janadhvani

Kannada Online News Paper

ರಾಜ್ಯಾದ್ಯಂತ ‘ಸಹಾಯ್ ಪಡಿತರ ಕಿಟ್’ ವಿತರಣೆಗೆ ಚಾಲನೆ

ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಪ್ರಾಯೋಜಕತ್ವದಲ್ಲಿ ರಾಜ್ಯಾದ್ಯಂತ ನಡೆಯುವ ಸಹಾಯ್ ಪಡಿತರ ಕಿಟ್ ವಿತರಣೆಗೆ ಚಾಲನೆಯು ಮಂಗಳೂರಿನಲ್ಲಿ ನೀಡಲಾಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆ ವಹಿಸಿದ್ದರು.

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ.ಶೇಕ್ ಬಾವಾ ಅಬೂದಾಬಿ ಸಭೆಯನ್ನು ಉದ್ಘಾಟಿಸಿ, ಸಹಾಯ್ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಸಿಎಫ್ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯಾದ್ಯಂತ ಒಂದು ಸಾವಿರ ಕುಟುಂಬಗಳಿಗೆ ಹತ್ತು ಲಕ್ಷ ರೂಪಾಯಿ ಮೌಲ್ಯದ ಪಡಿತರ ಕಿಟ್ ವಿತರಣೆಯು ಸಹಾಯ್ ಮೂಲಕ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಹಾಯ್ ರಾಜ್ಯ ಪ್ಲಾನಿಂಗ್ ಸೆಲ್ ಚೇರ್ಮೇನ್ ಆಗಿರುವ ಅಬ್ದುಲ್ ಹಮೀದ್ ಬಜ್ಪೆ ಮುನ್ನುಡಿ ಮಾತುಗಳನ್ನಾಡಿದರು.

ಗಣ್ಯ ಅತಿಥಿಗಳಾಗಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಕೆಸಿಎಫ್ ಬಹ್‌ರೈನ್ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ, ಕೆಸಿಎಫ್ ನಾಯಕರಾದ ಫಾರೂಕ್ ಕಾಟಿಪಳ್ಳ, ಹಂಝ ಮೈಂದಾಲ, ಖಲಂದರ್ ಕಬಕ, ಹಬೀಬ್ ಅಡ್ಡೂರು, ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಅಧ್ಯಕ್ಷ ಬಿ.ಎ. ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಪ್ರಧಾನ ಕಾರ್ಯದರ್ಶಿ ಇಕ್ಬಾಲ್, ಸದಸ್ಯರಾದ ಹನೀಪ್ ಬಜ್ಪೆ, ಅದ್ದು ಹಾಜಿ ಪ್ರಿಂಕೆಟ್,ರಶೀದ್ ಹಾಜಿ ಪಾಂಡೇಶ್ವರ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್.ಎಂ ತಂಙಳ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ, ಉಪಾಧ್ಯಕ್ಷ ಅಬ್ಬೋನಾಕ ಮದ್ದಡ್ಕ, ಉಳ್ಳಾಲ ತಾಲೂಕು ಅಧ್ಯಕ್ಷ ಅಲಿಕುಂಞಿ ಪಾರೆ,ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಅನ್ವರ್ ಗೂಡಿನಬಳಿ, ಮೂಡಬಿದ್ರೆ ತಾಲೂಕು ಕಾರ್ಯದರ್ಶಿ ಸಲಾಂ ಮದನಿ, ಸಹಾಯ್ ರಾಜ್ಯ ಪ್ಲಾನಿಂಗ್ ಸೆಲ್ ಕನ್ವೀನರ್ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಸಹಾಯ್ ಜಿಲ್ಲಾ ಕೋಡಿನೇಟರ್ ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್ಸೆಸ್ಸೆಫ್ ರಾಜ್ಯ ನಾಯಕ ಮುಹಮ್ಮದ್ ಅಲಿ ತುರ್ಕಳಿಕೆ ಮುಂತಾದ ನಾಯಕರು ಭಾಗವಹಿಸಿದ್ದರು.
ಸಹಾಯ್ ರಾಜ್ಯ ಕೋಡಿನೇಟರ್ ಅಶ್ರಫ್ ಕಿನಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

error: Content is protected !! Not allowed copy content from janadhvani.com