ತನಗೆ ದೇವರು ಆಸ್ತಿ, ಐಶ್ವರ್ಯ, ಸಂಪತ್ತು ಎಲ್ಲವನ್ನೂ ಕೊಟ್ಟಿದ್ದಾರೆ ಆದರೂ ಈ ಇಳಿವಯಸ್ಸಿನಲ್ಲೂ ಜನ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ವೈದ್ಯ ಲೋಕದ ಮಾಣಿಕ್ಯನೇ ವಿರಾಜಪೇಟೆಯ ಡಾ: ಐ ಆರ್ ದುರ್ಗಾ ಪ್ರಸಾದ್. ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ದುರ್ಗಾ ಪ್ರಸಾದ್ ಅವರಿಂದ ಚಿಕಿತ್ಸೆ ಪಡೆಯದವರು ವಿರಳ ಹಾಗೂ ರೋಗಿಗಳೊಂದಿಗೆ ಅವರಿಗಿರುವ ಒಡನಾಟ ಮೆಚ್ಚುವಂತದ್ದು,ಇದನ್ನು ಮನಗಂಡ ವಿರಾಜಪೇಟೆ ಸೆಂಟರ್ ಎಸ್ ವೈ ಎಸ್ ಹಿಸಾಬ ತಂಡವು ಕೊರೋನ ಮುನ್ನೆಚ್ಚರಿಕೆಯೊಂದಿಗೆ ಡಾಕ್ಟರ್ ದುರ್ಗಾ ಪ್ರಸಾದ್ ಅವರುಗಳನ್ನು ಇವತ್ತು ಡಾಕ್ಟರ್ಸ್ ಡೇ ಪ್ರಯುಕ್ತ ಅವರ ಆಸ್ಪತ್ರೇಗೆ ಭೇಟಿ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ವಿರಾಜಪೇಟೆ ಸೆಂಟರ್ ಕಾರ್ಯದರ್ಶಿ ಅಹಮದ್ ಮದನಿ ಉಸ್ತಾದ್ ಸರ್ವರನ್ನು ಸ್ವಾಗತಿಸಿದರು. ಎಸ್ ಎಸ್ ಎಫ್ ಕೊಡಗು ಜಿಲ್ಲಾ ಮಾಜಿ ಕಾರ್ಯದರ್ಶಿ ಉಬೈದ್ ಗ್ಲೋಬಸ್ ಟ್ರಾವಲ್ಸ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಕೊಡಗು ಜಿಲ್ಲಾ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಲ್ಲುಬಾಣೆ, ಇಸ್ಮಾಯಿಲ್ ಹಾಜಿ ಗುಂಡಿಕೆರೆ, ಸೂಫಿ ಕಲ್ಲುಬಾಣೆ, ಕೆ.ಸಿ.ಎಫ್ ಕಾರ್ಯಕರ್ತ ನಝೀರ್ ಹಾಜಿ ಗುಂಡಿಕೆರೆ, ಉಮ್ಮರ್ ಕಲ್ಲುಬಾಣೆ, ಹಿಸಾಬ ಅಮೀರ್ ಶರೀಫ್ ಝೈನಿ ಎಡಪಲ,ಸಾಮಾಜಿಕ ಕಾರ್ಯಕರ್ತ ಹಮೀದ್ ಗುಂಡಿಕೆರೆ ಮುಂತಾದವರು ಭಾಗವಹಿಸಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಡಾಕ್ಟರ್ಸ್ ಡೇ ಯ ಪ್ರಯುಕ್ತ SSF, SYS ನ ಎಲ್ಲಾ ರೀತಿಯ ಅಭಿನಂದನೆಗಳನ್ನು ಸಲ್ಲಿಸುತ್ತಾ ಶಫೀಕ್ ಗುಂಡಿಕೆರೆ ಯವರು ಸರ್ವರನ್ನು ವಂದಿಸಿದರು.
ವರದಿ ಶಫೀಕ್ ಗುಂಡಿಕೆರೆ
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ