್ರಹ
ಬೆಳ್ತಂಗಡಿ : ಸಿಎಎ ವಿರುದ್ಧ ಎಸ್ಡಿಪಿಐ ಪ್ರತಿಭಟನೆ
SჄS 30 ನೇ ವಾರ್ಷಿಕ ಸಮ್ಮೇಳನ ದ ಪ್ರಚಾರ: SჄS ಬೆಳ್ತಂಗಡಿ ಝೋನ್ ‘ENARGIZE-2K24’ ಯಶಸ್ವಿ
ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕು- ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ ಕ ಜಿಲ್ಲೆ: 75ನೇ ಸ್ವಾತಂತ್ರ್ಯ ಮಹೋತ್ಸವ ಆಚರಣೆ
ಗುರುವಾಯನಕೆರೆ: “ಗಣರಾಜ್ಯ ರಕ್ಷಿಸಿ” ಅಭಿಯಾನದ ಆಝಾದಿ ಎಕ್ಸ್’ಪೋ ಯಶಸ್ವಿ
ಗುರುವಾಯನಕೆರೆ: ಅಜಾದಿ ಎಕ್ಸ್’ ಪೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್: ಕ್ಯಾಂಪಸ್ ಅಸ್ಸೆಂಬ್ಲಿ ಸ್ಲೋಗನ್ ಸ್ಟಡಿ ಕ್ಲಾಸ್
ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ- ನೂತನ ಪದಾಧಿಕಾರಿಗಳು
ಬೆಳ್ತಂಗಡಿ: ಮುಸ್ಲಿಂ ಮುಖಂಡ ಹೈದರ್ ನೀರ್ಸಾಲ್ ನಿಧನ