janadhvani

Kannada Online News Paper

ಸಹಾಯ್ ವಿಟ್ಲ ಸರ್ಕಲ್- ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಉದ್ಘಾಟನೆ

ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ SჄS.SSF.KCF ಕಾರ್ಯಕರ್ತರನ್ನೊಳಗೊಂಡ ತುರ್ತು ಸೇವಾ ತಂಡ “ಸಹಾಯ್” ವತಿಯಿಂದ ರಾಜ್ಯಾದ್ಯಂತ ನಡೆಯುವ ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ” ಸಹಾಯ್ ಸ್ವಚ್ಛತಾ ಅಭಿಯಾನದ ಅಂಗವಾಗಿ. ಸಹಾಯ್ ತುರ್ತು ಸೇವಾ ತಂಡ ವಿಟ್ಲ ಸರ್ಕಲ್ ವತಿಯಿಂದ. ಡ್ಯೆರೆಕ್ಟರ್
ಇಸ್ಮಾಯಲ್ ಮಾಸ್ಟರ್ ಮಂಗಿಲಪದವು ಅವರ ನೇತೃತ್ವದಲ್ಲಿ ವಿಟ್ಲ ಸರ್ಕಲ್ ವ್ಯಾಪ್ತಿಯ ಸ್ವಚ್ಛತಾ ಅಭಿಯಾನದ ಉದ್ಘಾಟನೆ ನಡೆಯಿತು.

ವಿಟ್ಲ ನಾಡಕಚೇರಿ ಪೊಲೀಸ್ ಠಾಣೆ ಗ್ರಾಮಕರಣಿಕರ ಕಚೇರಿ ಸಬ್ ರಿಜಿಸ್ಟರ್ ಕಚೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಧಾರ್ಮಿಕ ಕೇಂದ್ರಗಳು ಸೇರಿದಂತೆ ವಿಟ್ಲ ಪಟ್ಟಣ ಪರಿಸರದಲ್ಲಿ. ಶುಚೀಕರಣ ಮಾಡುವ ಮೂಲಕ. ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ” ಸಹಾಯ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸ್ವಚ್ಛತಾ ಕಾರ್ಯಕ್ರಮವನ್ನು ಸಾರ್ವಜನಿಕರು ವರ್ತಕರು ಹಾಗೂ ಅಧಿಕಾರಿಗಳು ತುಂಬು ಹೃದಯದಿಂದ ಪ್ರಶಂಸಿಸಿದರು, ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡಕ್ಕೆ ವಿಟ್ಲ ಸಬ್ ರಿಜಿಸ್ಟರ್ ಕಚೇರಿ ಅಧಿಕಾರಿಗಳಾದ ಬಾಲಕೃಷ್ಣ ಅವರು ಕೃತಜ್ಞತೆ ಹೇಳಿ ನಗದು ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸಿದರು, ಹಾಗೂ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್ ಎಚ್ ಅವರು. ನೀವು ನಡೆಸುತ್ತಿರುವಂತಹ ಸಮಾಜಸೇವಾ ಕಾರುಣ್ಯ ಚಟುವಟಿಕೆಗಳು ಶ್ಲಾಘನೀಯವಾಗಿದೆ ಎಂದು ಹೇಳಿ ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡವನ್ನು ಅಭಿನಂದಿಸಿದರು.

ವರದಿ : D.A ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com