janadhvani

Kannada Online News Paper

ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ

✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

ಶಾಝಿಮ್, ಶಯಾನ್ ಇಬ್ಬರೂ ಅಣ್ಣ ತಮ್ಮಂದಿರು. ಮದ್ರಸದಲ್ಲಿ ಒಬ್ಬ ಆರನೇ ತರಗತಿಯಾದರೆ ಮತ್ತೊಬ್ಬ ನಾಲ್ಕನೇ ತರಗತಿ.ಈ ವರ್ಷ ಮಕ್ಕಳಿಗೆ ನೀಡುವ ಗೌರವ ಪ್ರಶಸ್ತಿಗೆ ಈ ಇಬ್ಬರು ಅಣ್ಣ ತಮ್ಮಂದಿರು ಆಯ್ಕೆ ಯಾಗಿದ್ದಾರೆ. ಎಲ್ಲಾ ವಕ್ತ್‌ನ ಜಮಾಅತ್ ನಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಮಳೆ ಇರಲಿ, ಬಿಸಿಲೇ ಬರಲಿ. ಇವರು ಜಮಾಅತ್ ನಮಾಝ್ ತಪ್ಪಿಸುವುದಿಲ್ಲ. ಬೆಳಗಿನ ಜಾವ ಆ ಕತ್ತಲಿನಲ್ಲೇ ಸು‌ಬ್‌ಹಿ ಜಮಾಅತ್‌ಗೆ ಬರುತ್ತಾರೆ. ಒಂದು ದಿನವೂ ಸುಬ್‌ಹಿ ಜಮಾಅತ್ ಸಹಿತ ಇತರ ಜಮಾಅತ್ ಗಳನ್ನು ತಪ್ಪಿಸಿದವರಲ್ಲ‌.ರಮಳಾನ್ ಪೂರ್ತಿ ತರಾವೀಹ್ ನಮಾಝ್ ಜಮಾಅತ್ ಆಗಿ ನಿರ್ವಹಿಸಲು ಭಾಗ್ಯ ಸಿಕ್ಕಿದ ಮಕ್ಕಳಿವರು. ಹದ್ದಾದ್‌ ಆರಂಭ ವಾಗುವ ಮೊದಲೇ ಆಗಮಿಸಿ ಉರ್ದಿ ಮುಗಿಸಿಯೇ ಮನೆಗೋಗುತ್ತಿದ್ದರು.‌ಹಾಗಾಗಿ ಅರ್ಹವಾಗಿಯೇ ಇವರನ್ನು ಈ ವರ್ಷದ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮನೆಯಲ್ಲಿ ತಾಯಂದಿರು ಮಕ್ಕಳ ಇಬಾದತ್ ಬಗ್ಗೆ ಹೆಚ್ಚು ಗಮನ‌ ಹರಿಸಿದರೆ ಈ ರೀತಿಯಲ್ಲಿ ಮಕ್ಕಳು ಬೆಳೆದು ಬರುತ್ತಾರೆ. ಇವರು ಮಂಗಳಪೇಟೆಯ ಖ್ಯಾತ ಸಾಹಿತಿ, ಬರಹಗಾರ,ಚಿಂತಕ ಇಸ್ಮಾಯಿಲ್ ನ‌ಈಮಿಯ ತಮ್ಮ ಅಬ್ದುಲ್ ಹಕೀಮ್ ಹಾಗೂ ಶಬನ ದಂಪತಿಗಳ ಪುತ್ರರು. ಅಲ್ಲಾಹನು ಈ ದಂಪತಿಗಳಿಗೆ ಹಾಗೂ ಮಕ್ಕಳಿಗೆ ಬರ್ಕತ್ ನೀಡಲಿ. ಇಹ,ಪರ ದಲ್ಲಿ ಹೆತ್ತವರ ಕಣ್ಮನ ತುಂಬುವ ಮಕ್ಕಳಾಗುವ ಭಾಗ್ಯ ಕರುಣಿಸಲಿ.

ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹ ನೀಡಲು ನಮ್ಮ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ರವರಿಗೆ ತುಂಬಾ ಆಸಕ್ತಿ. ಇದಕ್ಕೂ ಮೊದಲು ಹೆಣ್ಣು ಮಗಳೊಬ್ಬಳಿಗೆ ಚಿನ್ನ ನೀಡಿದ್ದರು. ಕಲಿಯುವುದರಲ್ಲಿ ಹಾಗೂ ಇತರ ಚಟುವಟಿಕೆ ಗಳಲ್ಲಿ ಚುರುಕಾಗಿದ್ದ ವಿದ್ಯಾರ್ಥಿಗೆ ಸೈಕಲ್ ಬಹುಮಾನ ವಾಗಿ ಕೊಟ್ಟಿದ್ದರು. ಇದೀಗ ಹಕೀಮ್ ರವರ ಈ ಇಬ್ಬರು ಮಕ್ಕಳನ್ನು ಗೌರವಿಸಲು ಅವರು ತೀರ್ಮಾನಿಸಿದ್ದಾರೆ. ಮಕ್ಕಳಿಗೆ ಉತ್ತಮ ಭವಿಷ್ಯ ಉಂಟಾಗಲು ಮತ್ತು ಇತರ ಮಕ್ಕಳಿಗೆ ಪ್ರೇರಣೆ ಯಾಗಲು ಹಮೀದಾಕರ ಈ ಪ್ರಯತ್ನ ಖಂಡಿತಾ ಮಾದರಿಯೋಗ್ಯವಾಗಿದೆ.

ಇದನ್ನೂ ಓದಿರಿ...