ಉಪ್ಪಿನಂಗಡಿ ಸುನ್ನೀ ಕೋ-ಆರ್ಡಿನೇಷನ್ ಸಮಿತಿ ವತಿಯಿಂದ ಇದೇ ಬರುವ 2026 ಸಪ್ಟೆಂಬರ್ 17 ಗುರುವಾರ ಸಂಜೆ 4 ಗಂಟೆಗೆ ಸರಿಯಾಗಿ ಉಪ್ಪಿನಂಗಡಿ HM ಹಾಲ್ ಮೈದಾನದಲ್ಲಿ ಬೃಹತ್ ಮೀಲಾದ್ ಕಾನ್ಫರೆನ್ಸ್ ಹಾಗೂ ಮೀಲಾದ್ ರ‌್ಯಾಲಿ ನಡೆಯಲಿದೆ.
ರ‌್ಯಾಲಿಯಲ್ಲಿ ಸಮವಸ್ತ್ರದಾರಿಗಳಾದ ಸೇವಾತಂಡ ಸೇರಿದಂತೆ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬಳಿಕ ವೇದಿಕೆಯಲ್ಲಿ ಮೌಲಿದ್ ಮಜ್ಲಿಸ್‌ಗೆ ಸಯ್ಯಿದ್ ಹಂಝ ತಂಙಳ್ ಕರ್ಪಾಡಿ ನೇತೃತ್ವ ನೀಡಲಿದ್ದು ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ವಳವೂರು ಮುಹಮ್ಮದ್ ಸಹದಿ ಉಸ್ತಾದರ ಅಧ್ಯಕ್ಷತೆಯಲ್ಲಿ ಕಾಸಿಂ ಮದನಿ ಉಸ್ತಾದ್ ಕರಾಯ ಉದ್ಘಾಟನೆ ಮಾಡಲಿದ್ದಾರೆ.
ಚಿಂತಕ ಹಾಗೂ ಖ್ಯಾತ ವಾಗ್ಮಿ ಸುಲೈಮಾನ್ ಸಖಾಫಿ ಮಾಲಿಯೇಕಳ್ ಕೇರಳ ಮುಖ್ಯ ಭಾಷಣ ಹಾಗೂ ಹೈದರ್ ಮದನಿ ಉಸ್ತಾದ್ ಕರಾಯ ಹಿತವಚನ ಮಾಡಲಿದ್ದಾರೆ. ಸಯ್ಯಿದ್ ಶಹೀರ್ ತಂಙಳ್ ಪೋಸೋಟ್ ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದು ಉಪ್ಪಿನಂಗಡಿ ವ್ಯಾಪ್ತಿಯ ಹಲವು ಕಡೆಗಳಿಂದ ಸಾವಿರಾರು ಜನ ಸೇರುವ ಮೀಲಾದ್ ಕಾನ್ಫರೆನ್ಸ್ ಐತಿಹಾಸಿಕಗೊಳಿಸಲು ಈಗಾಗಲೇ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.
ಅಹ್ಲುಸ್ಸುನ್ನದ ಪರಂಪರಾಗತ ಆಶಯಗಳನ್ನು ಪ್ರಚಾರ ಮಾಡುವ ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಹಲವಾರು ಪ್ರಮುಖ ವಿದ್ದಾಂಸರು ಹಾಗೂ ಧಾರ್ಮಿಕ ಶೈಕ್ಷಣಿಕ ಮುಂದಾಳುಗಳು ವಿಶಿಷ್ಟ ಅತಿಥಿಗಳಾಗಿ ಭಾಗವಹಿಸಲಿದ್ದು, SJU, SJM SMA, KMJ, SYS, SSF, ಹಾಗೂ KCF ಸಹಭಾಗಿತ್ವ ದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕೋ-ಆರ್ಡಿನೆಷನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಪ್ರಕಟಣೆಯಲ್ಲಿ ತಿಳಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಚೇರ್ಮಾನ್ ಅಬ್ದುಲ್ ಶುಕೂರು ಮೇದರಬೆಟ್ಟು, ಕನ್ವೀನರ್ ಅಬ್ಬಾಸ್ ಮದನಿ ಬಂಡಾಡಿ, ಕೋ-ಆರ್ಡಿನೇಷನ್ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಬಟ್ಲಡ್ಕ, ಫೈನಾನ್ಸಿಯಲ್ ಕಾರ್ಯದರ್ಶಿ ಅಶ್ರಫ್ ನೀರಕಟ್ಟೆ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ
ಸಾದು ಹಾಜಿ: ಸಾಗ್ ಕುಟುಂಬದ ಪರಂಪರೆಯ ದಾರಿದೀಪ