janadhvani

Kannada Online News Paper

ಎಸ್ಸೆಸ್ಸೆಫ್ ಕಿನ್ಯಾ ಸೆಕ್ಟರ್ : ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಉಳ್ಳಾಲ: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನಿರ್ದೇಶನದಂತೆ ಇಂಧನ ಹಾಗೂ ಇನ್ನಿತರ ಸಾಮಗ್ರಿಗಳ ಬೆಲೆ ಏರಿಕೆ ವಿರುದ್ದ ಕಿನ್ಯ ಸೆಕ್ಟರ್ ನಲ್ಲಿ ಪ್ರತಿಭಟನೆಯು ಬೆಳೆರಿಂಗೆ ಜಂಕ್ಷನ್ ನಲ್ಲಿ ನಡೆಯಿತು.

ಪ್ರತಿಭಟನೆಯನ್ನು SSF ಕಿನ್ಯ ಸೆಕ್ಟರ್ ಅಧ್ಯಕ್ಷರಾದ ನೌಫಲ್ ಅಹ್ಸನಿ ದುಆ ಮಾಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕಿನ್ಯ ಸೆಕ್ಟರ್ ಕಾರ್ಯದರ್ಶಿ ಇರ್ಫಾನ್ ಮುಸ್ಲಿಯರ್ ಉದ್ಘಾಟಿಸಿದರು.
ಇಂದನ ಹಾಗು ಇನ್ನಿತರ ಸಾಮಗ್ರಿಗಳ ಬೆಲೆ ಏರಿಕೆಯಿಂದ ಸಾಮಾನ್ಯ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ವಿಷಯದಲ್ಲಿ ಇರ್ಫಾನ್ ಅಬ್ದುಲ್ಲ ನೂರಾನಿ ಹಾಗೂ ಫಾರೂಕ್ ಕಿನ್ಯ ಮಾತನಾಡಿದರು.

ಹಾಗೂ ಕಳೆದ ತಿಂಗಳಿನಿಂದ ಹಲವು ಬಾರಿ ತೈಲ ಬೆಲೆಯೇರಿಕೆ ನಡೆದಿದೆ ಇದರಿಂದ ಸಾಮಾನ್ಯ ವರ್ಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಮುಖ್ಯ ಪ್ರಭಾಷಣದಲ್ಲಿ ಎಸ್.ವೈ.ಎಸ್. ಕಿನ್ಯ ಸೆಂಟರ್ ಕಾರ್ಯದರ್ಶಿ ಮೆಹಬೂಬ್ ಸಖಾಫಿ ಕಿನ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಸುನ್ನಿ ಸಂಘಕುಟುಂಬದ ಹಲವಾರು ನಾಯಕರು ಬಾಗವಹಿಸಿದ್ದರು. ಕೊನೆಯಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಕಿನ್ಯ ಧನ್ಯವಾದಗೈದರು.

error: Content is protected !! Not allowed copy content from janadhvani.com