janadhvani

Kannada Online News Paper

ಇಸ್ಲಾಮೋಫೋಬಿಯಾ ಹೆಚ್ಚಳ- ಅಮೆರಿಕದಲ್ಲಿ ಮಸೂದೆ ಮಂಡನೆ

ಮುಸ್ಲಿಮರ ಮೇಲಿನ ದೌರ್ಜನ್ಯ ಹೆಚ್ಚಿರುವ ದೇಶಗಳ ಪಟ್ಟಿಯಲ್ಲಿ ಭಾರತ, ಚೀನಾ ಮತ್ತು ಮಯನ್ಮಾರ್ ಮುಂಚೂಣಿಯಲ್ಲಿದೆ.

ವಾಷಿಂಗ್ಟನ್: ಜಾಗತಿಕವಾಗಿ ಹೆಚ್ಚಾಗುತ್ತಿರುವ ಇಸ್ಲಾಮೋಫೋಬಿಯಾ ವಿರುದ್ಧ ಕಾಂಗ್ರೆಸ್ ನ ಇಲ್ದಾನ್ ಉಮರ್ ನೇತೃತ್ವದ 30 ಕ್ಕೂ ಅಧಿಕ ಅಮೆರಿಕ ಸಂಸದರ ಗುಂಪು ತಮ್ಮ ಪ್ರತಿನಿಧಿ ಸಭೆಯಲ್ಲಿ ಮಸೂದೆಯನ್ನು ಮಂಡಿಸಿದೆ.

ಸರ್ಕಾರದ ಇಲಾಖೆಗಳು ತನ್ನ ವಾರ್ಷಿಕ ಮಾನವ ಹಕ್ಕುಗಳ ವರದಿಗಳಲ್ಲಿ ಪ್ರಾಯೋಜಿತ ಇಸ್ಲಾಮೋಫೋಬಿಕ್ ಹಿಂಸಾಚಾರ ಮತ್ತು ನಿರ್ಭಯತೆಯನ್ನು ಸೇರ್ಪಡೆಗೊಳಿಸಲು ಮಸೂದೆ ಆಗ್ರಹಿಸುತ್ತದೆ.

ವಿಶ್ವಾದ್ಯಂತ ಇಸ್ಲಾಮೋಫೋಬಿಯಾವನ್ನು ಎದುರಿಸಲು ಅಮೆರಿಕದ ನಾಯಕತ್ವದಲ್ಲಿ ಒಂದು ಸಮಗ್ರ ಕಾರ್ಯತಂತ್ರವನ್ನು ರೂಪಿಸಬೇಕು. ಈ ಮಧ್ಯೆ ಇಸ್ಲಾಮೋಫೋಬಿಯಾವನ್ನು ಮೇಲ್ವಿಚಾರಣೆ ಮಾಡಲು ಮತ್ತು ಎದುರಿಸಲು ವಿದೇಶಾಂಗ ಇಲಾಖೆಯು ವಿಶೇಷ ರಾಯಬಾರಿಯನ್ನು ರಚಿಸಬೇಕು ಎಂದು ಮಸೂದೆ ಹೇಳುತ್ತದೆ.

ಮುಸ್ಲಿಮರ ಮೇಲಿನ ದೌರ್ಜನ್ಯ ಹೆಚ್ಚಿರುವ ದೇಶಗಳ ಪಟ್ಟಿಯಲ್ಲಿ ಭಾರತ, ಚೀನಾ ಮತ್ತು ಮಯನ್ಮಾರ್ ಮುಂಚೂಣಿಯಲ್ಲಿದೆ.ಭಾರತೀಯ ಸಂವಿಧಾನವು ತನ್ನ ಅಲ್ಪಸಂಖ್ಯಾತ ಸಮುದಾಯಗಳು ಸೇರಿದಂತೆ ಎಲ್ಲಾ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ ಎಂದು ಅದು ಹೇಳಿದೆ.

ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಸಂವಿಧಾನವನ್ನು ಒಳಗೊಂಡ ಒಂದು ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಭಾರತ ಎಂಬುದು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ,ಪ್ರಜಾಪ್ರಭುತ್ವದ ಆಡಳಿತ ಮತ್ತು ಕಾನೂನಿನ ನಿಯಮವು ಮೂಲಭೂತ ಹಕ್ಕುಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ರಕ್ಷಿಸುತ್ತದೆ ಎಂದು MEA ಸಮರ್ಥಿಸಿಕೊಂಡಿದೆ.

ಕಾಂಗ್ರೆಸ್ ನ ಉಮರ್, “ನಾವು ಜಗತ್ತಿನ ಪ್ರತಿಯೊಂದು ಮೂಲೆಯಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಳವನ್ನು ಗಮನಿಸುತ್ತಿದ್ದೇವೆ’ ಎಂದು ಹೇಳಿದರು. ಹಿಂಸಾತ್ಮಕ ಇಸ್ಲಾಮೋಫೋಬಿಯಾದ ಘಟನೆಗಳಲ್ಲಿ ದಿಗ್ರಮಗೊಳಿಸುವ ಏರಿಕೆ ಕಂಡುಬಂದಿದೆ ಎಂದು ಅವರ ಕಚೇರಿಯಿಂದ ಪತ್ರಿಕಾ ಹೇಳಿಕೆ ತಿಳಿಸಿದೆ.

ಚೀನಾದಲ್ಲಿ ಉಯಿಘರ್ಗಳು ಮತ್ತು ಬರ್ಮಾ (ಮಯನ್ಮಾರ್) ನಲ್ಲಿ ರೋಹಿಂಗ್ಯಾಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳಾಗಲಿ, ಭಾರತ ಮತ್ತು ಶ್ರೀಲಂಕಾದಲ್ಲಿ ಮುಸ್ಲಿಂ ಜನಸಂಖ್ಯೆಯ ಮೇಲಿನ ದಮನಗಳು, ಮುಸ್ಲಿಂ ನಿರಾಶ್ರಿತರು ಮತ್ತು ಹಂಗೇರಿ ಮತ್ತು ಪೋಲೆಂಡ್ನಲ್ಲಿ ಇತರ ಮುಸ್ಲಿಮರನ್ನು ಬಲಿಪಶು ಮಾಡುವುದು ನ್ಯೂಜಿಲ್ಯಾಂಡ್ ಮತ್ತು ಕೆನಡಾದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂಸೆ, ಅಥವಾ ಪಾಕಿಸ್ತಾನ, ಬಹ್ರೇನ್ ಮತ್ತು ಇರಾನ್ ನಂತಹ ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮೋಫೋಬಿಯಾ ಸಮಸ್ಯೆ ಜಾಗತಿಕ ವ್ಯಾಪ್ತಿಯಲ್ಲಿದೆ ಎಂದು ಅದು ಹೇಳಿದೆ.

ಇಸ್ಲಾಮೋಫೋಬಿಯಾ,ಮುಸ್ಲಿಮರ ಸುರಕ್ಷತೆ ಮತ್ತು ಭದ್ರತೆಗೆ ಬೆದರಿಕೆಯಾಗುವುದು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ತತ್ವಗಳಿಗೂ ಅಪಾಯವಾಗಿದೆ.

error: Content is protected !! Not allowed copy content from janadhvani.com